»   » ಯರವಾಡ ಸೆರೆಮನೆಯಿಂದ ನಟ ಸಂಜಯ ದತ್ ಬಿಡುಗಡೆ

ಯರವಾಡ ಸೆರೆಮನೆಯಿಂದ ನಟ ಸಂಜಯ ದತ್ ಬಿಡುಗಡೆ

Subscribe to Filmibeat Kannada


ಪುಣೆ, ಆಗಸ್ಟ್ 23 : ಬಾಲಿವುಡ್ ನಟ ಸಂಜಯ್ ದತ್ , ಯರವಾಡ ಜೈಲಿನಿಂದ ಗುರುವಾರ ಬೆಳಗ್ಗೆ ಬಿಡುಗಡೆಯಾಗಿದ್ದಾರೆ.

ಮಧ್ಯಂತರ ಜಾಮೀನು ಪಡೆದಿರುವ ಸಂಜಯ್ ಅವರ 22ದಿನಗಳ ಜೈಲುವಾಸ ತಾತ್ಕಾಲಿಕವಾಗಿ ಮುಗಿದಿದೆ. ಪೊಲೀಸರ ಕೈಕುಲುಕಿದ ಸಂಜಯ್, ಬೆಳಗ್ಗೆ 7.30ರ ಸುಮಾರಿಗೆ ಜೈಲಿನಿಂದ ಹೊರಬಂದರು. ಬಿಳಿ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದ ಅವರನ್ನು ಸಂಜಯ್ ಸಂಬಂಧಿ ಕುಮಾರ್ ಗೌರವ್ ಸ್ವಾಗತಿಸಿದರು.

ಅಪಾರ ಸಂಖ್ಯೆಯ ಅಭಿಮಾನಿಗಳು ಜೈಲಿನ ಹೊರಗಡೆ ಸೇರಿದ್ದರು. ಮಾಧ್ಯಮಗಳೊಂದಿಗೆ ಅವರು ಈ ಸಂದರ್ಭದಲ್ಲಿ ಮಾತನಾಡಲಿಲ್ಲ. ಕೂಡಲೇ ಪುಣೆ ವಿಮಾನ ನಿಲ್ದಾಣಕ್ಕೆ ಬಂದು, ಮುಂಬೈ ವಿಮಾನ ಹತ್ತಿದರು.

1993ರ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಸಂಜಯ್ ಮೇಲೆ ಆರೋಪಗಳ ಹೊರಿಸಲಾಗಿತ್ತು. ಅಕ್ರಮವಾಗಿ ಆಯುಧಗಳನ್ನು ಇಟ್ಟುಕೊಂಡ ತಪ್ಪಿಗೆ ಸಂಜಯ್ ಗೆ ಟಾಡಾ ವಿಶೇಷ ನ್ಯಾಯಾಲಯ 6ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜಾಮೀನಿನ ಮೇಲೆ ಸದ್ಯಕ್ಕೆ ಬಿಡುಗಡೆ ಸಿಕ್ಕಿದೆ.

(ಯುಎನ್ಐ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada