»   » ಮೋಹನ್‌ಲಾಲ್‌ ‘ಲವ್‌’ ಕಥನ !

ಮೋಹನ್‌ಲಾಲ್‌ ‘ಲವ್‌’ ಕಥನ !

Posted By: Staff
Subscribe to Filmibeat Kannada

ಕಥೆ ಕೇಳಿದಾಗ ಪಾತ್ರವನ್ನು ನಿರಾಕರಿಸಲು ನನಗೆ ಸಾಧ್ಯವೇ ಆಗಲಿಲ್ಲ ".

ತಮ್ಮ ಪುತ್ರ ಆದಿತ್ಯನಿಗಾಗಿ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ನಿರ್ಮಾಣ-ನಿರ್ದೇಶನದ 'ಲವ್‌" ಚಿತ್ರದಲ್ಲಿನ ಪಾತ್ರವನ್ನು ಒಪ್ಪಿಕೊಂಡ ಬಗ್ಗೆ ಮೋಹನ್‌ಲಾಲ್‌ ಪ್ರತಿಕ್ರಿಯಿಸಿದ್ದು ಹೀಗೆ. ಅಂದಹಾಗೆ, ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ಗೆ 'ಲವ್‌" ಕನ್ನಡದಲ್ಲಿ ಮೊದಲ ಚಿತ್ರ.

ನಾಯಕನಿಗೆಂದು ಪಾತ್ರಗಳನ್ನು ಸೃಷ್ಟಿಸುವುದನ್ನು ನಾನು ಇಷ್ಟಪಡೊಲ್ಲ . ಅಂಥ ತಂತ್ರಗಳಲ್ಲಿ ನನಗೆ ನಂಬಿಕೆಯೂ ಇಲ್ಲ . ಮುಖ್ಯವಾಗಿ ಕಥೆ ಚೆನ್ನಾಗಿರಬೇಕು, ಅಭಿನಯಕ್ಕೆ ಅವಕಾಶವಿರಬೇಕು, ಅಂಥ ಪಾತ್ರಗಳನ್ನು ನಿರಾಕರಿಸುವುದಾದರೂ ಹೇಗೆ ? ಇತ್ತೀಚೆಗೆ ಇಂಡಿಯಾಇನ್ಫೋ ಸಿನಿಮಾ ಪ್ರತಿನಿಧಿಯಾಂದಿಗೆ ಚುಟುಕು ಮಾತಿಗೆ ಕೂತ ಮೋಹನ್‌ಲಾಲ್‌ ತಮ್ಮ ಪ್ರಶ್ನೆ ಮುಂದಿಟ್ಟರು.

ಮಾತು ಹೊರಳಿದ್ದು ಕನ್ನಡ ಚಿತ್ರರಂಗದೊಂದಿಗಿನ ಮೋಹನ್‌ಲಾಲ್‌ ನಂಟಿನ ಬಗ್ಗೆ . ವಿಷ್ಣುವರ್ಧನ್‌ ಹಾಗೂ ಅಂಬರೀಷ್‌ ಜೊತೆ ಒಳ್ಳೆಯ ಗೆಳೆತನವಿದೆ ಎಂದು ಮೋಹನ್‌ಲಾಲ್‌ ನಕ್ಕರು. 'ಚಿತ್ರಂ" ಎನ್ನುವ ಚಿತ್ರದಲ್ಲಿ ಮೋಹನ್‌ ಹಾಗೂ ವಿಷ್ಣು ಒಟ್ಟಾಗಿ ನಟಿಸಿದ್ದಾರೆ. ಭಾರತಿ ವಿಷ್ಣುವರ್ಧನ್‌ ಜೊತೆ ಕೂಡ ಮೋಹನ್‌ಲಾಲ್‌ ನಟಿಸಿದ್ದಾರೆ.

'ಲವ್‌" ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮೋಹನ್‌ಲಾಲ್‌ ಖುಷಿಯಿಂದ ಹೇಳಿಕೊಂಡರು. 'ಲವ್‌"ನಲ್ಲಿ ಅವರದು ಟ್ಯಾಕ್ಸಿ ಡ್ರೆೃವರ್‌ ಪಾತ್ರ. ಬೆಂಗಳೂರಿನಲ್ಲಿನ ಮಲಯಾಳಿ ಕನ್ನಡಿಗರು ಮಾತಾಡುವಂತೆಯೇ ಮೋಹನ್‌ಲಾಲ್‌ ಸಂಭಾಷಣೆ ಒಪ್ಪಿಸಿದ್ದಾರಂತೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂದು ಮೋಹನ್‌ಲಾಲ್‌ ಮೆಚ್ಚಿಕೊಂಡರು. ಅಲ್ಲಿಗೆ ಮಾತು ಮುಗಿಯಿತು.

Post your views

ಮುಖಪುಟ / ಸ್ಯಾಂಡಲ್‌ವುಡ್‌

English summary
Mohanlal speaks on LOVE
Please Wait while comments are loading...