twitter
    For Quick Alerts
    ALLOW NOTIFICATIONS  
    For Daily Alerts

    ಬುಶ್‌ಆಡಳಿತದ ಕತ್ತಲನ್ನು ಬೆತ್ತಲು ಮಾಡಿದ ಮೈಖಲ್‌ಮೂರ್‌ ಚಿತ್ರ

    By Super
    |

    9/11 ಘಟನೆ ಇನ್ನೂ ಮನಸಿನಲ್ಲಿ ಅಚ್ಚೊತ್ತಿದೆ. ಹಾಗಾದರೆ ಅದನ್ನು ಸಮೀಪದಿಂದ ಅನುಭವಿಸಿದವರ ಪಾಡು?

    ಘಟನೆ ನಡೆದ ಬೆರಳೆಣಿಕೆ ದಿನಗಳ ಒಳಗೆ (ಸಪ್ಟಂಬರ 14ರಿಂದ24ರ ಮಧ್ಯೆ)ಅಮೆರಿಕಾದಿಂದ 7 ವಿಮಾನದಲ್ಲಿ 142 ಮಂದಿ ಸೌದಿಯರು ಹೋಗುತ್ತಾರೆ. ದೂರದ ಕಾಶ್ಮೀರದ ವಿಷಯವನ್ನೂ ಬಿಡದ ಅವರ ಗುಪ್ತಚರ ಇಲಾಖೆ, ಎಫ್‌ಬಿಐ ಇದನ್ನು ಪ್ರಶ್ನಿಸುವುದಿಲ್ಲ. ವಿಮಾನದಲ್ಲಿ ಪ್ರಯಾಣಿಸಿದವರು ಮತ್ತ್ಯಾರು ಅಲ್ಲ! ನಂಬರ್‌.1 ಭಯೋತ್ಪಾದಕ ಒಸಾಮಾ ಬಿನ್‌ ಲ್ಯಾಡನ್‌ ಸೋದರ ಸಂಬಂಧಿಕರು.

    ಅಲ್ಲಿಗೆ ಮುಗಿಯಲಿಲ್ಲ ! 9/11ರ ಘಟನೆ ದಿನ ಬೆಳಿಗ್ಗೆ 'ಕಾರ್ಲೈಲ್‌ ಸಮೂಹ' ಕರೆದಿದ್ದ ಏಲಂನಲ್ಲಿ ಲ್ಯಾಡನ್‌ ಸಹೋದರ ಮತ್ತು ಅಮೆರಿಕ ಅಧ್ಯಕ್ಷ ಜಾರ್ಜ್‌ ಬುಶ್‌ ಇಬ್ಬರೂ ಇರುತ್ತಾರೆ. ಇರ್ವರೂ ಅ ಕಂಪೆನಿಯ ಶೇರುದಾರರು. ಅವೆರಡು ಕುಟುಂಬದ ನಡುವಿನ ಕೊಂಡಿ ಜೇಮ್ಸ್‌ ಬಾತ್‌, ಉದ್ಯಮಿ. ಅಂದು 9/11 ಘಟನೆ ನಡೆದ ಬಳಿಕ ಅಧ್ಯಕ್ಷ ಬುಶ್‌ಶಾಲೆಯಾಂದರಲ್ಲಿ ಮಕ್ಕಳ ಜೊತೆಯಿರುತ್ತಾನೆ. ಆತನಿಗೆ ಡಬ್ಲ್ಯುಟಿಒ ಕಟ್ಟಡದ ಮೇಲೆ ದಾಳಿ ನಡೆದ ವಿಷಯ ತಿಳಿಸಿದರೂ... ಆತ ಪಾಠ ಹೇಳುತ್ತಿರತ್ತಾನೆ! The scape goat.

    ಅಮೆರಿಕಾ ಅಧ್ಯಕ್ಷ ಮತ್ತು ಒಸಮಾ ಬಿನ್‌ ಲ್ಯಾಡನ್‌ ಕುಟುಂಬಕ್ಕೆ ಅಷ್ಟು ಹತ್ತಿರದ ನಂಟಿತ್ತೆಂದರೆ ನಂಬುತ್ತೀರಾ? ಅಮೇರಿಕಾವನ್ನು ಪರೋಕ್ಷವಾಗಿ ಆಳುತ್ತಿರುವ ಎಣ್ಣೆ ದೊರೆಗಳಿಗಾಗಿ ಇರಾಕ್‌ ಮೇಲೆ ದಾಳಿ? ಬಿಡಿ, ನೀವು ಹೇಳಿದ್ರೆ ನಂಬಲ್ಲ. ಇವೆಲ್ಲವನ್ನು ವರ್ಣಿಸುವುದು ಅಮೇರಿಕಾದ ಖ್ಯಾತ ನಿರ್ದೇಶಕ ಮೈಖಲ್‌ ಮೂರ್‌ನ ಸಾಕ್ಷ್ಯಚಿತ್ರ "Fahrenheit 9/11"

    ಈ ಚಿತ್ರ ಜೂನ್‌ 25 ಶುಕ್ರವಾರ ಅಮೇರಿಕಾದ್ಯಂತ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ಮೂರ್‌ ಮತ್ತು ಬುಶ್‌ ಕೈ ಹಿಡಿದು ನಡೆಯುವ ದೃಶ್ಯವೇ ಚಿತ್ರದ ಜಾಹೀರಾತು. ಆತನಲ್ಲಿ ಚಿತ್ರದ ಇಂಚು-ಇಂಚು, ಶಬ್ದ-ಅಕ್ಷರಗಳಿಗೆ ನಿಖರ ಸಾಕ್ಷ್ಯವಿದೆಯಂತೆ. ಬುಷ್‌ ಆಡಳಿತದಲ್ಲಿ ಒಳಗೊಂಡ ಅಧಿಕಾರಿಗಳ ಗಂಭೀರ ವ್ಯಂಗ್ಯಗಳು ಚಿತ್ರದ ಹಾಸ್ಯ. 'ಎರುಡು ಗಂಟೆ ಚಿತ್ರ ನೋಡಿದ ಪ್ರೇಕ್ಷಕ ಕಿಚ್ಚು ಹತ್ತಿಸಿಕೊಂಡು ಹೊರಗೆ ಹೋಗುತ್ತಾನೆ ' ಎಂದು ಮೂರ್‌ ಹೇಳುತ್ತಾರೆ.

    ಇಷ್ಟಕ್ಕೂ ದಾಳಿಗೆ ಮುನ್ನ ಬುಷ್‌ಮಾಡಿದ್ದೇನು?. ದಾಳಿಯ ಸುಳಿವು ದೊರೆತ ಸಂದರ್ಭದಲ್ಲಿ ಶೇಕಡಾ 42 ದಿನ ಕಛೇರಿಗೆ ರಜೆ ಹಾಕಿದ್ದು. ಇವೆಲ್ಲ ಯುದ್ಧದ ಮೇಲೆ ಯುದ್ಧ ಸಾರಿದ ಪ್ರಬುದ್ಧನ(?) ಕುರಿತ ಸಾಕ್ಷ್ಯಚಿತ್ರದ ತುಣುಕುಗಳು. 'ಚುನಾವಣೆ ಸಮೀಪಿಸುತ್ತಿರುವ ಕಾರಣ ವೈಯುಕ್ತಿಕ ದಾಳಿ ನಡೆಯುತ್ತಿದೆ' ಎಂಬುದು ಮಾಜಿ ಅಧ್ಯಕ್ಷ , ಬುಶ್‌ ತಂದೆ ಸೀನಿಯರ್‌ಬುಶ್‌ ಚಿತ್ರದ ಕುರಿತು ನೀಡಿದ ವಿವರಣೆ.

    ಇಂತಹದೊಂದು ಚಿತ್ರ ಭಾರತದಲ್ಲಿ ಬರಲು ಸಾಧ್ಯವೇ?. ಸರಕಾರದ ಒಂದು ಹಗರಣವನ್ನು ಬಯಲಿಗೆಳೆದ ತೆಹಲ್ಕಾ ಟೇಪು ನೈಜವಾದುದು ಎಂದು ಸರಕಾರ ಬದಲಾದ ಬಳಿಕ ಸಾಬೀತಾಯಿತು. ಭಾರತೀಯ ಸಾಕ್ಷ್ಯಚಿತ್ರಕಾರ ಆನಂದ್‌ ಪಟವರ್ಧನ್‌ War and Peace ನಿರ್ಮಿಸಿ ಬೆದರಿಕೆ ಎದುರಿಸ ಬೇಕಾಯಿತು. ಇನ್ನೆಷ್ಟೋ ಚಿತ್ರಗಳು ಬಹಿಷ್ಕಾರ, ಬೆದರಿಕೆ, ಗಲಭೆ...ಗೆ ಬಲಿಯಾದವು.

    "Bowling For Columbine" ಅಮೇರಿಕಾದ ಗನ್‌ ಕಲ್ಚರ್‌ ಬಗ್ಗೆ ಮೂರ್‌ ಈ ಹಿಂದೆ ನಿರ್ಮಿಸಿದ ಚಿತ್ರ. ಅಮೆರಿಕನ್ನರು ಹಿಂಸೆಯ ಅಧಿಪತಿಗಳು ಹಾಗೂ ಬಲಿಪಶುಗಳು ಹೇಗಾಗುತ್ತಾರೆ ಎಂಬುದನ್ನು ಚಿತ್ರದಲ್ಲಿ ವರ್ಣಿಸಲಾಗಿದೆ. ಅಂತೆಯೇ 'ಡ್ಯೂಡ್‌ ವೇರ್‌ ಇಸ್‌ ಮೈ ಕಂಟ್ರಿ', 'ಸ್ಟುಪಿಡ್‌ ವೈಟ್‌ ಮ್ಯಾನ್‌' ಮುಂತಾದುವು ಅವರ ಕೃತಿಗಳು. ಅವರ ಎಲ್ಲಾ ಕೃತಿಗಳಲ್ಲಿ (ಚಿತ್ರ, ಪುಸ್ತಕ...) ಸಮಾಜದ ನಿಷ್ಠುರ ಸತ್ಯ ಭಿತ್ತರವಾಗುತ್ತದೆ. ಆತ ಹಿಡಿದ ಹಾದಿಯೇ ಹಾಗೆ...

    ಅಂದ್ಹಾಗೆ! ಚಿತ್ರ ಈಗಾಗಲೇ ಕ್ಯಾನ್‌ ಚಿತ್ರೋತ್ಸವದಲ್ಲಿ 2004ರ 'ಅತ್ಯುತ್ತಮ ಚಿತ್ರ ಪ್ರಶಸ್ತಿ 'ಪಡೆದಿದೆ. ಅಂಕಣಕಾರ ಜೋಗಿಂದರ್‌ಸಿಂಗ್‌ ಅಮೇರಿಕಾ ಶ್ವೇತಭವನದ ಭ್ರಷ್ಟತೆಯ ಕುರಿತು ಹೇಳುತ್ತಾರೆ. ಕಳಂಕಿತರು ಇದ್ದಲ್ಲೇ ಪತ್ತೆದಾರಿಗಳು ಇರಲು ಸಾಧ್ಯವಲ್ಲವೇ?

    English summary
    Micheal Moores Fahrenheit 9/11 is ready to release. Documentary on Bush admin after 9/11
    Sunday, July 28, 2013, 16:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X