»   » ಅನಂತ್ ನಾಗ್ ನಾಯಕತ್ವದಲ್ಲಿ ಸಕತ್ ಕಚಗುಳಿ!

ಅನಂತ್ ನಾಗ್ ನಾಯಕತ್ವದಲ್ಲಿ ಸಕತ್ ಕಚಗುಳಿ!

Subscribe to Filmibeat Kannada


ಈಚೀಚೆಗೆ ಕಾಮಿಡಿ ಟ್ರೆಂಡ್ ಹೆಚ್ಚುತ್ತಿದೆ. ಸತ್ಯವಾನ ಸಾವಿತ್ರಿ, ತಮಾಷೆಗಾಗಿ ನಂತರ ಇನ್ನೊಂದು ಕಾಮಿಡಿ ಸಿನಿಮಾ ಸೆಟ್ಟೇರುತ್ತಿದೆ.ಪ್ರತಿ ರಾತ್ರಿ ಈಟೀವಿಯಲ್ಲಿ 9.30ಕ್ಕೆ ಪ್ರೀತಿ ಇಲ್ಲದ ಮೇಲೆಧಾರಾವಾಹಿ ಮುಖಾಂತರ, ಕಿರುತೆರೆ ವೀಕ್ಷಕರನ್ನು ಅನಂತನಾಗ್ ಮುಖಾಮುಖಿಯಾಗುತ್ತಿದ್ದಾರೆ. ಆದರೂ ಅವರು ಹಿರಿತೆರೆಯನ್ನೂ ಮರೆತಿಲ್ಲ.ಅವರ ಹೊಸ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ.

ದಿನೇಶ್ ಬಾಬು ನಿರ್ದೇಶನದ ಹೊಸ ಕಾಮಿಡಿ ಚಿತ್ರಕ್ಕೆ ಅನಂತನಾಗ್ ನಾಯಕ ನಟರಾಗಿ ಆಯ್ಕೆಯಾಗಿದ್ದಾರೆ. ಕೇವಲ 12ದಿನಗಳಲ್ಲಿ ಚಿತ್ರೀಕರಣ ಮುಗಿಸುವ ಯೋಜನೆಯನ್ನು ದಿನೇಶ್ ಬಾಬು ತಯಾರಿಸಿದ್ದಾರೆ.

ಈ ಹಿಂದೆ ಗಣೇಶ, ನಂತರ ರೋಲ್ ಕಾಲ್ ಮತ್ತು ಗೋಲ್ ಮಾಲ್ ಸರಣಿ ಅನಂತನಾಗ್ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಪ್ರೇಕ್ಷಕರಿಗೆ ಕಚಗುಳಿಯಿಟ್ಟು ಅವರು ನಗಿಸಿದ್ದರು. ತಾವು ಗಂಭೀರ ನಟ ಮಾತ್ರವಲ್ಲ, ಅವಕಾಶ ಸಿಕ್ಕರೇ ಪ್ರೇಕ್ಷಕರು ಬಿದ್ದುಬಿದ್ದು ನಗುವಂತೆ ಮಾಡುತ್ತೇವೆ ಎಂಬುದನ್ನು ಅನಂತನಾಗ್ ಸಿಕ್ಕ ಅವಕಾಶಗಳ ಮುಖಾಂತರ ಸಾಬೀತುಪಡಿಸಿದ್ದಾರೆ.

ಅಮೃತವಾಹಿಣಿ, ನಾನೇನು ಮಾಡ್ಲಿಲ್ಲ, ಚಿಟ್ಟೆ, ಲಾಲಿ ಮತ್ತಿತರ ದಿನೇಶ್ ಬಾಬು ಅವರ ಕನ್ನಡ ಚಿತ್ರಗಳು ಪ್ರೇಕ್ಷಕರ ಮನಗೆದ್ದಿವೆ. ಅನಂತ್ ಮತ್ತು ದಿನೇಶ್ ಜೋಡಿಯ ಕರಾಮತ್ತು ಕಾಣಲು ಪ್ರೇಕ್ಷಕರಂತೂ ಕಾತರಗೊಂಡಿದ್ದಾರೆ. ಫಲಿತಾಂಶ ಕಾದು ನೋಡೋಣ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada