ಪರಪುರುಷನೊಂದಿಗೆ 'ಮದನ್ಮೋಹಿನಿ' ಸೋನಾ ಹೈಡೆನ್
ದಕ್ಷಿಣ ಭಾರತದ ಹೊಸ ಸೆಕ್ಸ್ ಬಾಂಬ್ ಸೋನಾ ಹೈಡೆನ್ ಗೊತ್ತಲ್ಲ. ಹೆಸರಾಂತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಪುತ್ರ ಎಸ್ಪಿಬಿ ಚರಣ್ ಮೇಲೆ ರೇಪ್ ಕೇಸ್ ಹಾಕಿ ಸುದ್ದಿ ಮಾಡಿದ್ದ ತಾರೆ. ಈಗ ಈಕೆ ಮತ್ತೊಂದು ಐನಾತಿ ಬಾಂಬ್ ರೆಡಿ ಮಾಡಿಕೊಂಡು ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗುತ್ತಿದ್ದಾರೆ.
ಈಕೆಯ ಹೊಸ ಸೆಕ್ಸ್ ಬಾಂಬ್ ಹೆಸರು 'ಮದನ್ಮೋಹಿನಿ'. ಈ ಚಿತ್ರದ ಸ್ಟಿಲ್ಸ್ ನೋಡಿದರೆ ಯಾವುದೇ ಶೃಂಗಾರ ಚಿತ್ರಕ್ಕೂ ಕಡಿಮೆ ಇಲ್ಲದಂತಿವೆ. ಈ ಚಿತ್ರದ ಕತೆ ಏನೆಂದರೆ, ಪತಿಯ ಕಣ್ಣುತಪ್ಪಿಸಿ ಹದಿಹರೆಯದ ಯುವಕನ ಜತೆ ಕಣ್ಣಾಮುಚ್ಚಾಲೆ ಆಡುತ್ತಿರುತ್ತಾಳೆ. ಕಡೆಗೆ ಒಂದು ದಿನ ಗಂಡನ ಕೈಗೆ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬೀಳುತ್ತಾಳೆ. ನಂತರ ಏನಾಗುತ್ತದೆ ಎಂಬುದೇ ಚಿತ್ರದ ಕಥಾ ಹಂದರ.
ರೊಮ್ಯಾನ್ಸ್, ಮರ್ಡರ್ ಮಿಸ್ಟರಿ ಅಂಶಗಳೂ ಚಿತ್ರದಲ್ಲಿವೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಸತ್ಯಂ. ಎಸ್ಪಿಬಿ ಚರಣ್ ಮೇಲಿನ ರೇಪ್ ಕೇಸ್ ಹಿಂಪಡೆದಿದ್ದ ಈಕೆ ಕೊಂಚ ಕಾಲ ರಿಲ್ಯಾಕ್ಸ್ ಆಗಲು ಇತ್ತೀಚೆಗೆ ವಿದೇಶಕ್ಕೆ ಹಾರಿದ್ದರು. ಈಗ ಮತ್ತೆ ಸ್ವದೇಶಕ್ಕೆ ಆಗಮಿಸಿದ್ದು 'ಮದನ್ಮೋಹಿನಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.(ಏಜೆನ್ಸೀಸ್)


Click it and Unblock the Notifications











