»   » ಸುದ್ದಿಸ್ಪರ್ಶ:ವಿಷ್ಣು-ನಾರಾಯಣ್‌ ‘ವರ್ಷ’

ಸುದ್ದಿಸ್ಪರ್ಶ:ವಿಷ್ಣು-ನಾರಾಯಣ್‌ ‘ವರ್ಷ’

Posted By:
Subscribe to Filmibeat Kannada
  • ಮತ್ತೆ ನಾರಾಯಣ್‌-ವಿಷ್ಣು ಜೋಡಿ ಒಂದಾಗಿದೆ. ಹೊಸ ಚಿತ್ರದ ಹೆಸರು ‘ವರ್ಷ’. ರಾಕ್‌ಲೈನ್‌ ವೆಂಕಟೇಶ್‌ ಚಿತ್ರದ ನಿರ್ಮಾಪಕರು. ಕತೆ-ಚಿತ್ರಕತೆ-ಸಂಭಾಷಣೆ ಎಲ್ಲವೂ ಸಹ ನಾರಾಯಣ್‌ ಮಯ. ಆಪ್ತಮಿತ್ರದ ನಂತರ ರಮೇಶ್‌ ಮತ್ತೆ ವಿಷ್ಣುವರ್ಧನ್‌ರೊಂದಿಗೆ ನಟಿಸುತ್ತಿದ್ದಾರೆ. ಮಾನ್ಯ ಎನ್ನುವ ಹೊಸ ನಾಯಕಿ ಚಿತ್ರದಲ್ಲಿದ್ದಾಳೆ.
  • ಕೆ.ಮಂಜು ನಿರ್ಮಾಣದ ದಯಾಳ್‌ ನಿರ್ದೇಶನದ ‘ಯಶವಂತ್‌’ ಚಿತ್ರೀಕರಣ ಮುಗಿದಿದೆ. ಚಂದ್ರಚಕೋರಿ, ಕಂಠಿ ನಂತರ ನಟ ಮುರಳಿ ್ಫಈಗ ಯಶವಂತ್‌. ರಕ್ಷಿತಾ ನಾಯಕಿಯಾಗಿರುವ ಈ ಚಿತ್ರ ಸಂಕ್ರಾಂತಿಗೆ ಬಿಡುಗಡೆ. ನಮ್ಮ ಮನೆ ಮಂದಿ ಒಪ್ಪಿದರೆ ಮಾತ್ರ ಐಟಂ ಸಾಂಗ್‌ ಚಿತ್ರದಲ್ಲಿ ಉಳಿಸಿಕೊಳ್ಳುತ್ತೇನೆ ಎಂದಿದ್ದಾರೆ ನಿರ್ದೇಶಕರು.
  • ವಿಷ್ಣು ವರ್ಧನ್‌ ಅಳಿಯ ಅನಿರುದ್ಧ ‘ಗುಡ್‌ಲಕ್‌’ ಚಿತ್ರ ಮುಗಿಯುವ ಮೊದಲೇ ‘ಶ್ರೀಕೃಷ್ಣಾಯ ನಮಃ’ ಚಿತ್ರದ ನಾಯಕ. ಚಿತ್ರದ ನಿರ್ದೇಶಕ ನರೋತ್ತಮ ಶರ್ಮ. ಮಲಯಾಳಂ ನಟಿ ದೀಶ, ರೂಪಾ, ಶರಣ್‌ ತಾರಾಂಗಣದಲ್ಲಿದ್ದಾರೆ.
  • ‘ನೆನಪಿರಲಿ’! ಇದು ಚಿತ್ರವೊಂದರ ಹೆಸರು. ಅಜಯ್‌ಗೌಡ ನಿರ್ಮಾಣದ ಈ ಚಿತ್ರದ ಮೂರನೇ ಹಂತದ ಚಿತ್ರೀಕರಣ ಮುಗಿದಿದೆ. ಹಂಸಲೇಖ ಸಾಹಿತ್ಯ-ಸಂಗೀತ ನೀಡಿದ್ದಾರೆ. ಪ್ರೇಮ್‌ಕುಮರ್‌, ಅಕ್ಷಯ್‌,ವಿದ್ಯಾ ತಾರಾಗಣದಲ್ಲಿದ್ದಾರೆ.
  • ಸಾಯಿಪ್ರಕಾಶ್‌ ನಿರ್ದೇಶನದ ‘ತವರಿನ ಕನಸು’ ಚಿತ್ರೀಕರಣ ಪ್ರಗತಿಯಲ್ಲಿದೆ.ಅತ್ತೆ , ಸೊಸೆ, ಮಾವನ ನಡುವಿನ ತ್ರಿಕೋನ ದ್ವೇಷದ ಕತೆಯನ್ನು ಇದು ಹೊಂದಿದೆ. ತವರಿಗೆ ಬಾ ತಂಗಿ ಚಿತ್ರದ ರಾಧಿಕಾ, ಪ್ರಮೀಳಾ ಜೋಷಾಯ್‌, ಸುಂದರ್‌ರಾಜ್‌ ಚಿತ್ರದಲ್ಲಿದ್ದಾರೆ.
  • ಸುನೀಲ್‌ ಕುಮಾರ್‌ ದೇಸಾಯಿ ದಿಕ್ಕು ಬದಲಿಸಿದ್ದಾರೆ. ಉತ್ಕರ್ಷ, ನಿಷ್ಕರ್ಷ ನೀಡಿದ ದೇಸಾಯಿ ಅವರಿಗೆ ಅರ್ಕಾವತ್ತಿನ ಪರ್ವ, ಮರ್ಮ- ಚಿತ್ರಗಳ ಸೋಲು ಕಂಗೆಡಿಸಿದೆ. ಹೀಗಾಗಿ ಮೂರು ಪದದ ಚಿತ್ರಕ್ಕೆ ಮೊರೆ ಹೋಗಿದ್ದಾರೆ. ಹೊಸ ಚಿತ್ರದ ಹೆಸರು ರಮ್ಯ ಚೈತ್ರ ಕಾಲ...ಕಡಿಮೆ ಬಂಡವಾಳದ ಈ ಚಿತ್ರ ನವಿರು ಪ್ರೇಮದ ಕತೆಯನ್ನು ಹೊಂದಿದೆ.
  • ಯಂಡಮೂರಿ ವೀರೇಂದ್ರನಾಥ್‌ ಅವರ ಪ್ರಿಯತಮ ಕಾದಂಬರಿಯನ್ನು ದೊರೆಸ್ವಾಮಿ ಚಿತ್ರವನ್ನಾಗಿ ಪರಿವರ್ತಿಸಿದ್ದಾರೆ. ಚಿತ್ರದ ಹೆಸರು-ಸಿರಿಚಂದನ. ಚಿತ್ರಆರು ಸೆಂಟರ್‌ಗಳಲ್ಲಿ ನೂರು ದಿನ ಓಡುತ್ತದೆ ಎನ್ನುವ ಆತ್ಮವಿಶ್ವಾಸವನ್ನು ದೊರೆಸ್ವಾಮಿ ಹೊಂದಿದ್ದಾರೆ. ಚಿತ್ರದ ನಿರ್ದೇಶಕರು ರಾಜ್‌ ಕಿಶೋರ್‌.
Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada