»   » ಮೊದಲ ಪ್ರಯತ್ನದಲ್ಲೇ ಜನ ಮೆಚ್ಚುಗೆ ಪ್ರಶಸ್ತಿ ಪಡೆದ ಪುನೀತ್‌

ಮೊದಲ ಪ್ರಯತ್ನದಲ್ಲೇ ಜನ ಮೆಚ್ಚುಗೆ ಪ್ರಶಸ್ತಿ ಪಡೆದ ಪುನೀತ್‌

Posted By: Super
Subscribe to Filmibeat Kannada

ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಕಂಡಿರುವ ಪುನೀತ್‌ ನಾಯಕರಾಗಿ ಅಭಿನಯಿಸಿದ ಚೊಚ್ಚಿಲ ಚಿತ್ರ'ಅಪ್ಪು" ಪ್ರಶಸ್ತಿ ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ . '22 ನೇ ಸಿನಿಮಾ ಎಕ್ಸ್‌ಪ್ರೆಸ್‌ ಪ್ರಶಸ್ತಿ" ಕನ್ನಡ ವಿಭಾಗದಲ್ಲಿ ಪಣಕ್ಕಿದ್ದ ನಾಲ್ಕು ಪ್ರಶಸ್ತಿಗಳ ಪೈಕಿ ಮೂರನ್ನು 'ಅಪ್ಪು" ಗೆದ್ದಿದ್ದಾನೆ.

ಅಪ್ಪು ಪ್ರಶಸ್ತಿ ಅಭಿಯಾನ ಇಂತಿದೆ-
ಅತ್ಯುತ್ತಮ ಚಿತ್ರ: ಅಪ್ಪು
ಅತ್ಯುತ್ತಮ ನಟ : ಪುನೀತ್‌ ರಾಜ್‌ಕುಮಾರ್‌
ಅತ್ಯುತ್ತಮ ನಿರ್ದೇಶಕ : ಪೂರಿ ಜಗನ್ನಾಥ್‌
ಅತ್ಯುತ್ತಮ ನಟಿ ಪ್ರಶಸ್ತಿ ಮಾತ್ರ 'ನೀಲಾ" ಚಿತ್ರದ ನಾಯಕಿ ಗಾಯತ್ರಿ ಜಯರಾಂ ಅವರ ಪಾಲಾಗಿದೆ.

ಡಿ.21ರ ಶನಿವಾರ ಸಂಜೆ ಚೆನ್ನೈನ ಜವಾಹರ್‌ಲಾಲ್‌ ನೆಹರು ಕ್ರೀಡಾಂಗಣದಲ್ಲಿ, ಜಗಮಗಿಸುವ ಸಿನಿತಾರೆಗಳ ಹಾಜರಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಪುನೀತ್‌ ಗೈರು ಹಾಜರಿಯಲ್ಲಿ ನಿರ್ದೇಶಕ ಪೂರಿ ಜಗನ್ನಾಥ್‌ ಪ್ರಶಸ್ತಿ ಪಡೆದರು.

ಇತರ ಭಾಷೆಯ ಪ್ರಶಸ್ತಿಗಳು
ತೆಲುಗು : ಉತ್ತಮ ಚಿತ್ರ- ಆನಂದಮ್‌, ಉತ್ತಮ ನಟ- ಜೈ ಆಕಾಶ್‌ (ಆನಂದಮ್‌), ಉತ್ತಮ ನಟಿ- ಸ್ನೇಹ (ಹನುಮಾನ್‌ ಜಂಕ್ಷನ್‌), ಉತ್ತಮ ನಿರ್ದೇಶಕ- ರಾಜ (ಹನುಮಾನ್‌ ಜಂಕ್ಷನ್‌).
ಮಲಯಾಳಂ : ಉತ್ತಮ ಚಿತ್ರ- ಶೇಷಂ, ಉತ್ತಮ ನಟ- ಜಯರಾಂ (ಶೇಷಂ), ಉತ್ತಮ ನಟಿ- ಸುಹಾಸಿನಿ ಮಣಿರತ್ನಂ (ತೀರ್ಥದಾನಂ), ಉತ್ತಮ ನಿರ್ದೇಶಕ- ರಾಜೀವ್‌ಕುಮಾರ್‌(ಶೇಷಂ)
ತಮಿಳು : ಉತ್ತಮ ಚಿತ್ರ- ಕಣ್ಣತ್ತಿಲ್‌ ಮುಥಮಿಟ್ಟಲ್‌, ಉತ್ತಮ ನಟ- ವಿಕ್ರಂ (ಕಾಸಿ), ಉತ್ತಮ ನಟಿ- ಸಿಮ್ರಾನ್‌(ಕಣ್ಣತ್ತಿಲ್‌), ಉತ್ತಮ ನಿರ್ದೇಶಕ- ಬಾಲ (ನಂದ).

English summary
Kannada film APPU bags three cinema express award

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada