»   » ‘ದೇವರ ಮಕ್ಕಳು ಚಿತ್ರದಲ್ಲಿ ಕುವೆಂಪು ಕನ್ನಡಕ ಬಳಕೆ’

‘ದೇವರ ಮಕ್ಕಳು ಚಿತ್ರದಲ್ಲಿ ಕುವೆಂಪು ಕನ್ನಡಕ ಬಳಕೆ’

Posted By: Staff
Subscribe to Filmibeat Kannada

ಚಿತ್ರನಟ ಶ್ರೀನಿವಾಸ ಮೂರ್ತಿ ಎಂದರೆ ಎಲ್ಲರ ಕಣ್ಮುಂದೆ ನಿಲ್ಲುವ ಚಿತ್ರ ಈಟೀವಿಯಲ್ಲಿ ಪ್ರಸಾರವಾಗಿ ಅಪಾರ ಮೆಚ್ಚುಗೆ ಗಳಿಸಿದ 'ಅಣ್ಣ ಬಸವಣ್ಣ" ಧಾರಾವಾಹಿ. ಪಾತ್ರ ಯಾವುದೇ ಇರಲಿ, ಅದರಲ್ಲಿ ಪರಕಾಯ ಪ್ರವೇಶ ಮಾಡಿ ಅಪರೂಪದ ಭಿನಯ ನೀಡುವ ಹಿರಿಮೆ ಮೂರ್ತಿಯವರದು. ಈಗ ನಿರ್ದೇಶಕರೂ ಆಗಿರುವ ಅವರು ಚಿತ್ರರಂಗದ ಬಗೆಗೆ ಅಪಾರ ಗ್ರಹಿಕೆಯುಳ್ಳವರು. ಅವರು ಮಾತಿಗೆ ಸಿಕ್ಕಾಗ-

ಈಗ ನೀವು ಮಕ್ಕಳ ಸಿನಿಮಾ ನಿರ್ದೇಶಿಸುತ್ತಿದ್ದೀರಿ. ನಿಮ್ಮ ಮಕ್ಕಳ ಪ್ರಕಾರ ಸಿನಿಮಾದ ವ್ಯಾಪ್ತಿ ಏನು ?
ಮಕ್ಕಳ ಸಿನಿಮಾ ಅಂದ್ರೆ- ಅದರಲ್ಲಿ ಮಕ್ಕಳ ಯೋಚನಾ ಮಟ್ಟ ಮೀರಿ ಏನೂ ಹೋಗಬಾರದು. ಅಂದರೆ ಕಮರ್ಷಿಯಲ್‌ ಅಂಶಗಳು ವಿಪರೀತ ಅನ್ನುವ ಹಾಗೆ ಇರಬಾರದು. ಹಾಗಾದಾಗ ಮಾತ್ರ ಅದು ಮಕ್ಕಳ ಸಿನಿಮಾ ಆಗುತ್ತೆ.

ನಿಮ್ಮ 'ದೇವರ ಮಕ್ಕಳು" ಚಿತ್ರದ ವೈಶಿಷ್ಟ್ಯವೇನು ?
ಇದು ಮಕ್ಕಳು, ಅವರ ಹುಡುಗಾಟ, ಅವರ ಸಮಸ್ಯೆ, ಅವರ ಪಾಡು ಎಲ್ಲವನ್ನೂ ಹೇಳುವ ಚಿತ್ರ. ಇದರಲ್ಲಿ ಕುವೆಂಪು ಪಾತ್ರ ಬರ್ತದೆ. ಆ ಪಾತ್ರದಲ್ಲಿ ನನ್ನ ಕಿರಿಮಗ ನಿಖಿಲ್‌ಕೃಷ್ಣ ಇದಾನೆ. ಮಹಾಕವಿ ಕುವೆಂಪು ಬಳಸಿದ ಕನ್ನಡಕ, ಅವರ ಹಸ್ತಾಕ್ಷರವಿರೊ ಪುಸ್ತಕಗಳೇ ಚಿತ್ರದಲ್ಲಿ ಬಳಕೆಯಾಗಿವೆ.

ಸಿನಿಮಾ ಅಂದ್ರೆ ನಿಮ್ಮ ಪ್ರಕಾರ...
ಸಿನಿಮಾ ಅನ್ನೋದು ನಿರ್ದೇಶಕನ ಮಾಧ್ಯಮ. ನಟ, ನಟಿಯರನ್ನ ರೂಪಿಸುವವನೇ ಆತ. ಆದರೆ ಜನ ನಿರ್ದೇಶಕನ ಶ್ರಮವನ್ನ ಗುರುತಿಸೊಲ್ಲವಲ್ಲ . ಅದೇ ಬೇಸರದ ಸಂಗತಿ.

ಕಲೆ, ಕಲಾವಿದ ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಕಲೆ-ಕಲಾವಿದ ಇವೆರಡೂ ಭಾಷೆಯ ವ್ಯಾಪ್ತಿ ಮೀರಿದವು. ಕಲಾವಿದನಾಗೋದಕ್ಕಿಂತ ಮುಂಚೆ ತಂತ್ರಜ್ಞ ಆಗಿದ್ರೆ ಒಳಿತು ಅನ್ನೋದು ನನ್ನ ಅಭಿಪ್ರಾಯ. ಉಳಿದವರ ಅಭಿಪ್ರಾಯ ಹೇಗಿರೊತ್ತೋ, ಏನೋ...(ವಿಜಯ ಕರ್ನಾಟಕ)

English summary
KuVemPus glasses used in Devara Makkalu film
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada