»   » ತಿಂಗಳ ಕೊನೆಗೆ ಸಾವಿತ್ರಿ, ಗಣೇಶಗೆ ಗಣೇಶನೇ ವೈರಿ!

ತಿಂಗಳ ಕೊನೆಗೆ ಸಾವಿತ್ರಿ, ಗಣೇಶಗೆ ಗಣೇಶನೇ ವೈರಿ!

Subscribe to Filmibeat Kannada


ಸ್ಯಾಂಡಲ್‌ವುಡ್ ಸುದ್ದಿ ಖಜಾನೆ... ಗರಿಗರಿ.. ಪುಡಿಪುಡಿ ಸುದ್ದಿಗಳು...

ಸತ್ಯವಾನ್ ಸಾವಿತ್ರಿ ಚಿತ್ರ ಜೂ.29ರಂದು ಬಿಡುಗಡೆಯಾಗುತ್ತಿದೆ. ಹೀಗಾಗಿ ತಿಂಗಳ ಕೊನೆಯಲ್ಲಿ ನಗೆಹಬ್ಬ! ರಮೇಶ್ ಮ್ಯಾಜಿಕ್ ನೋಡಲು ಕೆಲವು ದಿನಗಳಷ್ಟೇ ಬಾಕಿ ಉಳಿದಿವೆ. ರಮೇಶ್ ಅಂತೂ, ಈ ಚಿತ್ರ ಚೆನ್ನಾಗಿದೆ ಅಂತ ದೇವರ ಮೇಲೆ ಆಣೆ-ಪ್ರಮಾಣ ಮಾಡುತ್ತಿದ್ದಾರೆ.

***

ಗಣೇಶನ ಚಿತ್ರಗಳಿಗೆ ಅವನ ಚಿತ್ರಗಳೇ ವೈರಿಗಳು! ಈಗಾಗಲೇ ಮುಂಗಾರು ಮಳೆ, ಹುಡುಗಾಟಚಿತ್ರಗಳು ತೆರೆಯಲ್ಲಿವೆ. ಈವಾರ ಚೆಲುವಿನ ಚಿತ್ತಾರ ಬಿಡುಗಡೆಯಾಗಿದೆ. ಮೆಜೆಸ್ಟಿಕ್ ತುಂಬ ಗಣೇಶ್ ಚಿತ್ರಗಳೇ.. ಹೀಗಾದರೆ ಕಷ್ಟ..

***

ಸುವರ್ಣ ಹೆಸರಿನ ಕನ್ನಡ ಚಾನೆಲ್ ಕಳೆದ ವಾರವಷ್ಟೇ ಆರಂಭವಾಗಿದೆ. ಇತ್ತೀಚೆಗಷ್ಟೇ ತೆರೆಕಂಡ ಹೊಚ್ಚಹೊಸ ಚಿತ್ರ ಅಮೃತವಾಣಿ , ಶುಕ್ರವಾರ(ಜೂ.22)ಈ ಚಾನೆಲ್ ನಲ್ಲಿ ಪ್ರಸಾರವಾಯಿತು. ಸ್ಪರ್ಧೆ ಜೋರಾಗಿದೆ. ಮುಂದೆ ಹೇಗೋ?

***

ಪಲ್ಲಕ್ಕಿ ಈ ವಾರ ಅರ್ಧ ಸೆಂಚುರಿ ಪೂರೈಸಿದೆ. ಇನ್ನೈವತ್ತು ದಿನ ಓಡಿದರೆ, ನೆನಪಿರಲಿಪ್ರೇಮ್, ಹ್ಯಾಟ್ರಿಕ್ ಹೀರೋ.

***

ಮೀರಾ ಮಾಧವ ರಾಘವ ಹದಿನಾರಣೆ ಕನ್ನಡ ಸಿನಿಮಾ. ಇದು ಅಪ್ಪಟ ಕನ್ನಡಿಗರ ಸಿನಿಮಾ ಎಂದು ನಿರ್ದೇಶಕ ಟಿ.ಎನ್.ಸೀತಾರಾಂ ಘೋಷಿಸಿದ್ದಾರೆ. ಜು.27ಕ್ಕೆ ಚಿತ್ರ ಬಿಡುಗಡೆ. ಹಂಸಲೇಖ ಸಂಗೀತ ಚಿತ್ರದ ವಿಶೇಷ.

***

ತಿಮ್ಮಚಿತ್ರ ತೋಪಾದ ನಂತರ ಸಾಗರ್ ಜೋಡಿಯನ್ನು ನಂಬಿದ್ದ ನಿರ್ಮಾಪಕ ಸಂಪತ್ ಕುಮಾರ್ ಕಂಗೆಟ್ಟಿದ್ದರು. ಈಗ ಮತ್ತೆ ಹೊಸ ಆಸೆಯೊಂದಿಗೆ ಚೆನ್ನ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಜೂನಿಯರ್ ಶಂಕರ್ ನಾಗ್ ದೀಪಕ್ ಚಿತ್ರದ ನಾಯಕ. ರಜನೀಕಾಂತ್ ಆತ್ಮೀಯ ಗೆಳೆಯ ರಾಜಬಹದ್ದೂರ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.

***

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada