»   » ಪತಿಯ 60ನೇ ಬರ್ತಡೇಗೆ ಜಯಾ ಬಚ್ಚನ್‌ರ ಅನನ್ಯ ಗಿಫ್ಟ್‌

ಪತಿಯ 60ನೇ ಬರ್ತಡೇಗೆ ಜಯಾ ಬಚ್ಚನ್‌ರ ಅನನ್ಯ ಗಿಫ್ಟ್‌

By: * ಸುಘೋಷ್‌, ಮುಂಬಯಿ
Subscribe to Filmibeat Kannada

ತಮ್ಮ ಗಂಡನ ಅರುವತ್ತನೇ ಹುಟ್ಟುಹಬ್ಬಕ್ಕೆ ಹಿರಿಯ ನಟಿ ಜಯಾ ಬಚ್ಚನ್‌ ಕೊಡಲಿರುವ ಉಡುಗೊರೆ ಏನು?ಕಾರು, ತಾವೇ ವಿನ್ಯಾಸ ಮಾಡಿದ ಬಟ್ಟೆ, ಹೊಸ ಬಂಗಲೆ...ಈ ಪೈಕಿ ಯಾವುದೂ ಅಲ್ಲ. ಅಮಿತಾಬ್‌ ಜೀವನ ಗಾಥೆಯನ್ನು ಪುಂಖಾನುಪುಂಖ ಬಿಚ್ಚಿಡುವ 400 ಪುಟಗಳ ಪುಸ್ತಕ !ಬರುವ ಅಕ್ಟೋಬರ್‌ 11ಕ್ಕೆ ಸರಿಯಾಗಿ ಅಮಿತಾಬ್‌ಗೆ 60 ವರ್ಷ ತುಂಬುತ್ತದೆ. ಷಷ್ಠ್ಯಬ್ಧಿ ಮಾಡಿಕೊಳ್ಳುವ ವಯಸ್ಸು. ಆ ಸಂದರ್ಭದಲ್ಲಿ ಎಂದೂ ಮರೆಯಬಾರದ ಉಡುಗೊರೆ ಕೊಡುವುದು ಜಯಾ ಕನಸು. ಇದನ್ನು ನನಸಾಗಿಸಲು ಏಳು ತಿಂಗಳಿಂದ ಅವಿರತವಾಗಿ ಕೆಲಸ ಮಾಡಿದ್ದಾರೆ. ಬನ್ನಿ, ಅವರನ್ನೇ ಮಾತಾಡಿಸೋಣ...

ಜಯಾ ಅವರೇ, ಈ ಯೋಚನೆ ಹೇಗೆ ಬಂತು?
ನನ್ನ ಮಾವ (ಅಮಿತಾಬ್‌ ತಂದೆ) ಶೇಕ್ಸ್‌ಪಿಯರನ ಹ್ಯಾಮ್ಲೆಟ್ಟನ್ನು ಹಿಂದಿಗೆ ಅನುವಾದಿಸಿದರು. ಸಾಹಿತ್ಯದಲ್ಲಿ ಅವರ ಬಲು ಆಸಕ್ತಿ. ಅಮಿತಾಬ್‌ಗೂ ಕೂಡ ಪುಸ್ತಕದ ಗೀಳಿದೆ. ಹೀಗಾಗಿ ಅವರ ಜೀವನದ, ಸಾಧನೆಯ ಹಾದಿಯನ್ನೇ ಯಾಕೆ ಪುಸ್ತಕ ಮಾಡಬಾರದು ಅನಿಸಿತು. ಮಕ್ಕಳ ಜೊತೆ ಮಾತಾಡಿದೆ. ಅವರೂ ಗುಡ್‌ ಐಡಿಯಾ ಅಂದರು.

ಪುಸ್ತಕದಲ್ಲಿ ಏನೇನಿದೆ?
ಮಗ ಅಭಿಷೇಕ್‌ ಮತ್ತು ಮಗಳು ಶ್ವೇತಾ ಅಪ್ಪನ ಕುರಿತು ಒಂದೊಂದು ಅಧ್ಯಾಯ ಬರೆದಿದ್ದಾರೆ. ಪುಸ್ತಕದಲ್ಲಿ ಒಟ್ಟು 800 ಸುಂದರ ಫೋಟೋಗಳಿವೆ. ಮುಂದಿನ ಮರಾಳೆಯಲ್ಲಿ ಈಗಿನ ಅಮಿತಾಬ್‌, ಹಿಂದಿನ ಮರಾಳೆಯಲ್ಲಿ ಹಳೆಯ ಅಮಿತಾಬ್‌... ಹೀಗೆ ಫೋಟೋಗಳು ಅವರ ಜೀವನದ ಘಟ್ಟಗಳನ್ನು ತೋರುವಂತಿವೆ. ಸಿನಿಮಾ ವಿಮರ್ಶಕ ಖಾಲಿದ್‌ ಮೆಹ್ಮೂದ್‌ ಅಮಿತಾಬ್‌ ಸಿನಿಮಾದ ಪೂರ್ಣಾವಲೋಕನ ಬರೆದಿದ್ದಾರೆ. ಜೊತೆಗೆ ಅವರ ಸುದೀರ್ಘ ಸಂದರ್ಶನವನ್ನೂ ಬರೆದಿದ್ದಾರೆ. ಪುಸ್ತಕದ ಪ್ರಕಟಣೆ, ವಿನ್ಯಾಸದ ಜವಾಬ್ದಾರಿಯನ್ನೂ ಅವರಿಗೇ ವಹಿಸಿದ್ದೇನೆ.

ಅಮಿತಾಬ್‌ಗೆ ಈ ಪುಸ್ತಕದ ವಿಷಯ ಗೊತ್ತ ?
ಅವರೂ ಒಂದು ಲೇಖನ ಬರೆದಿದ್ದಾರೆ :) ಇದೇನೂ ಸಪ್ರೆೃಸ್‌ ಅಲ್ಲ.

ಪುಸ್ತಕ ಯಾವತ್ತು ಬಿಡುಗಡೆಯಾಗುತ್ತೆ?
ಅವರ ಹುಟ್ಟುಹಬ್ಬದ ದಿನದಂದೇ.

ಪುಸ್ತಕ ರಚನೆಯ ಹಿಂದೆ ಇನ್ನೇನಾದರೂ ಉದ್ದೇಶ ಇದೆಯಾ?
ನಮ್ಮ ಯಜಮಾನರ ಕುರಿತು ಇರುವ ಕೆಲವು ತಪ್ಪು ಭಾವನೆಗಳಿಗೆ ಈ ಪುಸ್ತಕ ಉತ್ತರ ಕೊಡಲಿದೆ. ಮೂಲತಃ ಸಂಕೋಚ ಸ್ವಭಾವದವರಾದ ಅಮಿತಾಬ್‌ ಒಳತೋಟಿಗಳು ಜನರಿಗೆ ಗೊತ್ತಾಗುತ್ತದೆ.

ಅಂದಹಾಗೆ, ಸ್ಟಾರ್‌ ಟಿವಿ ಮೂಲಗಳ ಪ್ರಕಾರ ಸದ್ಯದಲ್ಲೇ 'ಕೌನ್‌ ಬನೇಗಾ ಕರೋಡ್‌ಪತಿ' ಕಾರ್ಯಕ್ರಮ ಮತ್ತೆ ಶುರುವಾಗಲಿದೆ. ಅಮಿತಾಬ್‌ ಬಚ್ಚನ್‌ 'ಲಾಕ್‌ ಕಿಯಾ ಜಾಯ್‌' ಅಂತ ಕೇಳಲಿದ್ದಾರೆ !

English summary
Jaya Bacchan to bring a book on Amitabh as his 60th birthday gift
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada