»   » ವಾಸ್ತು ಪುರುಷನಿಗೆ ದೊಡ್ಡ ಗಾಜನೂರಿನರಾಜ್‌ ಬಂಗಲೆ ಬಲಿ

ವಾಸ್ತು ಪುರುಷನಿಗೆ ದೊಡ್ಡ ಗಾಜನೂರಿನರಾಜ್‌ ಬಂಗಲೆ ಬಲಿ

Posted By: Staff
Subscribe to Filmibeat Kannada

ಬೆಂಗಳೂರು: ದೊಡ್ಡಗಾಜನೂರಿನಲ್ಲಿರುವ ವರನಟ ಡಾ. ರಾಜ್‌ಕುಮಾರ್‌ ಅವರ ತೋಟದ ಮನೆಯನ್ನು ಸಂಪೂರ್ಣ ಕೆಡವಿ ಹಾಕಲಾಗಿದೆ. ಕಾರಣ- ವಾಸ್ತು !

ರಾಜ್‌ಕುಮಾರ್‌ ಅವರ ಹುಟ್ಟೂರಾದ ಗಾಜನೂರಿನ ಈ ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ಕಟ್ಟಲಾಗಿಲ್ಲ. ಆದ್ದರಿಂದಲೇ ರಾಜ್‌ ಅಪಹರಣದಂತಹ ಅನಾಹುತಕಾರೀ ಘಟನೆ ಸಂಭವಿಸಿದೆ ಎಂದು ಜ್ಯೋತಿಷಿಗಳು ಹೇಳಿರುವುದರಿಂದ ಈ ಮನೆಯನ್ನು ಕೆಡವಿ ಹಾಕಲಾಗಿದೆ ಎಂದು ಸನ್‌ ಟೀವಿ ಮಂಗಳವಾರ (ಜುಲೈ 23) ವರದಿ ಮಾಡಿದೆ.

ಬಂಗಲೆಯಂತಿದ್ದ ಬೃಹತ್‌ ಮನೆಯನ್ನು ನೆಲಸಮ ಮಾಡಲಾಗಿದೆ. ಬದಲಿಯಾಗಿ ಆ ಮನೆಯ ಮುಂಭಾಗದಲ್ಲಿ ಇನ್ನೊಂದು ಬೃಹತ್‌ಬಂಗಲೆಯನ್ನು ವಾಸ್ತುಶಾಸ್ತ್ರದ ಪ್ರಕಾರ ಕಟ್ಟಲಾಗಿದೆ. ಆದರೆ ಕೆಡವಲಾದ ಮನೆಯ ಜಾಗವನ್ನು ಮುಂದೆ ಹೇಗೆ ಬಳಸಿಕೊಳ್ಳುವುದು ಎಂಬ ಬಗ್ಗೆ ರಾಜ್‌ಕುಟುಂಬ ಇನ್ನೂ ನಿರ್ಧರಿಸಿಲ್ಲ ಎಂದು ತಿಳಿದು ಬಂದಿದೆ.

ಎರಡು ವರ್ಷಗಳ ಹಿಂದೆ ನರಹಂತಕ ವೀರಪ್ಪನ್‌, ಡಾ. ರಾಜ್‌ಕುಮಾರ್‌ ಅವರನ್ನು ಅವರ ಗಾಜನೂರಿನ ಮನೆಯಿಂದ ಅಪಹರಿಸಿಕೊಂಡು ಹೋಗಿದ್ದ. ಆ ಘಟನೆಯ ನಂತರ ರಾಜ್‌ಕುಮಾರ್‌ ತಮ್ಮ ಹುಟ್ಟೂರಿನ ಮನೆಗೆ ಮತ್ತೆ ಭೇಟಿ ನೀಡಿಲ್ಲ.

(ಇನ್ಫೋ ವಾರ್ತೆ)ಹಿನ್ನೋಟ

English summary
Gajanur house of Rajkumar has been demolished for improper vastu
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada