ಸ್ವಿಜರ್ ಲ್ಯಾಂಡ್ ನಲ್ಲಿ ಚಿರಂಜೀವಿ, ಕೃತಿ ಡಾನ್ಸ್
ಚಿರಂಜೀವಿಸರ್ಜಾ ನಾಯಕನಾಗಿ ನಟಿಸಿರುವ 'ಚಿರು' ಚಿತ್ರದ ಹಾಡುಗಳು ಸ್ವಿಜರ್‌ಲ್ಯಾಂಡ್‌ನ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ. ಗೌಸ್ ರವರು ಬರೆದಿರುವ ''ಇಲ್ಲೇ ಇಲ್ಲೇ ಎಲ್ಲೋ ನನ್ನ ಮನಸು ಕಾಣಿಯಾಗಿದೆ...'' ಹಾಗೂ ಜಯಂತ್ ಕಾಯ್ಕಿಣಿ ರಚನೆಯ ''ನಿನ್ನ ಕಣ್ಣಲಿದೇ ಒಂದು ಸಂಭಾಷಣೆ ಇಂದು ನಿನ್ನಲಿದೆ ಏನೋ ಆಕರ್ಷಣೆ..." ಎಂಬ ಹಾಡುಗಳಿಗೆ ಹರ್ಷ ನೃತ್ಯ ನಿರ್ದೇಶನದಲ್ಲಿ ಚಿರಂಜೀವಿಸರ್ಜಾ ಹಾಗೂ ಕೃತಿ ಹೆಜ್ಜೆ ಹಾಕಿದ್ದಾರೆ.
ಈ ಹಾಡುಗಳ ಚಿತ್ರೀಕರಣದೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ನಿರ್ದೇಶಕ ಮಹೇಶ್‌ಬಾಬು ತಿಳಿಸಿದ್ದಾರೆ. ಚಿತ್ರಕ್ಕೆ ಒಟ್ಟು 45ದಿನಗಳ ಚಿತ್ರೀಕರಣ ನಡೆದಿದೆ. ಮಾರ್ಸ್ ಫಿಲಂಸ್ ಲಾಂಛನದಲ್ಲಿ ಸುರೇಶ್‌ಜೈನ್ ನಿರ್ಮಿಸುತ್ತಿರುವ 'ಚಿರು' ಚಿತ್ರಕ್ಕೆ ಮಹೇಶ್‌ಬಾಬು ರವರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಸ್ವಾಮೀಜಿ ಕಥೆ, ಸುಂದರನಾಥಸುವರ್ಣ ಛಾಯಾಗ್ರಹಣ, ಶ್ರೀ(ಕ್ರೇಜಿಮೈಂಡ್ಸ್) ಸಂಕಲನ, ರವಿವರ್ಮ ಸಾಹಸ, ಮುರುಳಿ, ಹರ್ಷ ನೃತ್ಯ ಸಂಯೋಜನೆಯಿರುವ 'ಚಿರು ಚಿತ್ರದ ತಾರಾಬಳಗದಲ್ಲಿ ಚಿರಂಜೀವಿಸರ್ಜಾ, ಕೃತಿ, ರಂಗಾಯಣರಘು, ಪದ್ಮಾವಾಸಂತಿ, ಬುಲೆಟ್‌ಪ್ರಕಾಶ್, ಕಿರಣ್(ಹಾಗೆಸುಮ್ಮನೆ), ಪಿ.ಎನ್.ಸತ್ಯ, ನರಸಿಂಹಜೋಶಿ ಮುಂತಾದವರಿದ್ದಾರೆ.


Click it and Unblock the Notifications











