ರಾಜ್ ಕುಟುಂಬಿಕರಿಂದ ರಕ್ತದಾನ, ಅನ್ನಸಂತರ್ಪಣೆ
ಕಂಠೀರವ ಸ್ಟುಡಿಯೋದಲ್ಲಿ ವರನಟ ಡಾ.ರಾಜ್ ಕುಮಾರ್ ಅವರ ಸಮಾಧಿಗೆ ಪಾರ್ವತಮ್ಮ ರಾಜ್ ಕುಮಾರ್ ಪೂಜೆ ಸಲ್ಲಿಸುವ ಮೂಲಕ 82ನೇ ಹುಟ್ಟುಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ರಾಜ್ ಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ರಕ್ತದಾನ ಮಾಡಿ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ರಾಜ್ ಅಭಿಮಾನಿಗಳ ಸಂಘದ ಸದಸ್ಯರು, ರಾಜ್ ಅಭಿಮಾನಿಗಳು ಸ್ವಯಂಪ್ರೇರಿತ ರಕ್ತದಾನವನ್ನು ಮಾಡಿ ತಮ್ಮ ನೆಚ್ಚಿನ ನಾಯಕನಿಗೆ ಅಭಿಮಾನದ ಮಹಾಪೂರವನ್ನೇ ಹರಿಸಿದರು. ಶನಿವಾರ (ಏ.24) ಬೆಳಗ್ಗೆಯಿಂದಲೆ ರಾಜ್ ಸಮಾಧಿ ಬಳಿ ರಾಜ್ಯದ ಮೂಲೆಮೂಲೆಗಳಿಂದ ಅಭಿಮಾನಿ ದೇವರುಗಳು ಆಗಮಿಸಿದ್ದರು.
ರಾಜ್ ಹುಟ್ಟುಹಬ್ಬದ ನಿಮಿತ್ತ ಸ್ವಯಂಪ್ರೇರಿತ ರಕ್ತದಾನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ರಾಜ್ ಕುಟುಂಬ ಏರ್ಪಡಿಸಿತ್ತು. ಕನ್ನಡ ಚಿತ್ರರಂಗದ ಹಲವು ನಟ, ನಟಿಯರು ಕಂಠೀರವ ಸ್ಟುಡಿಯೋಗೆ ಆಗಮಿಸಿ ರಾಜ್ ಹುಟ್ಟುಹಬ್ಬ ಆಚರಿಸಿದರು.
ರಾಜ್ ಹುಟ್ಟುಹಬ್ಬ ಏಪ್ರಿಲ್ 24 ಕಂಠೀವರ ಸ್ಟುಡಿಯೋ ರಕ್ತದಾನ ಅಭಿಮಾನಿ ದೇವರು ಪಾರ್ವತಮ್ಮ ರಾಜ್ ಕುಮಾರ್ ಶಿವರಾಜ್ ಕುಮಾರ್ ಪುನೀತ್ ರಾಜ್ ಕುಮಾರ್ rajkumar birthday kanteerava studios blood donation


Click it and Unblock the Notifications