twitter
    For Quick Alerts
    ALLOW NOTIFICATIONS  
    For Daily Alerts

    ಛಾಯಾಗ್ರಹಣ, ಸೌಂಡ್ ಇಂಜಿನಿಯರಿಂಗ್ ಡಿಪ್ಲೊಮಾ

    By Rajendra
    |

    Cinematography
    ಬಹಳಷ್ಟು ಮಂದಿಗೆ ಸಿನಿಮಾ ಕ್ಷೇತ್ರದಲ್ಲಿ ಪ್ರವೇಶಿಸಬೇಕು ಎಂಬ ಆಸಕ್ತಿ ಇರುತ್ತದೆ. ಆದರೆ ಹೇಗೆ ಎಂಬುದೇ ಪ್ರಶ್ನೆ. ಆಸಕ್ತಿಯ ಜೊತೆಗೆ ವಿದ್ಯಾರ್ಹತೆಯೂ ಇದ್ದರೆ ಇಲ್ಲಿದೆ ನೋಡಿ ಒಂದು ಸುವರ್ಣ ಅವಕಾಶ. ಸಿನಿಮಾದ ಕಣ್ಣು ಛಾಯಾಗ್ರಾಹಕ ಹಾಗೆಯೇ ಕಿವಿ ಸೌಂಡ್ ರೆಕಾರ್ಡಿಂಗ್ ಅಂಡ್ ಇಂಜಿನಿಯರ್. ಚಿತ್ರೋದ್ಯಮದಲ್ಲಿ ಇವರಿಗೆ ಬೇಡಿಕೆ ಅತ್ಯಧಿಕವಾಗಿದೆ. ಮನಸ್ಸು ಮಾಡಿದರೆ ನೀವು ಸುಂದರನಾಥ ಸುವರ್ಣ ಆಗಬಹುದು.

    ಇಂದು ಚಿತ್ರರಂಗದಲ್ಲಿ ಹೆಸರು ಮಾಡಿರುವ ವಿ.ಕೆ.ಮೂರ್ತಿ, ಗೋವಿಂದ ನಿಹಲಾನಿ, ಬಿ.ಸು.ಸುರೇಶ್, ಕೆ.ಸಿ.ನರಸಿಂಹಯ್ಯ, ಮಂಜುನಾಥ್ ಇವರೆಲ್ಲಾ ಇಲ್ಲಿ ಶಿಕ್ಷಣ ಪಡೆದವರೆ. ನೀವು ಅವರಂತೆ ಆಗಬೇಕು ಎಂಬ ಆಸಕ್ತಿ, ಕುತೂಹಲ ಇದ್ದರೆ ಮುನ್ನುಗ್ಗಿ. ಬೆಸ್ಟ್ ಆಫ್ ಲಕ್.

    ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ವತಿಯಿಂದ ಪ್ರಸಕ್ತ 2011-12 ನೇ ಸಾಲಿನ ಡಿಪ್ಲೊಮಾ ಸಿನೆಮಾಟೊಗ್ರಫಿ ಮತ್ತು ಸೌಂಡ್ ರೆಕಾರ್ಡಿಂಗ್ ಅಂಡ್ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ನೀಡಲಾಗುತ್ತಿದೆ.

    ಇದುವರೆಗೂ ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿದ್ದು, ನೂತನ ಸರ್ಕಾರಿ ಆದೇಶದ ಪ್ರಕಾರ ಹೊರ ರಾಜ್ಯದ ಅಭ್ಯರ್ಥಿಗಳಿಗೆ ಶೇ. 50 ರಷ್ಟು ಪ್ರವೇಶಾವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಕರ್ನಾಟಕ ದ್ವಿತೀಯ ಪಿ.ಯು.ಸಿ ವಿಜ್ಞಾನ (ಪಿ.ಸಿ.ಎಂ) ಅಥವಾ ತತ್ಸಮಾನ ಹಾಗೂ ಹೊರ ರಾಜ್ಯಗಳ ಅಭ್ಯರ್ಥಿಗಳು ತತ್ಸಮಾನ ಪರೀಕ್ಷೆಯಲ್ಲಿ (ಪಿ.ಸಿ.ಎಂ) ಎಲ್ಲಾ ವಿಷಯದಲ್ಲಿ ಒಟ್ಟಾರೆ ಶೇ 35 ಅಂಕ ಪಡೆದು ತೇರ್ಗಡೆಯಾಗಿರಬೇಕು.

    ಅರ್ಜಿಗಳನ್ನು ಪ್ರಾಂಶುಪಾಲರ ಕಛೇರಿ, ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ, ಹೆಸರಘಟ್ಟ ಅಂಚೆ, ಬೆಂಗಳೂರು-88, ಅಥವಾ ಸಿಸಿಟೆಕ್-ಜಿಎಫ್‌ಟಿಐ, 1 ನೇ ಮಹಡಿ, ಇನ್ಸ್‌ಟಿಟ್ಯೂಟ್ ಆಫ್ ಪ್ರಿಂಟಿಂಗ್ ಟೆಕ್ನಾಲಜಿ, ಮಹಾರಾಣಿ ವಿಜ್ಞಾನ ಕಾಲೇಜು ಮುಂಭಾಗ, ಅರಮನೆ ರಸ್ತೆ, ಬೆಂಗಳೂರು-1. ಇಲ್ಲಿಂದ ಖುದ್ದಾಗಿ ಪಡೆಯಬಹುದು.

    ಅಥವಾ ಪ್ರಾಂಶುಪಾಲರು, ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ, ಹೆಸರಘಟ್ಟ, ಬೆಂಗಳೂರು-88, ಇವರ ಹೆಸರಿನಲ್ಲಿ ರು.350 ಗಳ ಡಿ.ಡಿ.ಯನ್ನು ಕಳುಹಿಸಿ ಪಡೆಯಬಹುದು. ಅರ್ಜಿಗಳನ್ನು ನೀಡುವ ಮತ್ತು ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸುವ ಅವಧಿ ದಿ: 25-5-2011 ರಿಂದ 9-6-2011. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂ: 080-28466768, 9448810161, 9008797965. www.filminstitutebangalore.com ಅನ್ನು ಸಂಪರ್ಕಿಸಲು ಸೂಚಿಸಲಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Government Film & Television Institute offers two 3 year Diploma courses in Cinematography and Sound Recording & Engg. The intake of students for each course is 33.
    Thursday, May 26, 2011, 7:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X