ರಾಜ್, ರಜನಿಕಾಂತ್ ಕಣ್ಣಲ್ಲಿ ‘ಜೋಗಿ’
ಬೆಂಗಳೂರು : ರಾಜ್ಯಾದ್ಯಂತ ಕುತೂಹಲ ಕೆರಳಿಸಿರುವ ‘ಜೋಗಿ’ ಚಿತ್ರದ ವೀಕ್ಷಣೆಗಾಗಿ ಡಾ. ರಾಜ್‌ಕುಮಾರ್ ಮತ್ತು ಖ್ಯಾತ ತಮಿಳು ನಟ ರಜನಿಕಾಂತ್ ನಗರದ ಪಿವಿಆರ್ ಚಿತ್ರಮಂದಿರಕ್ಕೆ ಆಗಮಿಸಿದ್ದರು.
ಕೋರಮಂಗಲದಲ್ಲಿನ ಪಿವಿಆರ್ ಚಿತ್ರಮಂದಿರದಲ್ಲಿ ಈ ಇಬ್ಬರು ಖ್ಯಾತ ನಟರಿಗಾಗಿ ಸೋಮವಾರ ವಿಶೇಷ ಪ್ರದರ್ಶನವನ್ನು ವ್ಯವಸ್ಥೆಗೊಳಿಸಲಾಗಿತ್ತು.
ಡಾ.ರಾಜ್ ಮತ್ತು ರಜನಿಕಾಂತ್ ಅವರು ಪಿವಿಆರ್‌ನ ಗೋಲ್ಡ್ ಕ್ಲಾಸ್‌ನಲ್ಲಿ ಒಟ್ಟಿಗೆ ಕುಳಿತು ಚಿತ್ರ ವೀಕ್ಷಿಸಿದರು. ‘ಜೋಗಿ’ ಚಿತ್ರದ ವೀಕ್ಷಣೆಗಾಗಿಯೇ ಚೆನ್ನೈಯಿಂದ ರಜನಿಕಾಂತ್ ನಗರಕ್ಕೆ ಆಗಮಿಸಿದ್ದರು. ಚಿತ್ರ ವೀಕ್ಷಣೆಯ ನಂತರ ರಾಜ್‌ಕುಮಾರ್, ತಮ್ಮ ಪುತ್ರ ಶಿವರಾಜ್‌ಕುಮಾರ್ ಅವರನ್ನು ಆಲಂಗಿಸಿಕೊಂಡು ಆನಂದ ಭಾಷ್ಪದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೊಂದು ಅದ್ಭುತ ಚಿತ್ರ ಎಂದ ರಜನಿಕಾಂತ್, ಕನ್ನಡದಲ್ಲಿ ಇಂತಹ ಚಿತ್ರ ನೋಡಿದ್ದಕ್ಕೆ ಅತೀವ ಸಂತಸವಾಗಿದೆ. ನಿರ್ದೇಶಕ ಪ್ರೇಮ್, ಕನ್ನಡದ ಮಣಿರತ್ನಂ ಆಗಿದ್ದಾರೆ ಎಂದು ಪ್ರಶಂಸಿದರು.
(ಇನ್ಫೋ ವಾರ್ತೆ)
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications