ನಿಸರ್ಗದ ಮಡಿಲಲ್ಲಿ ಚಿರಂಜೀವಿ, ಕೃತಿ ಡ್ಯುಯಟ್
ಸದಾ ಹಚ್ಚಹಸಿರಿನಿಂದ ಕಂಗೊಳಿಸುವ, ನಿಸರ್ಗ ಮಾತೆಯ ತವರುಮನೆಯಂತಿರುವ ಸಕಲೇಶಪುರದಲ್ಲಿ ಮಾರ್ಸ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಚಿರು' ಚಿತ್ರದ ಹಾಡೊಂದು ಚಿತ್ರೀಕರಣಗೊಂಡಿದೆ. ಮಹೇಶ್‌ಬಾಬು ರಚಿಸಿರುವ 'ಒಲವನ್ನು ಹೇಳು ಬಾರೋ ಒಲವನ್ನು ಸೇರು ಬಾರೋ' ಎಂಬ ಗೀತೆಯ ಚಿತ್ರೀಕರಣದಲ್ಲಿ ಚಿರಂಜೀವಿಸರ್ಜಾ ಹಾಗೂ ಕೃತಿ ಪಾಲ್ಗೊಂಡಿದ್ದರು. ಹರ್ಷ ಈ ಗೀತೆ ನೃತ್ಯ ಸಂಯೋಜಿಸಿದ್ದಾರೆ.
ಈ ಹಾಡನ್ನು ರಚಿಸುವ ಮೂಲಕ ನಿರ್ದೇಶಕ ಮಹೇಶ್‌ಬಾಬು ಗೀತರಚನೆಕಾರರಾಗೂ ಪರಿಚಿತರಾಗುತ್ತಿದ್ದಾರೆ. ಚಿತ್ರಕ್ಕೆ ಮೂರು ಹಾಡಿನ ಚಿತ್ರೀಕರಣ ಹಾಗೂ ರೈಲಿನಲ್ಲಿ ನಡೆಯಬೇಕಾಗಿರುವ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಉಳಿದ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೆಶಕರಾದ ಮಹೇಶ್‌ಬಾಬು.
ಸುರೇಶ್‌ಜೈನ್ ನಿರ್ಮಿಸುತ್ತಿರುವ 'ಚಿರು' ಚಿತ್ರಕ್ಕೆ ನಿರ್ದೇಶಕರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸ್ವಾಮೀಜಿ ಕಥೆ, ಸುಂದರನಾಥಸುವರ್ಣ ಛಾಯಾಗ್ರಹಣ, ಗಿರಿಧರ್ ಸಂಗೀತ, ಶ್ರೀ(ಕ್ರೇಜಿಮೈಂಡ್ಸ್) ಸಂಕಲನ, ರವಿವರ್ಮ ಸಾಹಸ, ಮುರುಳಿ, ಹರ್ಷ ನೃತ್ಯ ಸಂಯೋಜನೆಯಿದೆ. 'ಚಿರು' ಚಿತ್ರದ ತಾರಾಬಳಗದಲ್ಲಿ ಚಿರಂಜೀವಿಸರ್ಜಾ, ಕೃತಿ, ರಂಗಾಯಣರಘು, ಪದ್ಮಾವಾಸಂತಿ, ಬುಲೆಟ್‌ಪ್ರಕಾಶ್, ಕಿರಣ್(ಹಾಗೆಸುಮ್ಮನೆ), ಪಿ.ಎನ್.ಸತ್ಯ, ನರಸಿಂಹಜೋಶಿ ಮುಂತಾದವರಿದ್ದಾರೆ.


Click it and Unblock the Notifications











