»   » ವರನಟ ಡಾ.ರಾಜ್‌ಕುಮಾರ್‌ ನನ್ನ ನೆಚ್ಚಿನ ನಟ-ನಾಸಿರುದ್ದೀನ್‌ ಷಾ

ವರನಟ ಡಾ.ರಾಜ್‌ಕುಮಾರ್‌ ನನ್ನ ನೆಚ್ಚಿನ ನಟ-ನಾಸಿರುದ್ದೀನ್‌ ಷಾ

Subscribe to Filmibeat Kannada

ಬೆಂಗಳೂರು : ಕನ್ನಡ ಸಿನಿಮಾಗಳು ನನಗೆ ತುಂಬಾ ಇಷ್ಟ ಹಾಗೂ ವರನಟ ಡಾ.ರಾಜ್‌ಕುಮಾರ್‌ ನನ್ನ ಮೆಚ್ಚಿನ ನಟ ಎಂದು ಬಾಲಿವುಡ್‌ನ ಖ್ಯಾತ ನಟ ನಾಸಿರುದ್ದೀನ್‌ ಷಾ ತಮ್ಮ ಕನ್ನಡಪ್ರೀತಿಯನ್ನು ಬಹಿರಂಗಪಡಿಸಿದರು.

ಕರ್ನಾಟಕದೊಂದಿಗೆ ನನ್ನ ಸಂಬಂಧ ಇಂದಿನದಲ್ಲ . ಪ್ರಾರಂಭದಲ್ಲಿ ನಾನು ಕೂಡ ಕನ್ನಡ ಚಿತ್ರಗಳಲ್ಲಿ ನಟಿಸಿದ್ದೆ ಎಂದು ಶುಕ್ರವಾರ (ಆ.22) ಪತ್ರಕರ್ತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾಸಿರುದ್ದೀನ್‌ ಹೇಳಿದರು. ‘3 ದೀವಾರೆ’ ಚಿತ್ರದ ಯಶಸ್ಸನ್ನು ಹಂಚಿಕೊಳ್ಳಲು ಏರ್ಪಡಿಸಿದ್ದ ಸಂತೋಷಕೂಟದಲ್ಲಿ ನಾಸಿರುದ್ದೀನ್‌ ಮಾತನಾಡುತ್ತಿದ್ದರು.

ಪತ್ರಕರ್ತರೊಂದಿಗಿನ ಸಂವಾದದಲ್ಲಿ ನಾಸಿರುದ್ದೀನ್‌ ಷಾ ಹಲವು ವಿಷಯಗಳನ್ನು ಹಂಚಿಕೊಂಡರು. ಅವುಗಳಲ್ಲಿ ಕೆಲವು :

  • ಬಾಲಿವುಡ್‌ನಲ್ಲಿ ಕೂಡ ಹಾಡುಗಳಿಲ್ಲ ದ ಚಿತ್ರ ಮಾಡುವುದು ಸಾಧ್ಯವಿದೆ. ಆದರೆ ಕಥೆ ಚೆನ್ನಾಗಿರಬೇಕು.
  • ‘3 ದೀವಾರೆ’ ಚಿತ್ರದಲ್ಲಿ ಹಾಡುಗಳಿಲ್ಲ . ನಾಯಕನಿಲ್ಲ , ನಾಯಕಿಯೂ ಇಲ್ಲ . ಹಾಗಾಗಿ ‘3 ದೀವಾರೆ’ ಖಂಡಿತವಾಗಿಯೂ ವಿಭಿನ್ನ ಚಿತ್ರ.
  • ಹಾಡುಗಳಿಲ್ಲದೆ ಚಿತ್ರ ಮಾಡುವುದು ಕಷ್ಟ . ಆದರೆ ಹಾಡುಗಳಿಲ್ಲದೆ ಇರುವುದರಿಂದ ಹಣ ಮಿಗಿಸಬಹುದು.
  • ‘3 ದೀವಾರೆ’ ಚಿತ್ರವನ್ನು ಕೇವಲ 36 ಗಂಟೆಗಳಲ್ಲಿ ಚಿತ್ರೀಕರಿಸಲಾಗಿದೆ.
  • ಅಮಿತಾಬ್‌ ಬಚ್ಚನ್‌ ಹಾಗೂ ಶಬಾನಾ ಅಜ್ಮಿ ಅವರೊಂದಿಗೆ ಸಿನಿಮಾ ಮಾಡುವ ಆಸೆಯಿದೆ.
  • ‘3 ದೀವಾರೆ’ ಚಿತ್ರಕ್ಕೆ ಬೆಂಗಳೂರಿನಲ್ಲಿ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ. ಕನ್ನಡಿಗರಿಗೆ ಧನ್ಯವಾದಗಳು.
(ಇನ್ಫೋ ವಾರ್ತೆ)
Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada