»   » ಸೌಹಾರ್ದ ಸಾಧನೆಗಾಗಿ ದುಬೈನಲ್ಲಿ ಐಐಎಫ್‌ಎ ಸಮಾರಂಭ !

ಸೌಹಾರ್ದ ಸಾಧನೆಗಾಗಿ ದುಬೈನಲ್ಲಿ ಐಐಎಫ್‌ಎ ಸಮಾರಂಭ !

Posted By: Staff
Subscribe to Filmibeat Kannada

ಮುಂಬಯಿ: ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಪ್ರಶಸ್ತಿ ವಿತರಣಾ ಸಮಾರಂಭವು ಮುಂದಿನ ಸಾರಿ ದುಬೈನಲ್ಲಿ ನಡೆಯಲಿದೆ ಎಂದು ಬಿಗ್‌ ಬಿ ಅಮಿತಾಭ್‌ಬಚ್ಚನ್‌ ಹೇಳಿದ್ದಾರೆ.

ಭಾರತೀಯ ಚಲನಚಿತ್ರ ಕ್ಷೇತ್ರ ಮತ್ತು ದುಬೈ ರಾಷ್ಟ್ರದ ನಡುವೆ ಸೌಹಾರ್ದ ಬಾಂಧವ್ಯಕ್ಕೆ, ದುಬೈ ಮಾಧ್ಯಮ ವರ್ಗದ ಸಹಕಾರಕ್ಕೆ ಈ ಸಿನೆಮಾ ಸಮಾರಂಭದಿಂದ ಹೆಚ್ಚಿನ ಉಪಯೋಗವಾಗಲಿದೆ ಎನ್ನುವುದು ಬಚ್ಚನ್‌ ಅಭಿಪ್ರಾಯ. ದುಬೈಗೆ ಮುಂಬಯಿ ಹತ್ತಿರ ಇರುವುದರಿಂದ ಉನ್ನತ ತಂತ್ರಜ್ಞಾನದ ಕೊಡು ಕೊಳ್ಳುವಿಕೆಗೆ, ಉದ್ಯಮದ ಬೆಳವಣಿಗೆಗೂ ಅನುಕೂಲವಾಗಬಹುದು. ದುಬೈ ಮತ್ತು ಯುಎಇ ದೇಶಗಳು ಸುಂದರವಾದ ಶೂಟಿಂಗ್‌ ಲೊಕೇಶನ್‌ಗಳನ್ನು ಒದಗಿಸಬಲ್ಲವು ಎಂಬುದು ಬಚ್ಚನ್‌ ಅವರ ದೂರದ ಲೆಕ್ಕಾಚಾರ.

ಅರೇಬಿಕ್‌ ಸಿನೆಮಾ ಕ್ಷೇತ್ರದೊಂದಿಗೆ ಸೇರಿಕೊಂಡು ಸೃಜನಶೀಲವಾಗಿ ಏನಾದರೂ ಸಾಧನೆ ಮಾಡುವ ಅವಕಾಶ ಇದೆ. ಸಿನೆಮಾ ಪ್ರಶಸ್ತಿ ಪ್ರದಾನ ಸಮಾರಂಭ ಈ ಎಲ್ಲ ಮುಂದಿನ ಅನುಕೂಲಕರ ಬೆಳವಣಿಗೆಗೆ ಒಂದು ನೆಪವಾಗಲಿ ಎಂದು ಬಚ್ಚನ್‌ ಹಾರೈಸಿದರು.

English summary
Dubai may play host to IIFA next year

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada