»   » ಹಸೀನಾ, ನಾಯಿ ನೆರಳು ಮತ್ತು ತನನಂ ತನನಂಗೆ ಮನ್ನಣೆ

ಹಸೀನಾ, ನಾಯಿ ನೆರಳು ಮತ್ತು ತನನಂ ತನನಂಗೆ ಮನ್ನಣೆ

Subscribe to Filmibeat Kannada


ಗೋವಾದಲ್ಲಿ ನಡೆಯಲಿರುವ 37ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಸಲ ‘ಬಂಗಾರದ ಮನುಷ್ಯ’ ನ.25ರಂದು ಪ್ರದರ್ಶನಗೊಳ್ಳಲಿದೆ.

ಬೆಂಗಳೂರು : ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ಚಿತ್ರಕತೆ ಪ್ರಶಸ್ತಿಗೆ ‘ಹಸೀನಾ’ ಚಿತ್ರ ಪಾತ್ರವಾಗಿದೆ. ಬೆಲ್ಜಿಯಂನ ಬ್ರುಸೆಲ್ಸ್‌ನಲ್ಲಿ ನಡೆಯಲಿರುವ 33ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಎರಡು ಪ್ರಶಸ್ತಿಗಳನ್ನು ಹಸೀನಾ ಪಡೆದುಕೊಂಡಿದೆ.

ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರಿಗೆ ಈ ಪ್ರಶಸ್ತಿಗಳ ಮೂಲಕ ಇನ್ನೆರಡು ಗರಿ ಮೂಡಿವೆ. ಬರ್ಲಿನ್‌ನಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಸೇರಿದಂತೆ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಚಿತ್ರ ಬಾಚಿಕೊಂಡಿದೆ. ಈ ಚಿತ್ರದ ಅಭಿನಯಕ್ಕಾಗಿ ತಾರಾ ಶ್ರೇಷ್ಠ ನಟಿ ರಾಷ್ಟ್ರ ಪ್ರಶಸ್ತಿಯನ್ನು ಈ ಹಿಂದೆ ಪಡೆದಿದ್ದಾರೆ.

ನಮ್ಮ ಚಿತ್ರಗಳು : ಗೋವಾದಲ್ಲಿ ನಡೆಯಲಿರುವ 37ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಸಲ ‘ಬಂಗಾರದ ಮನುಷ್ಯ’ ನ.25ರಂದು ಪ್ರದರ್ಶನಗೊಳ್ಳಲಿದೆ. ಚಿತ್ರೋತ್ಸವದಲ್ಲಿ ರಾಜ್‌ಕುಮಾರ್‌ಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತದೆ.

ಗಿರೀಶ್‌ ಕಾಸರವಳ್ಳಿ ನಿರ್ದೇಶನದ ಮತ್ತೊಂದು ಚಿತ್ರ‘ನಾಯಿ ನೆರಳು’ ಮತ್ತು ಕವಿತಾ ಲಂಕೇಶ್‌ ನಿರ್ದೇಶನದ ‘ತನನಂ ತನನಂ’ ಚಿತ್ರಗಳು ಪನೋರಮಾ ಮತ್ತು ವಾಣಿಜ್ಯ ಚಿತ್ರಗಳ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿವೆ.

(ಏಜನ್ಸೀಸ್‌)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada