»   » ನೂರು ದಿನವಾದರೂ ಸುರಿಯುತ್ತಲೇ ಇದೆ, ‘ಅಮೃತಧಾರೆ’

ನೂರು ದಿನವಾದರೂ ಸುರಿಯುತ್ತಲೇ ಇದೆ, ‘ಅಮೃತಧಾರೆ’

Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ಕನ್ನಡ
ಕತೆಗಾರರಾಗಿ, ಸಿನಿಮಾ-ಧಾರಾವಾಹಿ ನಿರ್ದೇಶಕರಾಗಿ ಕನ್ನಡ ಜನಕ್ಕೆ ಚಿರಪರಿಚಿತ ನಾಗತಿ ಹಳ್ಳಿಚಂದ್ರಶೇಖರ್‌, ನಿರ್ಮಾಪಕರಾಗಿ ಈ ಚಿತ್ರದ ಮೂಲಕ ಗೆದ್ದಿದ್ದಾರೆ. ಮೂರ್ನಾಲ್ಕು ಕೋಟಿ ರೂಪಾಯಿ ಸುರಿದು ಚಿತ್ರ ನಿರ್ಮಾಣ ಮಾಡಿ, ಬದುಕುಳಿದಿದ್ದಾರೆ! ಅಮಿತಾಭ್‌ರನ್ನು ಕನ್ನಡಕ್ಕೆ ಕರೆತಂದಿದ್ದಾರೆ. ನಾಗತಿ, ರಿಯಲಿ ಗ್ರೇಟ್‌!

ಆಧುನಿಕ ಜೀವನ ವಿಧಾನ ರೂಢಿಸಿಕೊಂಡ ಯುವ ದಂಪತಿಗಳ ಸುತ್ತ ಹೆಣೆದ ಕತೆಯಲ್ಲಿ, ನಾಗತಿಹಳ್ಳಿ ವಿವಿಧ ಭಾವನೆಗಳನ್ನು ಮನೋಹರವಾಗಿ ಚಿತ್ರಿಸಿದ್ದಾರೆ. ಚಿತ್ರದ ದೃಶ್ಯಗಳು ಕಣ್ತುಂಬಿಕೊಳ್ಳುವಂತಿವೆ. ಹಾಸ್ಯ ಪಾತ್ರಗಳಲ್ಲಿ ಯಶವಂತ ಸರದೇಶಪಾಂಡೆ, ಮಂಡ್ಯ ರಮೇಶ ಇತರರು ಹಾಸ್ಯಾಮೃತಧಾರೆಯನ್ನೇ ಉಣಿಸುತ್ತಾರೆ. ಎಲ್ಲ ಪಾತ್ರಗಳೂ ಪರಿಣಾಮ ಬೀರುವಲ್ಲಿ ಯಶಸ್ವಿಯಾಗಿವೆ. ಯುವ ದಂಪತಿಗಳ ಅಪಾರ ಪ್ರೀತಿ-ಕಾಳಜಿ, ಸಹಜ ಹುಸಿ ಮುನಿಸು ಸುಂದರವಾಗಿ ಚಿತ್ರಿತವಾಗಿದೆ -ಹೀಗೆ ಚಿತ್ರದ ಗೆಲುವಿಗೆ ಕಾರಣವಾದ ಅಂಶಗಳನ್ನು ಪಟ್ಟಿ ಮಾಡಬಹುದು.

ಚಿತ್ರದ ಶೀರ್ಷಿಕೆ ಗೀತೆ ‘ನೀ ಅಮೃತಧಾರೆ... ಕೋಟಿ ಜನುಮ ಜೊತೆಗಾರ/ತಿ... ’ ಎಲ್ಲ ದಂಪತಿಗಳೂ ಮತ್ತು ಎಲ್ಲ ಪ್ರೇಮಿಗಳಿಗೂ ಹೇಳಿ ಬರೆಸಿದಂತಿದೆ.

‘ಅಮೃತಧಾರೆ’ಯ ಯಶಸ್ಸು ಚಿತ್ರ ನಿರ್ಮಾಪಕರಿಗೆ ಮತ್ತೆ ಹಲವು ಚಿತ್ರ ನಿರ್ಮಿಸುವ ಉತ್ತೇಜನ ತುಂಬಿದೆ. ಇದು ಸದಭಿರುಚಿಯ ಚಿತ್ರಗಳನ್ನು ಜನ ತಿರಸ್ಕರಿಸುವುದಿಲ್ಲ, ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

‘ಅಮೃತಧಾರೆ’ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ :

ರಂಗನಿರಂತರ ಸಂಸ್ಥೆ ಅಮೃತಧಾರೆ ಕುರಿತು ರಾಜ್ಯಮಟ್ಟದ ಕನ್ನಡ ಮತ್ತು ಇಂಗ್ಲಿಷ್‌ ಸ್ಪರ್ಧೆ ಏರ್ಪಡಿಸಿದೆ. 16,000 ರೂಪಾಯಿ ನಗದು ಬಹುಮಾನವುಳ್ಳ ಈ ಸ್ಪರ್ಧೆಯಲ್ಲಿ, ಎಲ್ಲ ವರ್ಗದ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.

‘ಪ್ರಸ್ತುತ ಕನ್ನಡ ಸಿನಿಮಾ ಸಂದರ್ಭದಲ್ಲಿ ಅಮೃತಧಾರೆ ಒಂದು ವಿಶಿಷ್ಟ ಪ್ರೇಮ ಕಥಾನಕ’ -ವಿಚಾರದ ಬಗ್ಗೆ ಪ್ರಬಂಧ ಕಳುಹಿಸಲು ಜನವರಿ 30, 2006 ಕೊನೆಯ ದಿನವಾಗಿದ್ದು, ವಿಜೇತರಿಗೆ ಅಮೃತಧಾರೆ ಚಿತ್ರದ ಬೆಳ್ಳಿಹಬ್ಬದ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಬಂಧದ ಜೊತೆಗೆ ಪ್ರಾಂಶುಪಾಲರ ಪ್ರಮಾಣ ಪತ್ರ, ವಿದ್ಯಾಲಯದ ಗುರುತಿನ ಚೀಟಿ ಲಗತ್ತಿ ಸಿರಬೇಕು.

ಪ್ರಬಂಧ ಕಳುಹಿಸಬೇಕಾದ ವಿಳಾಸ :

ಅಮೃತಧಾರೆ ಪ್ರಬಂಧ ಸ್ಪರ್ಧೆ,
ರಾಜಶ್ರೀ ಪಿಕ್ಚರ್ಸ್‌,
ಸೆಂಟ್ರಲ್‌ ಚೇಂಬರ್ಸ್‌, ಬಿ, ಎಫ್‌-113,
2ನೇ ಮುಖ್ಯರಸ್ತೆ ,
ಗಾಂಧೀನಗರ,
ಬೆಂಗಳೂರು-560009.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada