For Quick Alerts
  ALLOW NOTIFICATIONS  
  For Daily Alerts

  ಡಾ. ರಾಜ್ ಕುಮಾರ್ ಪ್ರಶಸ್ತಿ ಪಡೆದವರೇ ಧನ್ಯ

  By Mahesh
  |

  'ಸಿನಿಮಾ ರಂಗ ನಿಂತಿರುವುದೆ ಕಲಾವಿದರಿಂದ ಎಂಬುದನ್ನು ಯಾರೂ ಮರೆಯಬಾರದು' ಎಂದು ಅಪ್ಪಾಜಿ ಹೇಳುತ್ತಿದ್ದರು. ಅಪ್ಪಾಜಿಯ ಕನಸನ್ನು ನನಸು ಮಾಡುವ ಸಣ್ಣ ಕಾರ್ಯ ಎಂದು ರಾಘವೇಂದ್ರ ರಾಜ್ ಭಾವುಕರಾದರು. ಡಾ. ರಾಜ್ ಕುಮಾರ್ ಅವರ 83 ನೇ ಹುಟ್ಟುಹಬ್ಬದ ಅಂಗವಾಗಿ ಡಾ. ರಾಜ್ ಸೌಹಾರ್ದ ಪ್ರಶಸ್ತಿಯನ್ನು ನೀಡಿದ ಡಾ. ರಾಜ್ ಕುಟುಂಬದಲ್ಲಿ ಸಾರ್ಥಕ ಭಾವ ತುಂಬಿತ್ತು.

  ಒಂದು ಲಕ್ಷ ರೂ. ನಗದನ್ನು ಹೊಂದಿರುವ ಪ್ರಶಸ್ತಿಯನ್ನು ಚಿತ್ರರಂಗ ಮೂವರು ಹಿರಿಯ ಕಲಾವಿದರಿಗೆ ನೀಡಿ ರಾಜ್ ಕುಟುಂಬ ತುಂಬಾ ಆತ್ಮೀಯವಾಗಿ ಸನ್ಮಾನಿಸಿದರು. ಕನ್ನಡದ ವರನಟ ಡಾ.ರಾಜ್‌ಕುಮಾರ್‌ರ ಹೆಸರಿನಲ್ಲಿ ಪ್ರತಿವರ್ಷ ಕೊಡಮಾಡುವ 'ಡಾ.ರಾಜ್ ಸೌಹಾರ್ದ ಪ್ರಶಸ್ತಿ"ಯನ್ನು ಈ ಬಾರಿ ಕನ್ನಡ ಸಿನಿಮಾದ ಹಿರಿಯ ನಟ ಶನಿಮಹದೇವಪ್ಪ, ಬೆಂಗಳೂರು ನಾಗೇಶ್ ಮತ್ತು ಹಿರಿಯ ನೃತ್ಯ ನಿರ್ದೇಶಕಿ ದೇವಿ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.

  ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ ಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ಮತ್ತು ಪುನಿತ್ ರಾಜ್‌ಕುಮಾರ್ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಳೆದ ವರ್ಷ ಡಾ. ರಾಜ್ ಸೌಹಾರ್ದ ಪ್ರಶಸ್ತಿಯನ್ನು ಎಸ್ ಕೆ ಭಗವಾನ್ ಹಾಗೂ ಶಾಂತಮ್ಮ ಅವರಿಗೆ ನೀಡಿ ಗೌರವಿಸಲಾಗಿತ್ತು.

  ಅಪ್ಪಾಜಿಯವರ ಜನ್ಮದಿನವಾಗಿದ್ದು, ಮೂರು ಹಿರಿಯ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಹರ್ಷದ ಸಂಗತಿ. ಕಳೆದ ಎರಡು ವರ್ಷಗಳಿಂದ ನಮ್ಮ ಕುಟುಂಬ ಮೂವರು ಕಲಾವಿದರಿಗೆ ಡಾ.ರಾಜ್ ಸೌಹಾರ್ದ ಪ್ರಶಸ್ತಿ ನೀಡುತ್ತಿದೆ ಎಂದರು. ರಾಜ್‌ರ ಹಿರಿಯ ಪುತ್ರ ಶಿವರಾಜ್ ಕುಮಾರ್ ಮಾತನಾಡಿ, ಚಲನ ಚಿತ್ರರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಅಪ್ಪಾಜಿಯ ಹೆಸರಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಅಪ್ಪಾಜಿ ಯಾವಾಗಲೂ ಹಿರಿಯ ಕಲಾವಿದರನ್ನು ತುಂಬ ಗೌರವದಿಂದ ಕಾಣುತ್ತಿದ್ದರು ಎಂದರು.

  English summary
  Dr Rajkumar 83rd Birthday day is being celebrated by Rajkumar family members and his fans today(Apirl.24). Bangalore Nagesh, Devi and Actor Shani Mahadevappa has been honoured with Dr. Raj Souharda Award

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X