»   » ನನ್ನಂಥ ಅಪ್ಪ ಇಲ್ಲ - ಉಪೇಂದ್ರ

ನನ್ನಂಥ ಅಪ್ಪ ಇಲ್ಲ - ಉಪೇಂದ್ರ

Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ಕನ್ನಡ
ಶಾಕ್‌ ನೀಡುವಲ್ಲಿ ಉಪೇಂದ್ರ ಎತ್ತಿದ ಕೈ. ಸಿನಿಮಾದಲ್ಲಿ ಮಾತ್ರವಲ್ಲ, ಖಾಸಗಿ ಬದುಕಿನಲ್ಲೂ !

ಉಪೇಂದ್ರ ಸದ್ದಿಲ್ಲದೇ ಗಪ್‌ಚುಪ್‌ ಮದುವೆಯಾಗಿದ್ದು ಎಲ್ಲರಿಗೂ ಗೊತ್ತು . ಎಚ್‌ಟುಒ ಚಿತ್ರದ ಹೂವೇ ಹೂವೇ ಹಾಡಿಗೆ ಮೋಡಿ ಮಾಡುವಂತೆ ಕುಣಿದಿದ್ದ ನಾಯಕಿ ಪ್ರಿಯಾಂಕ, ಉಪ್ಪಿಗೆ ಹೆಂಗೆ ಗಂಟು ಬಿದ್ದಳು ಎನ್ನುವ ಚಿತ್ರ ರಸಿಕರ ಕುತೂಹಲ ತಣ್ಣಗಾಗುವ ಮುನ್ನವೇ, ಉಪೇಂದ್ರ ಅಪ್ಪ ಆದರಂತೆ ಎನ್ನುವ ಮಾತೂ ಅಭಿಮಾನಗಳ ನಡುವೆ ಚಾಲ್ತಿಯಲ್ಲಿತ್ತು . ಆದರೆ, ಈ ಸುದ್ದಿಯನ್ನು ಖಚಿತ ಪಡಿಸುವ ಗೋಜಿಗೆ ಹೋಗದ ಉಪೇಂದ್ರ, ಇದೀಗ ಮಗನೊಂದಿಗೆ ಪತ್ರಕರ್ತರ ಮುಂದೆ ನಿಂತಿದ್ದಾರೆ. ನನ್ನಂಥ ಅಪ್ಪ ಇಲ್ಲ ಅನ್ನೋ ಖುಷಿಯನ್ನು ಹಂಚಿಕೊಳ್ಳಲು, ಮುದ್ದಿನ ಕುಮಾರ ಕಂಠೀರವನನ್ನು ಪರಿಚಯಿಸಲು ತಮ್ಮ ‘ಸುಮ್ಮನೆ’ ಮನೆಗೆ ಉಪೇಂದ್ರ ಇತ್ತೀಚೆಗೆ ಸುದ್ದಿಗಾರರನ್ನು ಆಹ್ವಾನಿಸಿದ್ದರು. ಅದು ಉಪ್ಪಿ ಪುತ್ರನ ನಾಮಕರಣ ಮಹೋತ್ಸವವೂ ಹೌದು.

ಅಪ್ಪ-ಅಮ್ಮನಂತೆಯೇ ಗುಂಡ-ಗುಂಡಗೆ, ಬೆಳ್ಳ-ಬೆಳ್ಳಗೆ ಇರುವ 6 ತಿಂಗಳ ಜೂನಿಯರ್‌ ಉಪೇಂದ್ರನ ಹೆಸರು-ಆಯುಷ್‌.

ಅಂದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ಆಯುಷ್‌. ಒಂದು ದಿನ ಪರಿಚಿತರು ಹಾಗೂ ಸಂಬಂಧಿಕರಿಗೆ, ಇನ್ನೊಂದು ದಿನ ಚಿತ್ರೋದ್ಯಮದ ಗೆಳೆಯರಿಗೆ ಉಪ್ಪಿ ಔತಣ ಏರ್ಪಡಿಸಿದ್ದರು. ಮೂರನೇ ದಿನ ಮಾಧ್ಯಮ ಮಿತ್ರರಿಗಾಗಿ ಔತಣ. ಒಟ್ಟಾರೆ ಮೂರು ದಿನಗಳ ಕಾಲ ನಾಮಕರಣ ಸಂಭ್ರಮ ಉಪ್ಪಿ ದಂಪತಿಗಳ ಮನೆ ಮನದಲ್ಲಿ ತುಂಬಿ ತುಳುಕಿತ್ತು.

ಆಯುಷ್‌ ಮುದ್ದಾಗಿದ್ದಾನೆ. ಅಷ್ಟೇ ಮುದ್ದಾಗಿ ಪ್ರಿಯಾಂಕ ಕನ್ನಡ ತೊದಲುತ್ತಿದ್ದಾರೆ. ಉಪೇಂದ್ರ ಮೊಗದಲ್ಲಿ ನಂದಿನಿ ನಗು!

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada