For Quick Alerts
  ALLOW NOTIFICATIONS  
  For Daily Alerts

  ರಾಜ್ ಪುಣ್ಯಭೂಮಿಗೆ ಹರಿದುಬಂದ ಭಕ್ತ ಸಾಗರ

  By Rajendra
  |

  ನಾಡಿನಾದ್ಯಂತ ಇಂದು (ಏ.24) ಕನ್ನಡ ಚಲನಚಿತ್ರ ರಂಗದ ಅನಭಿಷಕ್ತ ಸಾಮ್ರಾಟ ಡಾ.ರಾಜ್ ಕುಮಾರ್ ಅವರ 84ನೇ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಣ್ಣಾವ್ರ ಪುಣ್ಯಭೂಮಿ ಕಂಠೀರವ ಸ್ಟುಡಿಯೋಗೆ ಅಭಿಮಾನಿ ದೇವರುಗಳ ಸಾಗರವೇ ಹರಿದು ಬರುತ್ತಿದೆ.

  ರಕ್ತದಾನ, ಅನ್ನದಾನ, ನೇತ್ರದಾನ ಹಾಗೂ ಉಚಿತ ವೈದ್ಯಕೀಯ ಪರೀಕ್ಷೆಗಳನ್ನು ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ವಿವಿಧ ಸಂಘಟನೆಗಳು ಹಮ್ಮಿಕೊಂಡಿವೆ. ರಾಜ್ ಸಮಾಧಿಯನ್ನು ವಿವಿಧ ಪುಷ್ಪಗಳು ಹಾಗೂ ದೀಪಗಳಿಂದ ಸಿಂಗರಿಸಲಾಗಿದೆ.

  ಇಂದು ಬೆಳಗ್ಗೆ 8ರಿಂದ ಆರಂಭವಾಗಿರುವ ವಿವಿಧ ಕಾರ್ಯಕ್ರಮಗಳು ಸಂಜೆ 5 ಗಂಟೆಯವರೆಗೂ ನಡೆಯಲಿವೆ. ಸುಮಾರು 20 ರಿಂದ 25 ಸಾವಿರ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲರಿಗೂ ಕುಡಿಯುವ ನೀರಿನ ಹಾಗೂ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗಿದೆ. (ಒನ್‌ಇಂಡಿಯಾ ಕನ್ನಡ)

  English summary
  The 84th birthday celebration of legendary actor Dr Rajkumar saw thousands of fans flogging at his Kanteerava Studio, Bangalore. The fans appeared dressed as characters portrayed by the veteran actor including mythological ones and several performances of Raj"s famous scenes were done.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X