»   » ‘ಮದುವೆಯಾಗಿರುವ ನಾನು ಚಿತ್ರಗಳಲ್ಲಿ ನಟಿಸಬೇಕಾ? ಬೇಡವಾ?’

‘ಮದುವೆಯಾಗಿರುವ ನಾನು ಚಿತ್ರಗಳಲ್ಲಿ ನಟಿಸಬೇಕಾ? ಬೇಡವಾ?’

Posted By: Super
Subscribe to Filmibeat Kannada

ಅನು ಪ್ರಭಾಕರ್‌ ಕೈ ಮೂಳೆ ಮುರಿದುಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿಷಯ ಚಿತ್ರರಂಗದಲ್ಲಾಗಲೀ ಅಥವಾ ಮಾಧ್ಯಮಗಳಲ್ಲಾಗಲೀ ದೊಡ್ಡ ಸುದ್ದಿಯಿರಲಿ ; ಬಾಯಿ ಮಾತಿನ ವಿಷಯವೂ ಆಗಿಲ್ಲ. ಏಕೆಂದರೆ ಅನು ಕೈಯಲ್ಲೀಗ ಹೆಚ್ಚಿನ ಚಿತ್ರಗಳಿಲ್ಲ. ಆಕೆ ಚಾಲ್ತಿಯಲ್ಲಿರುವ ನಟಿ ಅಲ್ಲ.

ರಾಧಿಕಾ, ರಕ್ಷಿತಾ, ಋತಿಕಾ ಮುಂತಾದ ಹೊಸ ಹುಡುಗಿಯರ ಬಿಡು ಬೀಸಿನ ಮೆರೆದಾಟದಲ್ಲಿ ಅನು ಪ್ರಭಾಕರ್‌ಗೆ ಮನೆ ಕೆಲಸಕ್ಕೆ ಹಾಗೂ ಪತಿಸೇವೆಗೆ ಹೆಚ್ಚಿನ ಬಿಡುವು ದೊರೆತಿದೆ. ಅವಕಾಶಗಳು ಕಡಿಮೆಯಾದದ್ದಕ್ಕೆ ಮದುವೆಯೇ ಕಾರಣ ಎಂದು ದೂರುವಂತಿಲ್ಲ. ಮದುವೆಯಾದ ಹೊಸತರಲ್ಲಿ ಅವಕಾಶಗಳು ಅನು ಅವರನ್ನು ಅರಸಿಕೊಂಡು ಬಂದವು. ಆದರೆ, ಅಷ್ಟೇ ಬೇಗ ಅವರು ನಿರುದ್ಯೋಗಿಯಾದರು. ಹೊಸ ನೀರಿನ ಅಬ್ಬರ ಅಂತಾದ್ದು.

ಅಂದಹಾಗೆ, ಅನು ಕೈ ಮುರಿದುಕೊಂಡಿದ್ದು ಎಲ್ಲಿ ? ಶೂಟಿಂಗ್‌ನಲ್ಲಂತೂ ಅಲ್ಲ. ಇನ್ನು ಗಂಡ ಕೃಷ್ಣ ಕುಮಾರ್‌ ಜೊತೆ ಜಗಳ ಆಡಿದರಾ? ಪಾಪ ಪಾಂಡು ಥರದ ಕೃಷ್ಣಕುಮಾರ್‌ ಜಗಳ ಆಡುವ, ಕೈ ಮುರಿಯುವ ಟೈಪಿನ ಗಂಡನಲ್ಲ. ಹಾಗಿದ್ದರೆ ಕೈ ಮುರಿದದ್ದು ಎಲ್ಲಿ ? ಬಚ್ಚಲಲ್ಲಿ ಜಾರಿ ಬಿದ್ದರಾ ?

ಅನು ಪ್ರಭಾಕರ್‌ ಕೈ ಮುರಿದುಕೊಂಡಿದ್ದು ಗೋವಾದಲ್ಲಿ. ಇತ್ತೀಚೆಗೆ ಪತಿ ಸಮೇತ ಗೋವಾಕ್ಕೆ ಹೋಗಿದ್ದ (ಶೂಟಿಂಗ್‌ಗೆ ಅಲ್ಲ ) ಅನು ಪ್ರಭಾಕರ್‌, ಬೀಚೊಂದರಲ್ಲಿ ಬಿದ್ದು ಗಾಯ ಮಾಡಿಕೊಂಡರು. ವೈದ್ಯರು ಕೈ ಮುರಿದಿದೆ ಎಂದು ಬ್ಯಾಂಡೇಜ್‌ ಕಟ್ಟಿದ್ದಾರೆ. ಹಾಗಾಗಿ ಅನೂಗೆ ಕಡ್ಡಾಯ ವಿಶ್ರಾಂತಿ!

English summary
Anu Prabhakar is taking rest as her hand is broken in Goa

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada