ಕನ್ನಡಕ್ಕೆ 'ಚಿಕ್ಕು ಬುಕ್ಕು' ಹುಡುಗಿ ಪ್ರೀತಿಕಾ ರಾವ್

ಕೆಲವು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿರುವ ಪ್ರೀತಿಕಾಗೆ 'ರೆಬೆಲ್' ಚೊಚ್ಚಲ ಕನ್ನಡ ಚಿತ್ರವಾಗಲಿದೆ. ತಮಿಳಿನ 'ಚಿಕ್ಕು ಬುಕ್ಕು' ಹಾಗೂ ತೆಲುಗಿನ 'ಪ್ರಿಯುಡು' ಚಿತ್ರಗಳಲ್ಲಿ ಪ್ರೀತಿಕಾ ಅಭಿನಯಿಸಿದ್ದಾರೆ. ಮುಂದೊಂದು ದಿನ ಬಾಲಿವುಡ್‌ಗೂ ಲಗ್ಗೆ ಹಾಕುವ ಸೂಚನೆಗಳಿವೆ.
ದಕ್ಷಿಣದ ಚಿತ್ರಗಳಲ್ಲಿ ಅಭಿನಯಿಸಿ ಒಂದಷ್ಟು ಎಕ್ಸ್‌ಪೀರಿಯನ್ಸ್ ಪಡೆದುಕೊಂಡು ಬಾಲಿವುಡ್‌ಗೆ ಜಿಗಿಯುವ ಕನಸು ಪ್ರೀತಿಕಾರದ್ದು. ಬಹುಶಃ 2012ರ ಕೊನೆಗೆ ಬಾಲಿವುಡ್ ಮತ್ತು ಮಲಯಾಳಂ ಚಿತ್ರರಂಗಕ್ಕೆ ಅಡಿಯಿಡುತ್ತೇನೆ ಎಂದಿದ್ದಾರೆ ಪ್ರೀತಿಕಾ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ 'ರಕ್ತಾಕ್ಷ' ಚಿತ್ರ ಪ್ರೀತಿಕಾರ ಚೊಚ್ಚಲ ಕನ್ನಡ ಚಿತ್ರವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಚಿತ್ರ ಸದ್ಯಕ್ಕೆ ನಿಲ್ಲಿಸಲಾಗಿದೆ.
ಮಂಬೈನಲ್ಲಿ ಹುಟ್ಟಿದ ಪ್ರೀತಿಕಾ ಓದಿದ್ದು ಇತಿಹಾಸ. ಬಳಿಕ ಅಡ್ವರ್ಟೆಸಿಂಗ್, ಮಾಸ್ ಕಮ್ಯುನಿಕೇಷನ್ ಅಂಡ್ ಜರ್ನಲಿಸಂನಲ್ಲಿ ಡಿಪ್ಲೊಮೊ ಪಡೆದಿದ್ದಾರೆ. ಪ್ರೀತಿಕಾ ಅವರ ಮನೆ ಭಾಷೆ ಕೊಂಕಣಿ. ಅಕ್ಕ ಅಮೃತಾ ರಾವ್ ಈಗಾಗಲೆ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಅಕ್ಕನ ಹಾದಿಯಲ್ಲೇ ಪ್ರೀತಿಕಾ ಹೆಜ್ಜೆ ಹಾಕುತ್ತಿದ್ದಾರೆ. (ಏಜೆನ್ಸೀಸ್)


Click it and Unblock the Notifications