»   » ಚಿನ್ನಾರಿ ಮುತ್ತನ ಜೊತೆ ಸ್ಪಂದನಾ ಮದುವೆ ದೂರದಲ್ಲಿಲ್ಲ..

ಚಿನ್ನಾರಿ ಮುತ್ತನ ಜೊತೆ ಸ್ಪಂದನಾ ಮದುವೆ ದೂರದಲ್ಲಿಲ್ಲ..

Posted By:
Subscribe to Filmibeat Kannada


ಬೆಂಗಳೂರು, ಆಗಸ್ಟ್ 23 : ನಟ ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರ ಮದುವೆ ಆಗಸ್ಟ್ 26ರಂದು ನಗರದಲ್ಲಿ ನಡೆಯಲಿದೆ.

ಅರಮನೆ ಮೈದಾನದ ಗಾಯತ್ರಿ ವಿಹಾರ್ ನಲ್ಲಿ ಮದುವೆ ನಡೆಯಲಿದ್ದು, ಚಿತ್ರರಂಗದ ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಡಾ.ಕದ್ರಿ ಗೋಪಾಲ್ ನಾಥ್ ಸ್ಯಾಕ್ಸೋಫೋನ್ ಮತ್ತು ಪಂಡಿತ್ ನರಸಿಂಹ ವಡವತಿ ಕ್ಲಾರಿಯೋನೆಟ್ ಜುಗಲ್ ಬಂದಿಯನ್ನ ಮದುವೆ ಆರತಕ್ಷತೆ ಸಂದರ್ಭದಲ್ಲಿ ಏರ್ಪಡಿಸಲಾಗಿದೆ.

ಬಾಲ ನಟನಾಗಿದ್ದಾಗಲೇ ರಾಷ್ಟ್ರ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆ ಹೊಂದಿರುವ ವಿಜಯ ರಾಘವೇಂದ್ರ, ನಿನಗಾಗಿ ಚಿತ್ರದ ಮುಖಾಂತರ ನಾಯಕ ಸ್ಥಾನಕ್ಕೆ ಮುಂಬಡ್ತಿ ಪಡೆದವರು. ಖುಷಿ, ಕಲ್ಲರಳಿ ಹೂವಾಗಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಆದರೆ ಈಗಲೂ ವಿಜಯ ರಾಘವೇಂದ್ರ ಎಂದರೆ ಚಿನ್ನಾರಿ ಮುತ್ತನೇ ಕಣ್ಣಮುಂದೆ ನಿಲ್ಲುತ್ತಾನೆ.

ಹಿರಿಯ ಪೊಲೀಸ್ ಅಧಿಕಾರಿ(ಎಸಿಪಿ) ಬಿ.ಕೆ.ಶಿವರಾಂ ಅವರ ಪುತ್ರಿ ಸ್ಪಂದನಾ ಮತ್ತು ವಿಜಯ ರಾಘವೇಂದ್ರ ಅವರ ನಡುವಿನ ಪ್ರೇಮ, ಮದುವೆ ವರೆಗೆ ಬಂದಿದೆ ಎನ್ನಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada