»   » ರಮ್ಯಾ ಎಂದರೆ ಬಿಸಿ ಬಿಸಿ ಬಿಸಿ!

ರಮ್ಯಾ ಎಂದರೆ ಬಿಸಿ ಬಿಸಿ ಬಿಸಿ!

Subscribe to Filmibeat Kannada

*ದಟ್ಸ್‌ ಕನ್ನಡ ಬ್ಯೂರೊ

‘ಅಭಿ’ ಚಿತ್ರದ ಮೂಲಕ ಹೀರೋಯಿನ್‌ ಪಟ್ಟ ಹತ್ತಿ ಕುಳಿತ ಹುಡುಗಿ ರಮ್ಯಾ ಗೊತ್ತಲ್ಲಾ ?

ಕನ್ನಡದಲ್ಲಿ ನಂಬರ್‌ ವನ್‌ ಪಟ್ಟಕ್ಕೆ ಸ್ಪರ್ಧೆ ಚಾಲ್ತಿಯಲ್ಲಿರುವಾಗ, ಅತ್ತಲಿಂದ ‘ಅಪ್ಪು’ ಚಿತ್ರದ ಮೂಲಕ ರಕ್ಷಿತಾ ಅಂತ ನಾಮಕರಣ ಮಾಡಿಸಿಕೊಂಡು ಬಂದ ಶ್ವೇತಾ ಒಂದು ಕಡೆಯಾದರೆ, ಇತ್ತ ‘ಅಭಿ’ ಚಿತ್ರದ ಮೂಲಕ ರಮ್ಯಾ ಎಂಬ ಹೆಸರು ಗಿಟ್ಟಿಸಿಕೊಂಡು ಬಂದ ಸ್ಪಂದನಾ ಇನ್ನೊಂದು ಕಡೆ.

ಸದ್ಯದಲ್ಲೇ ರಮ್ಯಾಳ ಹೊಸ ಚಿತ್ರ ‘ಎಕ್ಸ್‌ಕ್ಯೂಸ್‌ ಮಿ’ ಬಿಡುಗಡೆಯಾಗಲಿದೆ. ಆದರೆ ವಿಶೇಷ ಎಂದರೆ ರಮ್ಯಾಗೆ ನಂಬರ್‌ ವನ್‌ ಸ್ಥಾನಕ್ಕೆ ಸ್ಪರ್ಧಿಸುವ ಆಸೆಯಿಲ್ಲವಂತೆ. ‘ನಂಬರ್‌ ವನ್‌ ಆಗಬೇಕಿದ್ದರೆ ಸ್ಪರ್ಧೆ ಇದ್ದೇ ಇರುತ್ತದೆ. ಆದರೆ ನನ್ನ ಅಭಿನಯ ಸಾಮರ್ಥ್ಯವೇ ನನ್ನ ಸ್ಥಾನವನ್ನು ನಿರ್ಧರಿಸುತ್ತದೆ ’ ಎಂದು ನಿಷ್ಠುರವಾಗಿ ಹೇಳುವ ರಮ್ಯಾ ತನ್ನ ಆತ್ಮವಿಶ್ವಾಸದ ಮಾತುಗಳಿಂದಲೇ ಕನ್ನಡ ಸಿನೆಮಾ ಕ್ಷೇತ್ರದವರ ಮನ ಗೆದ್ದಿದ್ದಾಳೆ.

ಈ ಸುಂದರಿಯ ಬಗ್ಗೆ ಬೇರೆಯವರು ಏನಂತಾರೆ ಎಂಬ ಕುತೂಹಲಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್‌ರನ್ನು ಮಾತನಾಡಿಸಿದರೆ- ‘ಆಕೆ ಹತ್ತಿರ ಬಂದರೆ ಸಡನ್‌ ಆಗಿ ನನ್ನ ಟೆಂಪರೇಚರ್‌ ಏರುವುದನ್ನು ಗಮನಿಸಿದ್ದೇನೆ. ಹಾಗಾದಾಗ ನಾನು ಸಿಕ್ಕಾಪಟ್ಟೆ ಬೆವರುತ್ತೇನೆ. ರಮ್ಯಾ ಎಂದರೆ ಅಷ್ಟು ಬಿಸಿ ಬಿಸಿ !’ ಗುರುಕಿರಣ್‌ ತಮ್ಮ ಟೊಮೆಟೋ ಕೆನ್ನೆಯರಳಿಸಿ ನಗುತ್ತಾರೆ.

ಸದ್ಯದಲ್ಲೇ ಬಿಡುಗಡೆಯಾಗಲಿರುವ ‘ಎಕ್ಸ್‌ಕ್ಯೂಸ್‌ ಮಿ’ ಚಿತ್ರದಲ್ಲಿ ಬಿ. ಕೆ. ಸುಮಿತ್ರಾರ ಮಗ ಸುನೀಲ್‌ ರಾವ್‌ಗೆ ರಮ್ಯಾ ನಾಯಕಿ. ಸುನೀಲ್‌ ರಾವ್‌ ಪ್ರಕಾರ ರಮ್ಯಾ ಆತ್ಮವಿಶ್ವಾಸ ಉಳ್ಳ ಹುಡುಗಿ. ನಟನೆಯ ಸಂದರ್ಭದಲ್ಲಿ ಆಕೆಯ ಆತ್ಮವಿಶ್ವಾಸವೇ ಆಕೆಗೆ ಬೆಂಬಲವಾಗಿ ನಿಲ್ಲುತ್ತದೆ. ‘ಎಕ್ಸ್‌ಕ್ಯೂಸ್‌ ಮಿ’ ಚಿತ್ರದಲ್ಲಿ ಆಕೆ ಅದ್ಭುತವಾಗಿ ನಟಿಸಿದ್ದಾಳೆ.

‘ಎಕ್ಸ್‌ಕ್ಯೂಸ್‌ ಮಿ’ ಚಿತ್ರ ಬಿಡುಗಡೆಯಾಗುತ್ತಲೇ ತಮಿಳು ತೆಲುಗು ಚಿತ್ರರಂಗದತ್ತಲೂ ರಮ್ಯಾ ಕಣ್ಣು ಹಾಯಿಸಲಿದ್ದಾರಂತೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada