»   » ಮೇ 30ರ ರವಿ ಹುಟ್ಟುಹಬ್ಬದಂದು ಖಾತ್ರಿಯಾಗಲಿದೆ.

ಮೇ 30ರ ರವಿ ಹುಟ್ಟುಹಬ್ಬದಂದು ಖಾತ್ರಿಯಾಗಲಿದೆ.

Posted By: Super
Subscribe to Filmibeat Kannada

ಈ ತಿಂಗಳ ಕೊನೆಗೆ ಸರ್‌ಪ್ರೆೃಸ್‌ ಸುದ್ದಿಯಾಂದು ಹೊರ ಬೀಳಲಿದೆ ! ಅದು ರವಿಚಂದ್ರನ್‌ ಬರ್ತ್‌ಡೇ ಪ್ರಯುಕ್ತ ಅಭಿಮಾನಿಗಳಿಗೆ ಅವರೇ ಕೊಡಲಿರುವ ಗಿಫ್ಟ್‌. ಅದು ಏನಿರಬಹುದು? ಗುಲ್ಲೆದ್ದಿರುವ ಸುದ್ದಿಗೆ ಕಿವಿಗೊಟ್ಟರೆ, ಉಪೇಂದ್ರ ಹಾಗೂ ರವಿ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಅಂತ ಕೇಳಿಸುತ್ತಿದೆ. ಅದಕ್ಕೆ ದುಡ್ಡು ಹಾಕುವುದು ರವಿಚಂದ್ರನ್‌!

ಏಕಾಂಗಿಯಾಗಿ ಸೋತಿರುವ ರವಿಚಂದ್ರನ್‌ ಈಗ ಲೋಕಾಂಗಿಯಾಗಲೇಬೇಕಾಗಿದೆ. ರೀಮೇಕಾದರೂ ಕೋದಂಡರಾಮ ಗಲ್ಲಾ ತುಂಬಿಸಿದೆ. ಆದರೆ, ಅದು ರವಿಚಂದ್ರನ್‌ ಅವರು ದುಡ್ಡು ಹಾಕಿದ ಸಿನಿಮಾ ಅಲ್ಲ. ರಿಸ್ಕಿಗೆ ಸದಾ ಎದೆಗೊಡುವ ಜಾಯಮಾನದ ರವಿ ಕಂಡುಕೊಂಡಿರುವ ಸತ್ಯವೆಂದರೆ, ಸೋಲಿನ ನಂತರ ಗೆಲುವು ತಮ್ಮ ಕಾಲಿಗೆ ಬಂದು ಬೀಳುತ್ತದೆ. ಉದಾಹರಣೆಗೆ- ಶಾಂತಿ ಕ್ರಾಂತಿ ಸೋತ ಬೆನ್ನಲ್ಲೇ ರಾಮಾಚಾರಿ ಗೆದ್ದ. ಕಲಾವಿದ ಸೋತ ನಂತರವೇ ಪುಟ್ನಂಜ ಉಸಿರಾದ. ಏಕಾಂಗಿ ಸೋತ ಹಿಂದೆಯೇ ಕೋದಂಡರಾಮ ನಕ್ಕ.

ರವಿ ಪುಟಗಳನ್ನು ತಿರುವಿದರೆ ಮತ್ತೊಂದು ಸತ್ಯ ಇಣುಕುತ್ತದೆ. ರವಿ ಜೊತೆ ಇತರೆ ಮೇರು ನಟರು ನಟಿಸಿರುವ ಚಿತ್ರಗಳೂ ಗೆದ್ದಿರುವುದೇ ಹೆಚ್ಚು. ಪ್ರೇಮಲೋಕ, ರಣಧೀರ, ಯಾರೇ ನೀನು ಚೆಲುವೆ, ಸಿಪಾಯಿ, ಇದೀಗ ಕೋದಂಡರಾಮ..ಹೀಗೆ ಉದಾಹರಣೆಗಳು ಸಾಕಷ್ಟು. ಇಡೀ ಉದ್ದಿಮೆಯಲ್ಲಿ ಸಹೃದಯಿ ಎಂಬ ಹೆಸರು ಪಡೆದಿರುವ ತಂತ್ರಜ್ಞಾನ ನಿಪುಣ ರವಿಚಂದ್ರನ್‌ ಜೊತೆ ನಟಿಸಲು ಒಲ್ಲೆ ಅನ್ನುವವರಾರು?

ಈ ಬಾರಿ ರವಿ ಹುಟ್ಟುಹಬ್ಬಕ್ಕೆ ಡ್ರೀಂ ಪ್ರಾಜೆಕ್ಟೊಂದು ಹೊರಬೀಳುವುದು ಗ್ಯಾರಂಟಿಯಂತೆ. ಅದು ರವಿ ಹಾಗೂ ಉಪ್ಪಿ ಜೋಡಿಯ ಹೊಸ ಸಿನಿಮಾವಾ? ಮೇ 30ರವರೆಗೆ ಕಾಯಬೇಕು. ಆದರೆ, ಉಪೇಂದ್ರ ಬಾಲಿವುಡ್‌ಗೆ ಪೇರಿ ಕೀಳುವ ಮಾತಾಡಿದ್ದಾರೆ. ಇಂಥಾದರಲ್ಲೂ ಉಪ್ಪಿಯನ್ನು ಓಲೈಸುವಲ್ಲಿ ರವಿ ಯಶಸ್ವಿಯಾಗುವರೇ? ಅದನ್ನೂ ಕಾದು ನೋಡಬೇಕು.

English summary
Sandalwood sensation : Ravichandran and Upendra combination?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada