ಬೆಂಗಳೂರಿನಲ್ಲಿ ತಮಿಳು ನಟ ಮಾಧವನ್ ಪ್ರತಿಮೆ

By Rajendra

ನಟ ಮಾಧವನ್ ಅವರ ಮೇಣದ ಪ್ರತಿಮೆ ಬೆಂಗಳೂರಿನಲ್ಲಿ ನಟಿ ರಾಧಿಕಾ ಪಂಡಿತ್ ಬಿಡುಗಡೆ ಮಾಡಿದ್ದಾರೆ. ನಟ ಶಿವರಾಜ್ ಕುಮಾರ್ ಅವರ 'ರೌಡಿ ಅಳಿಯ' ಚಿತ್ರ ಬಿಡುಗಡೆ ಸಂದರ್ಭದಲ್ಲಿ ಅವರ ಮೇಣದ ಪ್ರತಿಮೆ ಬಿಡುಗಡೆಯಾಗಿತ್ತು. ಈಗ ಮಾಧವನ್ ಪ್ರತಿಮೆ ಅನಾವರಣಗೊಂಡಿರುವುದು ವಿಶೇಷ.

ಮಾಧವನ್ ಅವರು ಜಾಯ್ ಅಲುಕ್ಕಾಸ್ ಚಿನ್ನಾಭರಣ ಮಳಿಗೆಯ ರಾಯಭಾರಿಯಾಗಿದ್ದಾರೆ. ಇತ್ತೀಚೆಗೆ 85ನೇ ಮಳಿಗೆಯನ್ನು ಬೆಂಗಳೂರಿನ ಡಿಕೆನ್‌ಸನ್ ರಸ್ತೆಯಲ್ಲಿ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಮಾಧವನ್ ಅವರ ಪ್ರತಿಮೆಯನ್ನು ಬಿಡುಗಡೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಮಾಧವನ್ ಮಾತನಾಡುತ್ತಾ, ನಾನು ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಶಾಂತಿ ಕ್ರಾಂತಿ' ಹಾಗೂ 'ಶಾಂತಿ ಶಾಂತಿ ಶಾಂತಿ' ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡ ಕಲಿಯಬೇಕೆಂಬ ಆಸೆ ಬೆಟ್ಟದಷ್ಟಿದೆ. ಮೇಣದ ಪ್ರತಿಮೆ ಬಗ್ಗೆ ನನಗೆ ತುಂಬಾ ಹೆಮ್ಮೆ ಅನ್ನಿಸುತ್ತಿದೆ. (ಏಜೆನ್ಸೀಸ್)

More from Filmibeat

English summary
Recently Tamil Actor Madhavan wax statue unveiled in Bangalore. The wax statue of Madhavan at Joy Allukkas on Dickenson Road attracted many of his fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X