ಡೈಲಾಗ್ ಕಿಂಗ್ ಸಾಯಿಕುಮಾರ್ ಪುತ್ರನ ಎರಡನೇ ಇನ್ನಿಂಗ್ಸ್

ಅದಿ ಅಭಿನಯಿಸಲಿರುವ ಎರಡನೇ ಚಿತ್ರಕ್ಕೆ 'ಲವ್ಲಿ' ಎಂದು ಹೆಸರಿಡಲಾಗಿದೆ. ತೆಲುಗಿನ ಸೂಪರ್ ಹಿಟ್ ಪತ್ರಿಕೆಯ ಮಾಲೀಕ ಬಿಎ ರಾಜು ಚಿತ್ರದ ನಿರ್ಮಾಪಕರು. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ನಿರ್ದೇಶಕಿ ಜಯ. ಈ ಚಿತ್ರ ಸಂಕ್ರಾಂತಿಗೆ ತೆರೆಕಾಣಲಿದೆಯಂತೆ. ವಿಷಯ ಅದಲ್ಲ ಆದಿ ಕನ್ನಡಕ್ಕೂ ಬರುವ ದಿನಗಳು ದೂರದಲ್ಲಿಲ್ಲ ಎಂಬುದು.
ಈ ಹಿಂದೊಮ್ಮೆ ಸಾಯಿಕುಮಾರ್ ತಮ್ಮ ಮಗನ ಬಗ್ಗೆ ಪ್ರಸ್ತಾಪಿಸುತ್ತಾ, ಯಾವುದೋ ಕಾರ್ಯಕ್ರಮವೊಂದರಲ್ಲಿ ಸುಂದರ ಯುವತಿಯೊಬ್ಬಳು ಇವರ ಬಳಿ ಬಂದರಂತೆ. ಸಾಯಿಕುಮಾರ್ ಆಹಾ ಎಂಥಾ ಚೆಲುವೆ ಎಂದು ಮನಸಿನಲ್ಲೇ ಅಂದುಕೊಂಡು ಎಸ್ ಎಂದಾಗ, ಆ ಯುವತಿ ಅಂಕಲ್ ನಿಮ್ಮ ಮಗ ಆದಿ ಅಂದರೆ ನನಗೆ ತುಂಬಾ ಇಷ್ಟ. ಅವರ ಅಭಿನಯ ಸಖತ್ತಾಗಿ ಎಂದರಂತೆ. ತಮ್ಮನ್ನು ಅಂಕಲ್ ಎಂದ ಬೇಜಾರಿಗಿಂತಲೂ ತಮ್ಮ ಪುತ್ರನ ಅಭಿನಯವನ್ನು ಹೊಗಳಿದ್ದು ಸಾಯಿಕುಮಾರ್‌ಗೆ ಹೆಚ್ಚು ಖುಷಿ ಕೊಟ್ಟಿತ್ತು. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Dialogue King Saikumar’s son Aadi second innings starts in Tollywood. Now he is all set to act in a new film in Telugu, the film has been titled "Lovely".


Click it and Unblock the Notifications











