ದೀಪಾವಳಿ ಪಟಾಕಿ ‘ಒಂದಾಗೋಣ ಬಾ’
*ದಟ್ಸ್‌ಕನ್ನಡ ಬ್ಯೂರೋ
ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ರವಿಚಂದ್ರನ್ ಸದ್ದು ಮಾಡುವ ನಾಯಕರಾಗಿದ್ದರು. ಆದರೀಗ, ದೀಪಾವಳಿಯಲ್ಲಿ ಅವರ ನಟನೆಯ ಚಿತ್ರ ಪಟಾಕಿ ಹೊಡೆಯಲು ಬರುತ್ತಿದೆ. ಚಿತ್ರದ ಹೆಸರು ‘ಒಂದಾಗೋಣ ಬಾ’.
ಈ ಚಿತ್ರ ಸಾಕಷ್ಟು ಕಾರಣಗಳಿಂದ ನಿರೀಕ್ಷೆ ಹುಟ್ಟಿಸಿದೆ. ಅವನ್ನು ಪಟ್ಟಿ ಮಾಡಬಹುದಾದರೆ-
- ಕಳಚಿದ್ದ ಹಂಸಲೇಖ- ರವಿಚಂದ್ರನ್ ಕೊಂಡಿ ಈ ಚಿತ್ರದ ಮೂಲಕ ಮತ್ತೆ ಕೂಡಿಕೊಂಡಿದೆ. ನಿರ್ಮಾಪಕ ರಾಕ್‌ಲೈನ್‌ಗೆ ಧನ್ಯವಾದಗಳು.
- ರವಿ- ಹಂಸ್ ಜೋಡಿಯ ಕೊನೆ ಚಿತ್ರ ‘ಪ್ರೀತ್ಸೋದ್ ತಪ್ಪಾ’ ಕೂಡ ‘ಒಂದಾಗೋಣ ಬಾ’ದಂತೆಯೇ ರೀಮೇಕು. ಅದು ಆಗ ಗಲ್ಲಾ ಪೆಟ್ಟಿಗೆಯ ತುಂಬಿಸಿಕೊಂಡಿತ್ತು. ಈಗಲೂ ಅದಾಗುತ್ತದಾ?
- ‘ಪ್ರೀತ್ಸೋದ್ ತಪ್ಪಾ’ ಚಿತ್ರದಲ್ಲಿ ರವಿ ಜೊತೆ ಶಿಲ್ಪಾ ಶೆಟ್ಟಿ ಜೋಡಿಯಾಗಿದ್ದಳು. ‘ಒಂದಾಗೋಣ ಬಾ’ ಜೋಡಿಯೂ ಇದೇ ಆಗಿರುವುದು ಚಿತ್ರದ ಸೆಳಕುಗಳಲ್ಲಿ ಒಂದು.
- ಸೋಮಯಾಜುಲು, ಕೆ.ಆರ್.ವಿಜಯಾ, ಚಿತ್ರಾ ಶೆಣೈ, ವನಿತಾ ವಾಸು, ಶಿವಕುಮಾರ್, ಚರಣ್ ರಾಜ್, ದೊಡ್ಡಣ್ಣ, ಪ್ರಮಿಳಾ ಜೋಷಾಯ್, ತಾರಾ, ರೇಖಾ, ಶಿವರಾಂ, ಪವಿತ್ರಾ ಲೋಕೇಶ್- ಹೀಗೆ ಇದು ದೊಡ್ಡ ತಾರಾಬಳಗದ ಚಿತ್ರ.
- ಸ್ವಿಟ್ಜರ್‌ಲ್ಯಾಂಡಿನ ಪ್ರಕೃತಿ ಸೊಬಗು ಚಿತ್ರದ ಹಾಡುಗಳನ್ನು ಕಳೆಗಟ್ಟಿಸಿದೆ.
- 1 ಲಕ್ಷ 25 ಸಾವಿರ ಧ್ವನಿಸುರುಳಿಗಳು ಹಾಗೂ 10 ಸಾವಿರ ಸಿ.ಡಿ.ಗಳು ಮಾರಾಟವಾದ ದಾಖಲೆಯನ್ನು ಚಿತ್ರ ಬರೆದಿದೆ ಎಂದು ಮಾರ್ಸ್ ರೆಕಾರ್ಡಿಂಗ್ ಕಂಪನಿ ಟಾಂಟಾಂ ಹೊಡೆಯುತ್ತಿದೆ.
- ತಮ್ಮ ಮೆಚ್ಚಿನ ಶಿಷ್ಯ ಅನೂಪ್‌ಗೆ ಹಂಸಲೇಖ ಚಿತ್ರದಲ್ಲಿ ಹಾಡುವ ಅವಕಾಶ ಕೊಟ್ಟಿದ್ದಾರೆ.
- ಉದಯಶಂಕರ್ ನಿರ್ದೇಶಿಸಿರುವ ‘ಒಂದಾಗೋಣ ಬಾ’ ತೆಲುಗಿನ ‘ಕಲಿಸುಂದಾಂ ರಾ’ ಚಿತ್ರದ ರೀಮೇಕು. ತೆಲುಗಿನ ಚಿತ್ರ ಭರ್ಜರಿ ಹಿಟ್ ಆಗಿತ್ತು.
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications