Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಐಶ್ವರ್ಯ ಹೊಸ 'ಕನಸಿನ ಕನ್ಯೆ': ಹೇಮಾಮಾಲಿನಿ ಘೋಷಣೆ
ನನ್ನ 'ಕನಸಿನ ಕನ್ಯೆ' ಎನ್ನುವ ಬಿರುದನ್ನು ಮಾಜಿ ವಿಶ್ವ ಸುಂದರಿ, 37 ವರ್ಷದ ಐಶ್ವರ್ಯ ರೈ ಬಚ್ಚನ್ ಅವರಿಗೆ ಹಸ್ತಾಂತರಿಸಲು ಬಯಸಿದ್ದೇನೆ ಎಂದು ಕನಸಿನ ಕನ್ಯೆ ಬಿರುದಾಂಕಿತೆ, ಬಾಲಿವುಡ್‌ನ ಹಿರಿಯ ನಟಿ ಮತ್ತು ಅಪ್ಪಟ ನೃತ್ಯಗಾತಿ ಹೇಮಾಮಾಲಿನಿ ತಿಳಿಸಿದ್ದಾರೆ.
'ಕನಸಿನ ಕನ್ಯೆ' ಕೋಟಿ ರುಗೆ ಬಿಕರಿ! : ಒಂದು ವೇಳೆ ಇಂದಿನ ನಟಿಯರಲ್ಲಿ ಕನಸಿನ ಕನ್ಯೆಯನ್ನು ಆಯ್ಕೆಮಾಡಲು ನನ್ನಲ್ಲಿ ತಿಳಿಸಿದರೆ ನಾನು ಖಂಡಿತವಾಗಿಯೂ ಐಶ್ವರ್ಯ ರೈ ಅವರನ್ನು ಆಯ್ಕೆ ಮಾಡುತ್ತೇನೆ ಎಂದು ಹೇಮಾಮಾಲಿನಿ ಹೇಳಿದ್ದಾರೆ.
ಪ್ರಸ್ತುತ ದಿನಗಳಲ್ಲಿ ನಟಿಮಣಿಯರಲ್ಲಿ ಹಲವಾರು ಕನಸಿನ ಕನ್ಯೆಯರಿದ್ದಾರೆ. ಹೆಚ್ಚಿನ ನಟಿಯರು ಸ್ಪುರದ್ರೂಪಿಯಾಗಿದ್ದಾರೆ. ಅವರು ತಮ್ಮ ಹೆಸರನ್ನು ತಾವೇ ಗಳಿಸಿಕೊಂಡಿದ್ದಾರೆ ಅಂತವರಲ್ಲಿ ವಿಶೇಷವಾಗಿ ಐಶ್ವರ್ಯಾ. ಆದ್ದರಿಂದ ನಾನು ನನ್ನ ಕನಸಿನ ಕನ್ಯೆ ಎಂಬ ಬಿರುದನ್ನು ಐಶ್ವರ್ಯಗೆ ನೀಡಲಿದ್ದೇನೆ ಎಂದು ಹೇಮಾ ತಿಳಿಸಿದ್ದಾರೆ.
ಈ ಗೌರವವನ್ನು ಐಶ್ಚರ್ಯಗೆ ನೀಡಲು ಅವರು ಕೋಟಿ ರು. ನನಗೆ ಪಾವತಿಸ ಬೇಕಾಗಿದೆ ಎಂದು 62 ರ ಹರೆಯದ ನಟಿ ಹೇಮಮಾಲಿನಿ ತಮಾಷೆಗಾಗಿ ತಿಳಿಸಿದ್ದಾರೆ. ನಾನು ಜುಲೈ ಪ್ರಥಮ ವಾರದಲ್ಲಿ ಬಿಡುಗಡೆಗೊಳ್ಳಲಿರುವ ಅಮಿತಾಭ್ ಅಭಿನಯದ 'ಬುಡ್ಡಾ ಹೋಗಾ ತೇರ ಬಾಪ್' ಚಿತ್ರವನ್ನು ನೋಡಲು ಕಾದುಕುಳಿತ್ತಿರುವುದಾಗಿ ತಿಳಿಸಿದ್ದಾರೆ.