ಕವಿರಾಜ್ ಸಾಹಿತ್ಯಕ್ಕೆ ಶುಭಾಪುಂಜಾ ನರ್ತನ

By Staff

ಕನ್ನಡದಲ್ಲಿ ಸಾಕಷ್ಟು ಗೀತರಚನೆಕಾರರಿಬಹುದು. ಆದರೆ ಇತ್ತೀಚೆಗೆ ಕೇಳಿ ಬರುತ್ತಿರುವ ಪ್ರಸಿದ್ದ ಗೀತಸಾಹಿತಿಗಳಲ್ಲಿ ಕವಿರಾಜ್ ಸಹ ಒಬ್ಬರು. ಪ್ರೀತಿಗೆ ಸಂಬಂಧಿಸಿದಂತೆ ಹಲವು ಗೀತೆಗಳನ್ನು ರಚಿಸಿರುವ ಕವಿರಾಜ್ ಪ್ರೀತಿಯ ಹಂಗಾಮ ಚಿತ್ರಕ್ಕೂ ಕೆಲವು ಗೀತೆಗಳನ್ನು ರಚಿಸಿದ್ದಾರೆ. ಅವರ ರಚನೆಯ 'ಮೊದಮೊದಲು ಇಂತಾ ಭಾವನೆ ಮೊದಮೊದಲು..ಹೃದಯಗಳು, ಹೃದಯಗಳು ಇಂದು ಅದಲು ಬದಲು' ಎಂಬ ಗೀತೆ ರಾಜಾಜಿನಗರದ ಖಾಸಗಿ ನಿವಾಸದಲ್ಲಿ ವಿವೇಕ್‌ರಾಜ್ ಹಾಗೂ ಶುಭಾಪುಂಜಾ ಅಭಿನಯದಲ್ಲಿ ಚಿತ್ರೀಕೃತವಾಗಿದೆ. ಮದನ್-ಹರಿಣಿ ಈ ಗೀತೆಗೆ ನೃತ್ಯ ಸಂಯೋಜಿಸಿದ್ದಾರೆ.

ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ವಿವೇಕ್‌ರಾಜ್ ಚಿತ್ರದ ನಿರ್ದೇಶಕರೂ ಹೌದು. ಆರು ಹಾಡುಗಳಿರುವ ಈ ಚಿತ್ರಕ್ಕೆ ರಾಜ್‌ಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಚಂದ್ರಶೇಖರ್ ಛಾಯಾಗ್ರಹಣ, ಎಂ.ಎಸ್.ರಮೇಶ್ ಹಾಗೂ ಆರ್.ರಾಜಶೇಖರ್ ಸಂಭಾಷಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿವೇಕ್‌ರಾಜ್, ಶುಭಾ ಪುಂಜಾ, ಅವಿನಾಶ್, ಊರ್ವಶಿ, ನಂದ, ಪ್ರಕಾಶ್ ಮುಂತಾದವರಿದ್ದಾರೆ.
******
ಮರುಭೂಮಿಗೆ ಮತ್ತಷ್ಟು ಚಿತ್ರೀಕರಣ

ಪ್ರಕಾಶ್ ಅಂಗಡಿ ಅರ್ಪಿಸಿ ಭುವನೇಶ್ವರಿ ಮೂವಿ ಮೇಕರ್ಸ್ ಅವರ ಪ್ರಥಮ ಚಿತ್ರ ಮರುಭೂಮಿಗೆ ನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ನಿರ್ದೇಶಕ ಋಷಿ ಬರೆದಿರುವ ' ವಿಷ ಕುಡಿಯೊ ಬದಲು ನಾನು ವಿಸ್ಕಿ ಕುಡಿತ್ತೀನೊ....ಕುಡಿಯೋದು ಬೇಡ ಅಂದ್ರೆ ನಾ ಇಲ್ಲೇ ಪ್ರಾಣ ಬಿಡ್ತೀನೊ' ಎಂಬ ಗೀತೆ ಇತ್ತೀಚೆಗೆ ನಗರದ ಮತ್ತಿಕೆರೆ ಮೇಲುಸೇತುವೆಯ ಬಳಿ ಚಿತ್ರೀಕೃತವಾಗಿದೆ. ನಾಯಕ ಸಂಜೀವ್ ಹಾಗೂ ಸಹಕಲಾವಿದರು ಹರಿಕೃಷ್ಣ ನೃತ್ಯ ನಿರ್ದೇಶನದಲ್ಲಿ ಈ ಹಾಡಿಗೆ ಹೆಜ್ಜೆಹಾಕಿದರು.

ಸುದೀಪ್ ನಿರ್ದೇಶನದ ಮೈ ಆಟೋಗ್ರಾಫ್ ಚಿತ್ರದಲ್ಲಿ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಂಜೀವಕುಮಾರ್ ಈ ಚಿತ್ರದ ನಾಯಕ. ಸಂಚಿಕ ನಾಯಕಿಯಾಗಿ ನಟಿಸುತ್ತಿರುವ ಚಿತ್ರದ ಉಳಿದ ತಾರಾಬಳಗದಲ್ಲಿ ಸನತ್‌ಕುಮಾರ್, ಪದ್ಮಾವಾಸಂತಿ, ಅಮಿತ್ ಮುಂತಾದವರಿದ್ದಾರೆ. ನಿರ್ದೇಶಕ ಋಷಿ ಅವರೇ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರೇ ಮರುಭೂಮಿಯ ನಿರ್ಮಾಪಕರು ಕೂಡ. ಉಳಿದಂತೆ ಮಧುರ ಸಂಗೀತ, ಶಂಕರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X