ಚಿತ್ರನಟಿ ರಾಧಿಕಾಗೆ ಹೆಣ್ಣು ಮಗು!
ಕನ್ನಡ ಚಿತ್ರರಂಗದ ಮಾಜಿ ತಂಗಿ ರಾಧಿಕಾ ಮಂಗಳವಾರ(ನ.24) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರು ಜಯನಗರದ ಸುಸಜ್ಜಿತ ಹೆರಿಗೆ ಆಸ್ಪತ್ರೆ ಕ್ರೆಡಲ್ ನಲ್ಲಿ ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುಳಿವು ಸಿಕ್ಕ ಸುದ್ದಿ ಮಧ್ಯಮಗಳು ಆಸ್ಪತ್ರೆಗೆ ತಲುಪಿದಾಗ ಅಷ್ಟೊತ್ತಿಗಾಗಲೇ ರಾಧಿಕಾ ಅಲ್ಲಿ ಜಾಗ ಖಾಲಿ ಮಾಡಿದ್ದರು!
ಈ ಹಿಂದೆ ರಾಧಿಕಾ ಮಾಡಿದ ನಾಗಮಂಡಲ ಪೂಜೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಆಹ್ವಾನಿಸಿ ಸುದ್ದಿ ಮಾಡಿದ್ದರು. ತಾಯಿ ಮತ್ತು ಮಗು ಆರೋಗ್ಯದಿಂದ ಇರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ. ವೈದ್ಯರ ಸಲಹೆಯ ಮೇರೆಗೆ ಆಕೆ ಪ್ರತಿ ಹದಿನೈದು ದಿನಗಳಿಗೊಮ್ಮೆ ರಾಧಿಕಾ ಈ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು.
ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರಬೇಕಾದರೆ ಬುರ್ಕಾ ಧರಿಸಿ ಅವರು ಬರುತ್ತಿದ್ದರು ಎನ್ನಲಾಗಿದೆ. ಪ್ರಾಣ ಬೆದರಿಕೆ ಇರುವ ಹಿನ್ನೆಲೆಯಲ್ಲಿ ತಾವು ಚಿಕಿತ್ಸೆ ಪಡೆಯುತ್ತಿರುವ ವಿಷಯ ಯಾರಿಗೂ ತಿಳಿಸಬೇಡಿ ಎಂದು ರಾಧಿಕಾ ಮನೆಯವರು ಆಸ್ಪತ್ರೆ ಸಿಬ್ಬಂದಿಗೆ ತಾಕೀತು ಮಾಡಿದ್ದರಂತೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











