»   » ರಾಧಿಕಾ-ದಾಮಿನಿಗೆ ಗುಡ್‌ಲಕ್‌!

ರಾಧಿಕಾ-ದಾಮಿನಿಗೆ ಗುಡ್‌ಲಕ್‌!

Subscribe to Filmibeat Kannada

ಒಂದು ವರ್ಗದ ಪ್ರೇಕ್ಷಕರು, ಬಹುದಿನಗಳಿಂದ ಕಾಯುತ್ತಿದ್ದ ‘ಗುಡ್‌ಲಕ್‌’ ಶುಕ್ರವಾರ ರಾಜ್ಯದೆಲ್ಲೆಡೆ ತೆರೆಕಂಡಿದೆ.

ರಾಧಿಕಾ, ದಾಮಿನಿ ಮತ್ತು ದುರ್ಗಾ ಶೆಟ್ಟಿ ಅವರು ಹಠಕ್ಕೆ ಬಿದ್ದವರಂತೆ ವಸ್ತ್ರ ಧಾರಾಳತನವನ್ನು ಈ ಚಿತ್ರದಲ್ಲಿ ಪ್ರದರ್ಶಿಸಿದ್ದಾರೆ. ಚಿತ್ರದ ಸ್ಟಿಲ್‌ಗಳನ್ನು ಪತ್ರಿಕೆಗಳಲ್ಲಿ ಕಂಡೇ ರಸಿಕಪ್ರಿಯರು ಜೊಲ್ಲು ಸುರಿಸಿದ್ದು ಉಂಟು! ಚಿತ್ರದ ಗೆಲುವಿಗೆ ಈ ನಟಿಮಣಿಯರ ಎದೆಗಾರಿಕೆಯೇ ಕಾರಣವಾದರೂ ಅಚ್ಚರಿಯೇನಿಲ್ಲ!

ತಂಗಿ ಪಾತ್ರಗಳ ಮೂಲಕ, ಮುಗ್ಧತೆಯ ಮೂಲಕ ಅಣ್ಣಂದಿರ ಮನಗೆದ್ದಿದ್ದ ರಾಧಿಕಾ ಮೇಡಂ, ‘ಗುಡ್‌ಲಕ್‌’ನಲ್ಲಿ ತಮ್ಮ ಇನ್ನೊಂದು ಮುಖವನ್ನು ತೋರಿಸಿದ್ದಾರೆ. ಸ್ವಲ್ಪ ಡುಮ್ಮಿಣಿಯಾಗಿದ್ದರೂ ದಾಮಿನಿ, ಪ್ರೇಕ್ಷಕರ ಸೆಳೆಯಲು ಬಹಳ ಶ್ರಮಪಟ್ಟಿದ್ದಾರೆ. ಇಂಥದ್ದೊಂದು ಚಿತ್ರಕ್ಕೆ ರಾಜೇಶ್‌ ರಾಮನಾಥ್‌ ಸಂಗೀತ ನೀಡಿದ್ದು, ಪಿ.ಕೆ.ಎಚ್‌.ದಾಸ್‌ ಛಾಯಾಗ್ರಹಣ ಮಾಡಿದ್ದಾರೆ.

ಇಂದು ‘ಗುಡ್‌ಲಕ್‌’ ತೆರೆಕಾಣುವ ಮೂಲಕ, ಪತ್ರಕರ್ತ ನಂದಕುಮಾರ್‌ರ ಚೊಚ್ಚಲ ಚಿತ್ರ ಕಡೆಗೂ ಜನರನ್ನು ತಲುಪಿದೆ. ಕತೆ, ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆ ಅವರದೇ. ಅನಿರುದ್ಧ, ಅಕ್ಷಯ್‌ ಕೃಷ್ಣ, ತನಿಷಾ ಸಿಂಗ್‌, ಜೈಜಗದೀಶ್‌, ಚಿತ್ರಾ ಶೆಣೈ, ಮೈಖೆಲ್‌ ಮಧು, ಎ.ಟಿ.ರಘು ತಾರಾಬಳಗದಲ್ಲಿದ್ದಾರೆ.

‘ಹೂವಿಗೂ ಹೂವಿನಂಥ ಮನಸ್ಸಿಗೂ... ಗುಡ್‌ಲಕ್‌’ ಎನ್ನುತ್ತದೆ ಚಿತ್ರದ ಜಾಹೀರಾತು. ಯಾರಿಗೆ ಗುಡ್‌ಲಕ್‌ ಎಂಬುದು ಈ ವಾರದಲ್ಲಿಯೇ ಗೊತ್ತಾಗಲಿದೆ!

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada