For Quick Alerts
  ALLOW NOTIFICATIONS  
  For Daily Alerts

  ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮರಳಿ ಕನ್ನಡ ಗೂಡಿಗೆ

  By Rajendra
  |

  ತಮಿಳು ಚಿತ್ರರಂಗಕ್ಕೆ ವಲಸೆ ಹೋಗಿದ್ದ ನಟ ಅರ್ಜುನ್ ಸರ್ಜಾ ಮರಳಿ ಗೂಡಿಗೆ ವಾಪಸಾಗಿದ್ದಾರೆ. ಅವರನ್ನು ಮತ್ತೆ ವಾಪಾಸು ಕರೆಸಿಕೊಂಡವರು ನೈಸ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್ ಖೇಣಿ. ಅವರು ನಿರ್ಮಿಸಲಿರುವ ಹೊಸ ಚಿತ್ರಕ್ಕೆ 'ಪ್ರಸಾದ್' ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರದ ನಾಯಕ ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ.

  ಈ ಹಿಂದೆ ಅರ್ಜುನ್ ಸರ್ಜಾ ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ 'ಕಾಂಟ್ರಾಕ್ಟ್' ಚಿತ್ರವನ್ನು ಒಪ್ಪಿಕೊಂಡಿದ್ದರು. ಚಿರಂಜೀವಿ ಸರ್ಜಾ ಅಭಿನಯದ 'ವಾಯುಪುತ್ರ' ಚಿತ್ರದಲ್ಲಿ ಅರ್ಜುನ್ ಸರ್ಜಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೂ ಮುನ್ನ 'ಶ್ರೀ ಮಂಜುನಾಥ' ಚಿತ್ರದಲ್ಲಿ ಅರ್ಜುನ್ ಅಭಿನಯಿಸಿದ್ದರು.

  ಮನೋಜ್ ಎಂಬುವವರು ಪ್ರಸಾದ್ ಚಿತ್ರಕ್ಕೆಆಕ್ಷನ್, ಕಟ್ ಹೇಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಯುಗಾದಿ ಹೊತ್ತಿಗೆ ಈ ಚಿತ್ರ ಸೆಟ್ಟೇರಲಿದೆಯಂತೆ. ಅಂದಹಾಗೆ ಶ್ರೀಮಂಜುನಾಥ ನಂತರ ಮತ್ತೆ ದ್ವಿಭಾಷಾ ಚಿತ್ರ ಸೂತ್ರ ಹಿಡಿದುಕೊಂಡು ಬಂದಿದ್ದ ಅರ್ಜುನ್ ಸರ್ಜಾಈಗ ಮತ್ತೊಮ್ಮೆ ಕನ್ನಡದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮುಂದಾಗಿದ್ದಾರೆ.

  English summary
  Action King Arjun Sarja to act in Kannada film titled as Prasad producing by Ashok Kheni. Earlier Arjun Sarja acted in Sri Manjunatha and he made a guest appearance in his nephew Chiranjeevi Sarja lead movie Vaayuputra. Prasad movie suppose to be launch on Ugadi festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X