»   » ಉಪ್ಪಿ-ಪ್ರಿಯಾಂಕ ನಟನೆಯ ಹೊಸ ಚಿತ್ರಕ್ಕೆ ಸಿದ್ಧತೆ!

ಉಪ್ಪಿ-ಪ್ರಿಯಾಂಕ ನಟನೆಯ ಹೊಸ ಚಿತ್ರಕ್ಕೆ ಸಿದ್ಧತೆ!

Subscribe to Filmibeat Kannada


ಎರಡು ಮುದ್ದು ಮಕ್ಕಳ ತಾಯಿ ಪ್ರಿಯಾಂಕ ಸೆಕೆಂಡ್‌ ಇನ್ನಿಂಗ್ಸ್‌ನಲ್ಲಿ ಮಾಡ್ಬೇಕಾದ್ದನ್ನೇ ಮಾಡ್ತಿದ್ದಾರೆ, ನೋಡ್ಬೇಕಾದ್ದನ್ನೇ ನೋಡಲು ಪ್ರೇಕ್ಷಕರೂ ಸಿದ್ಧ!

ಮದುವೆಯಾದ ಮೇಲೆ ನಟಿಯರು ಜನಪ್ರಿಯತೆ ಕಳೆದುಕೊಳ್ಳುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿ ಡುಮ್ಮಿ ಮಾಲಾಶ್ರೀ, ಸೊರಗಿದ ಸುಧಾರಾಣಿ ನಮ್ಮ ನಡುವೆಯಿದ್ದಾರೆ. ಆದರೆ ನಟ ಉಪೇಂದ್ರರ ಪತ್ನಿ ಪ್ರಿಯಾಂಕ ಅವರ ಕತೆ ವಿಭಿನ್ನ.

ಎರಡು ಮಕ್ಕಳು ತಾಯಿಯಾದರೂ ಪ್ರಿಯಾಂಕ, ಈಗಲೂ ತಮ್ಮ ಆಕರ್ಷಣೆ ಕಳೆದುಕೊಂಡಿಲ್ಲ. ಅದೇ ಮೈಮಾಟ, ಅದೇ ಸ್ನಿಗ್ಧ ಸೌಂದರ್ಯವನ್ನು ಉಳಿಸಿಕೊಂಡಿದ್ದಾರೆ.

ಈ ಮಧ್ಯೆ ಬಣ್ಣದ ಬದುಕಿನ ಬಗ್ಗೆ ಪ್ರಿಯಾಂಕಾಗೆ ಮತ್ತೆ ಸೆಳೆತ ಉಂಟಾಗಿದೆ. ಸಂದರ್ಶನವೊಂದರಲ್ಲಿ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. 2007ರಲ್ಲಿ ಉಪೇಂದ್ರ ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಲಿರುವ ಹೊಸ ಕನ್ನಡ ಸಿನಿಮಾದಲ್ಲಿ ನಾಯಕಿ ಪಾತ್ರ ಮಾಡುವುದಾಗಿ ಪ್ರಿಯಾಂಕ ಹೇಳಿದ್ದಾರೆ. ಇತ್ತೀಚೆಗಷ್ಟೇ ಬೆಂಗಾಲಿ ಚಿತ್ರದಲ್ಲಿ ನಟಿಸಿರುವುದನ್ನೂ ಅವರು ಒಪ್ಪಿಕೊಂಡಿದ್ದಾರೆ.

‘ಕೊಲ್ಕೊತ್ತಾ ನನ್ನ ತವರು ನೆಲ. ಅಲ್ಲಿ ಸಾಕಷ್ಟು ಗೆಳೆಯರಿದ್ದಾರೆ... ಹೆತ್ತವರಿದ್ದಾರೆ... ಹೀಗಾಗಿ ಅವಕಾಶಗಳಿಗೇನೂ ಕೊರತೆಯಿಲ್ಲ. ಒಳ್ಳೆ ಪಾತ್ರಗಳು ಸಿಕ್ಕರೆ(ನಾಯಕನಷ್ಟೇ ನಾಯಕಿಗೂ ಆದ್ಯತೆ), ಖಂಡಿತ ನಟನಾ ವೃತ್ತಿಯನ್ನು ಮುಂದುವರೆಸುತ್ತೇನೆ... ಮಕ್ಕಳು ದೊಡ್ಡವರಾಗುತ್ತಿದ್ದಾರೆ... ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿ ಸಾಕಷ್ಟು ಜನರಿದ್ದಾರೆ... ನನ್ನ ಬಣ್ಣದಬದುಕಿಗೆ ನಮ್ಮವರ ಒಪ್ಪಿಗೆ ಸಹಾ ಇದೆ...’ ಎಂದು ಪ್ರಿಯಾಂಕ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಎಚ್‌ಟುಓ’, ‘ಮಲ್ಲ’ ಮತ್ತು ‘ಕೋಟಿಗೊಬ್ಬ’ ಚಿತ್ರಗಳ ಮೂಲಕ, ಸಿನಿ ರಸಿಕರ ಮನೆಸೆಳೆದ ಹೂವಿನಂತಹ ಚೆಲವೆ; ಪ್ರಿಯಾಂಕ. ಈ ಪ್ರಿಯಾಂಕ ಮೇಡಂ ಸೆಕೆಂಡ್‌ ಇನ್ನಿಂಗ್ಸ್‌ಗೆ ನೋಡಲು, ಪ್ರೇಕ್ಷಕರಂತೂ ರೆಡಿ!!!

ಪ್ರಿಯಾಂಕಾ ಉಪೇಂದ್ರ ಅವರ ಮಾದಕ ಚಿತ್ರಗಳು ಇಲ್ಲಿವೆ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada