ನಟಿ ಜಯಶ್ರೀ ರಾಜ್ ಸಿನಿಮಾ ಯಾನದಲ್ಲಿ ಜರ್ನಲಿಸ್ಟ್

"ನನ್ನದು ಅಣ್ಣಾಬಾಂಡ್ ನಲ್ಲಿ ಜರ್ನಲಿಸ್ಟ್ ಪಾತ್ರ. ಪ್ರಾಮುಖ್ಯತೆ ಇರುವ ಪಾತ್ರಕ್ಕಿಂತ, ಪಾತ್ರಕ್ಕಿರುವ ಪ್ರಾಮುಖ್ಯತೆಯೇ ನನಗೆ ಮುಖ್ಯ" ಎಂದಿದ್ದಾರೆ ಜಯಶ್ರೀ. ಈಗಾಗಲೇ 'ಮನ್ವಂತರ ಹಾಗೂ 'ಮುಕ್ತ' ದಲ್ಲಿ ಜರ್ನಲಿಸ್ಟ್ ಪಾತ್ರದಲ್ಲೇ ಮಿಂಚಿರುವ ಈಕೆಗೆ ಅಣ್ಣಾ ಬಾಂಡ್ ನಲ್ಲಿ ಕೂಡ ಅದೇ ಪಾತ್ರ ದೊರಕಿರುವುದು ಹೆಚ್ಚು ಸಂತಸ ತಂದಿದೆಯಂತೆ.
"ಫೆಮಿನಿಸಂ' ಕುರಿತ ಪಾತ್ರ ಮಾಡುವುದರಲ್ಲಿ ಹೆಚ್ಚಿನ ಆಸಕ್ತಿ ಹಾಗೂ ತುಂಬು ಕುಟುಂಬವೆಂದರೆ ನನಗೆ ಪಂಚಪ್ರಾಣ" ಎಂಬುದು ಈಕೆಯ ಮಾತು. ಆಕೆಗೆ ಸಾಕಷ್ಟು ದೊಡ್ಡ ಮಗಳಿದ್ದರೂ ಇನ್ನೂ ಫಿಟ್ ಅಂಡ್ ಸ್ಮಾರ್ಟ್ ಆಗಿದ್ದಾರೆ. ಈಕೆಗೆ ಸಾಕಷ್ಟು ಅಭಿಮಾನಿಗಳೂ ಕೂಡ ಇದ್ದಾರೆ. ಅಣ್ಣಾ ಬಾಂಡ್ ಚಿತ್ರದಲ್ಲಿನ ಅಭಿನಯಕ್ಕೆ ಆಕೆಗೆ ಪ್ರಶಂಸೆ ಕಟ್ಟಿಟ್ಟ ಬುತ್ತಿ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು. (ಒನ್ ಇಂಡಿಯಾ ಕನ್ನಡ)
English summary
Actress Jayashri Raj acts in Journalist Role in Puneet Annabond movie. She is a famous dancer as well as anchor also.


Click it and Unblock the Notifications