twitter
    For Quick Alerts
    ALLOW NOTIFICATIONS  
    For Daily Alerts

    ಬಿಂದಾಸ್ ತಾರೆ ಸಂಜನಾ ಜೊತೆ ಕೆಲ ಹೊತ್ತು!

    By * ಅರಕಲಗೂಡು ಜಯಕುಮಾರ್
    |

    ಸಂಜನಾ ಹುಟ್ಟಿದ್ದು ಬೆಂಗಳೂರಿನಲ್ಲಿ ಅಕ್ಟೋಬರ್ 9ನೇ 1989ರಂದು. ತಂದೆ ಬ್ಯುಸಿನೆಸ್ ಮನ್, ತಾಯಿ ಚೆನ್ನೈ ಮೂಲದವರು. ತಂದೆ ಮಾತ್ರ ಉತ್ತರ ಭಾರತದ ಸಿಂಧಿ ಮನೆತನದವರು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದರೂ ಈಕೆಯ ಮೂಲ ಮಾತ್ರ ಮುಂಬೈ. ಹೈ-ಫೈ ಸೊಸೈಟಿಯಲ್ಲೇ ಬೆಳೆದ ಹುಡುಗಿ ಸಂಜನಾ, ಪಿಯುಸಿ ಓದುವ ವೇಳೆಗಾಗಲೇ ಮಾಡೆಲಿಂಗ್ ಸಂಜನಾರನ್ನು ಕೈ ಬೀಸಿ ಕರೆಯಿತು. ಈ ನಡುವೆ 2006ರಲ್ಲಿ ತಮಿಳಿನ "ಒರು ಕಾದಲ್ ಸೇವಿಯರ್" ಮೂಲಕ ಚಿತ್ರ ಜಗತ್ತಿಗೆ ಅಡಿಯಿರಿಸಿದ ಸಂಜನಾ ಗಮನ ಸೆಳೆದಳು.

    ಸದ್ಯ ದೂರ ಶಿಕ್ಷಣ ಪದ್ದತಿಯಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿರುವ ಸಂಜನಾ ಬ್ಯೂಟಿಪುಲ್ ಅಂಡ್ ಬೋಲ್ಡ್ ನಡವಳಿಕೆಯವರು. ಆದರೆ ಪತ್ರಕರ್ತರೊಂದಿಗೆ ಮಾತಿಗೆ ಸಿಲುಕುವುದು ಕಡಿಮೆ. "ಗಂಡ ಹೆಂಡತಿ" ಸಿನಿಮಾದ ಬಿಂದಾಸ್ ನಟನೆಯ ನಂತರ ಪತ್ರಕರ್ತರಿಂದ ಎದುರಾಗುತ್ತಿದ್ದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮಾಧ್ಯಮಗಳಿಂದ ದೂರವಿದ್ದುದೇ ಹೆಚ್ಚು . ಮಾಡೆಲಿಂಗ್ ಜೊತೆಗೆ ಫಿಲ್ಮಿ ಡಾನ್ಸ್ ನಲ್ಲೂ ಸೈ ಎನಿಸಿರುವ ಸಂಜನಾ ವಿದೇಶದಲ್ಲಿ ಅತಿ ಹೆಚ್ಚು ಶೋಗಳನ್ನು ನೀಡಿದ್ದಾರಂತೆ ಹಾಗಾಗಿಯೇ ಕನ್ನಡದ ಜನಪ್ರಿಯ ಕಿರುತೆರೆ ಝೀ ಕನ್ನಡದಲ್ಲಿ ಎರಡನೇ ಬಾರಿಗೆ "ಡಾನ್ಸ್ ಕರ್ನಾಟಕ ಡಾನ್ಸ್ " ರಿಯಾಲಿಟಿ ಶೋ ನಲ್ಲಿ ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಿದ್ದಾರೆ.

    ಕಿರುತೆರೆಯಲ್ಲಿ ಗುಣಾತ್ಮಕವಾದ ಮನರಂಜನಾ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಚಾನೆಲ್ ಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ಬರುವುದು ಝೀ ಕನ್ನಡ. ಹೊಸತನ ಮತ್ತು ಅದ್ದೂರಿತನ ಝೀ ಕನ್ನಡದ ಮಟ್ಟಿಗೆ ಇತರೆ ಚಾನಲ್ ಗಳಿಗಿಂತ ಹೆಚ್ಚಾಗಿಯೇ ಇದೆ. ಅದರಲ್ಲೂ ರಿಯಾಲಿಟಿ ಶೋಗಳ ಬಗ್ಗೆ ಹೇಳುವುದಾದರೆ ಹಿಂದಿಯಲ್ಲಿ ಝೀ ಟಿವಿ ಹುಟ್ಟುಹಾಕಿರುವ ಡಾನ್ಸ್-ಹಾಡುಗಳ ಹೊಸ ಕಾರ್ಯಕ್ರಮಗಳ ಅಲೆಯನ್ನೇ ಕನ್ನಡದಲ್ಲೂ ತಂದಿದೆ. ಅದರ ಫಲವೇ "ಡಾನ್ಸ್ ಕರ್ನಾಟಕ ಡಾನ್ಸ್" ಇಂತಹ ಸನ್ನಿವೇಶದಲ್ಲಿ ಸಂಜನಾ ರನ್ನು ಮಾತನಾಡಿಸುವ ಅವಕಾಶ ಒದಗಿದ್ದು ಹೀಗೆ.

    ಸಂಜನಾ ಅವರನ್ನು ಮಾತಾಡಿಸ್ತೀರಾ? ಅತ್ತಲಿಂದ ಮಿತ್ರ ಮಧುಸೂಧನ್ ಕೇಳಿದರು.. ಹೌದಾ ಎಲ್ಲಿದಾರೆ? ಯಾವಾಗ ಮಾತಾಡಿಸ ಬಹುದು?ಅಂದೆ ಈಗ್ಲೇ ಭೇಟಿಯಾಗಿ ಮಾತಾಡಿಸಬಹುದು, ಫೋನ್ ಮಾಡಿ ಅಂತ ನಂಬರ್ ಕೊಟ್ಟು ಡಿಸ್ ಕನೆಕ್ಟ್ ಮಾಡಿದರು. ಸಂಜನಾ ಗಂಡ-ಹೆಂಡತಿಯಲ್ಲಿ ಬಿಂದಾಸ್ ಆಗಿ ನಟಿಸಿ ಹೆಸರು ಮಾಡಿದ್ದು ಮತ್ತು ಝೀ ಕನ್ನಡದ ಡಾನ್ಸ್ ಕರ್ನಾಟಕ ಡಾನ್ಸ್ ನಲ್ಲಿ ಜಡ್ಜ್ ಆಗಿರೋದು ಗೊತ್ತಿತ್ತೆ ವಿನಹ ಅವರನ್ನ ಅತ್ಯಂತ ಕಡಿಮೆ ಅವಧಿಯಲ್ಲಿ ಮಾಹಿತಿ ಕಲೆಹಾಕಿ ಮಾತನಾಡಿಸೋದು ಹೇಗಪ್ಪ ಅಂತ ಯೋಚಿಸುತ್ತಲೇ ಹೇಗಾದ್ರೂ ಇರ್ಲಿ ಅಂತ ಸಂಜನಾ ಗೆ ಮೊಬೈಲು ಮೆಸೇಜ್ ಕಳುಹಿಸಿದೆ, ಕೆಲ ಹೊತ್ತಿನ ನಂತರ ಓಕೆ ಕಾಲ್ ಮಾಡಿ ಅಂತ ರಿಪ್ಲೈ..ಬಂತು. ನಾನು ಮಾತಿಗೆ ಅಣಿಯಾದೆ.

    *ಝೀ ಕನ್ನಡದ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋ ಹೇಗನ್ನಿಸುತ್ತೆ?
    ನೀವ್ ನೋಡಿದಿರಾ ? Ok Ok It's a great Experience, Kannada Industryಲಿ ಇಂತಹ ಶೋ ನಡಿಬೇಕಿತ್ತು, ಇಲ್ಲಿವರೆಗೂ ನಡೆದಿರಲಿಲ್ಲ. ಡಾನ್ಸ್ ನಲ್ಲಿ different different style ಇದೆ. ಇಲ್ಲಿ plotform ಗೆ ಇಂಥ ಶೋ ಅವಶ್ಯಕತೆ ಇತ್ತು ಇಮ್ರಾನ್ ಜೊತೆ ತೀರ್ಪುಗಾರಳಾಗಿ ಕಾರ್ಯ ನಿರ್ವಹಿಸುತ್ತಿದ್ದೀನಿ. here enjoyment level is very high. ಎಷ್ಟು hectic ಆಗಿರುತ್ತೆ ಅಂದ್ರೆ ಬೆಳಗ್ಗೆ 9ಗಂಟೆಯಿಂದ ರಾತ್ರಿಕಳೆದು ಮತ್ತೆ ಬೆಳಗ್ಗೆ 3ಗಂಟೆವರೆಗೂ ಶೋಟಿಂಗ್ ಇರುತ್ತೆ. ಅದರಲ್ಲು pressure ನಮಗೆ ಗೊತ್ತೇ ಆಗಲ್ಲ.

    *ಚಿಕ್ಕಮಕ್ಕಳ ರಿಯಾಲಿಟಿ ಶೋ ಮಾಡ್ತಿದ್ರಿ ಇಲ್ಲಿ ದೊಡ್ಡವರು ಹೇಗನ್ನಿಸುತ್ತೆ?
    ಇಲ್ಲಿ ಚಿಕ್ಕ ಮಕ್ಕಳು ಯಾರೂ ಇಲ್ಲ, ಎಲ್ಲಾ ದೊಡ್ಡವರೆ. ಅದ್ರಲ್ಲೂ ನನಗಿಂತ ತುಂಬಾ ದೊಡ್ಡವರಿದ್ದಾರೆ. ಎಲ್ಲರೂ ಡೆಡಿಕೇಶನ್ ನಿಂದ ಮಾಡ್ತಿದಾರೆ. ಹಿಂದಿನ ಶೋ ನಲ್ಲಿ ಚಿಕ್ಕ ಚಿಕ್ಕ ಮಕ್ಕಳು ಮಾಡ್ತಿದ್ದರು. ಅದಕ್ಕೆ ಹೋಲಿಕೆ ಮಾಡಿದ್ರೆ ಇದು 5ಟೈಮ್ಸ್ bigger show. Killer performance ಇರುತ್ತೆ ಇಲ್ಲಿ. ನಾನು ಅಮೇರಿಕಾ, ಇಂಗ್ಲೆಂಡ್ ಹೀಗೆ ಬೇರೆ ದೇಶಗಳಿಗೆಲ್ಲಾ ತೆಲುಗು Industry ಮೂಲಕ ಹೋಗಿ I have done a lot of stage performances ಮತ್ತು ನೋಡಿದೀನಿ ಹಾಗಾಗಿ ನನಗೆ ಇಲ್ಲಿ ಜಡ್ಜ್ ಮಾಡೋದು ಏನು ಅನಿಸ್ತಿಲ್ಲ. Stage ಮೇಲೆ ಹೇಗೆ perform ಮಾಡಬೇಕು ಒಬ್ಬ ಒಳ್ಳೆ ಡಾನ್ಸ್ perform er ನಲ್ಲಿ ಎಂಥ qualities ಇರ್ಬೇಕು ಅನ್ನೋದು ನನಗೆ ಗೊತ್ತಿದೆ.

    I love dancing, because when we are performing live dancing ಏನು ತಪ್ಪಾದರೂ ತಕ್ಷಣ ಗೊತ್ತಾಗುತ್ತೆ. ಹಾಗಾಗಿ ನನಗೆ stage ಬಗ್ಗೆ ಒಂದು ಟೋಟಲ್ ಐಡಿಯಾ ಇದೆ. ಇಲ್ಲಿ ದೊಡ್ಡವರು, ಚಿಕ್ಕವರು ಅಂತ ತೀರ್ಪು ಕೊಡೋಕಾಗಲ್ಲ mainly ಬಂದು ನಾನು ಆಕ್ಟರ್ ಇರೋದ್ರಿಂದ ಡಾನ್ಸ್ ಮಾಡೋವರ facial expression and body language ಹೇಗಿರುತ್ತೆ ಅಂತ ನೋಡ್ತೀನಿ. ಬಾಕಿದನ್ನು ಕೋರಿಯಾಗ್ರಾಫರ್ ಇಮ್ರಾನ್ ಸಾರ್ ನೋಡ್ತಾರೆ. I am there to watch especially body language.

    ಮತ್ತೆ ಇನ್ನೊಂದು ಅಂದ್ರೆ ಮಕ್ಕಳ ಶೋ ನಲ್ಲಿ very small competition ಇರುತ್ತೆ ಅಲ್ಲಿ ಹೊಸತನವನ್ನು ನಿರೀಕ್ಷೆ ಮಾಡೋಕೆ ಸಾಧ್ಯವಾಗಲ್ಲ, ಮಕ್ಕಳು ರಜಾ ಇರೋವಾಗ ಮುದ್ದು ಮುದ್ದಾಗಿ ಡಾನ್ಸ್ ಮಾಡಿ ಸ್ವಲ್ಪ popular ಆಗಿ ಹೋಗೋಣ ಅಂತ ಬಂದಿರ್ತಾರೆ ಆದ್ರೆ ಡಾನ್ಸ್ ಕರ್ನಾಟಕ ಡಾನ್ಸ್ programme ನಲ್ಲಿ ಹಾಗಾಗೋಲ್ಲ because ಇಲ್ಲಿ ತುಂಬಾ ಎಕ್ಸ್ಪೆರಿಮೆಂಟ್ ಮಾಡಿರ್ತಾರೆ, guys are very sereous ಒಬ್ರಿಗಿಂತ ಒಬ್ರು ಜೋರಾಗಿರ್ತಾರೆ, ಕಿಲ್ಲರ್ ಪರ್ಫರ್ಪಾಮೆನ್ಸ್ ಬರುತ್ತೆ Really It's a bigger show. ವೀಕ್ಷಕರಿಗೆ ಒಳ್ಳೆ entertainment ಕೊಡುತ್ತೆ.

    *ಝೀ ಕನ್ನಡದ ಪ್ಲಾಟ್ ಫಾರ್ಮ ನೃತ್ಯ ಪಟುಗಳಿಗೆ ಎಂತಹ ಅವಕಾಶ ತಂದು ಕೊಡಬಹುದು?
    ಹಾಗೇನಿಲ್ಲ, ತುಂಬಾ ಪ್ರೊಫೆಷನಲ್ ಆಗಿ ತಗೊಂಡು ಚೆನ್ನಾಗಿ ಮಾಡೋವ್ರಿಗೆ ಖಂಡಿತ ಸಿನಿಮಾದಲ್ಲಿ ಅವಕಾಶ ಸಿಗಬಹುದು. ಆದ್ರೆ ನೇರವಾಗಿ ಇಲ್ಲಿಂದ ಸಿನಿಮಾಗೆ ಹೋಗೋಕಾಗಲ್ಲ. ಅದು ಅವರವರ ಪ್ರತಿಭೆಯನ್ನ ಆಧರಿಸಿರುತ್ತೆ, ಅಂತಹ ಪ್ರತಿಭೆಯನ್ನು ಬೆಳಕಿಗೆ ತರೋ ಕೆಲಸವನ್ನು ಝೀ ಕನ್ನಡ ಮಾಡ್ತಿದೆ. ಖಂಡಿತವಾಗಿ ಆ ಮೂಲಕ ಸಿನಿಮಾದವರನ್ನು ಈ ಪ್ರತಿಭೆಗಳು ಸೆಳೆಯೋಕೆ ಝೀ ಕನ್ನಡ ಪ್ಲಾಟ್ ಫಾರ್ಮ್ ಸಹಾಯ ಮಾಡ್ತಿದೆ.

    *ಸಿನಿಮಾಗೆ ಪ್ರವೇಶ ಆಗಿದ್ದು ಹೇಗೆ?ಅವಕಾಶಗಳು ಹೇಗಿವೆ?
    Actually ನಾನು ತಮಾಷೆಗೆ ಅಂತ ಮಾಡೆಲಿಂಗ್ ನಲ್ಲಿ ಮಾಡ್ತಿದ್ದೆ, ಆದ್ರೆ ಒಂದ್ಸಲ ಆಕಸ್ಮಿಕವಾಗಿ ಸಿನಿಮಾದಲ್ಲಿ ಮಾಡುವ ಅವಕಾಶ ಅರಸಿ ಬಂತು. ಮೊದಲಿಗೆ ತಮಿಳು ಸಿನಿಮಾದಲ್ಲಿ ಮಾಡಿದೆ ಆಮೇಲೆ ಕನ್ನಡ-ತೆಲುಗು ಆಯ್ತು. ನಾವು ಬಂದು ಉತ್ತರ ಭಾರತದ ಸಿಂಧಿ ಫ್ಯಾಮಿಲಿಯವರು. ನಮ್ ತಂದೆ ಬ್ಯುಸಿನೆಸ್ ಮನ್. ಮನೇಲಿ ಸಿನಿಮಾ ರಂಗಕ್ಕೆ ಬರೋದು ಇಷ್ಟ ಇರ್ಲಿಲ್ಲ ಮೊದಲಿಗೆ. ಆದ್ರೆ ಈಗ ಹಾಗೇನಿಲ್ಲ ಮನೇಲಿ parents support ಮಾಡ್ತಾರೆ. ಈಗಾಗಲೆ ಕನ್ನಡದಲ್ಲಿ ನಾಲ್ಕು ಸಿನಿಮಾ ಮಾಡ್ತಿದ್ದೀನಿ, ಶಿವಣ್ಣ ಜೊತೆ ಮೈಲಾರಿ ಮಾಡ್ತಿದೀನಿ, ಅದರ ಹಾಡು ಶೂಟಿಂಗ್ ಆಯ್ತು.

    ಈ ಸಂಜೆ ಅಂತ ಸಿನಿಮಾ ಮುಗಿದಿದೆ, ನೆನಪಿರಲಿ ಪ್ರೇಮ್ ಜೊತೆ ಹೊಸ ಸಿನಿಮಾದಲ್ಲಿ ಮಾಡೋಕೆ ಸೈನ್ ಮಾಡಿದೀನಿ. ಹೊಸ ನಾಯಕನ ಜೊತೆ "ಶ್ಲೋಕ" ಮಾಡಿದೀನಿ ಸುಮಾರು 70ಪರ್ಸೆಂಟ್ ಶೂಟಿಂಗ್ ಮುಗಿದಿದೆ.ಮಲೆಯಾಳಂ ನಲ್ಲೂ ಅವಕಾಶ ಇದೆ. ಮತ್ತೆ ಸಿಗ್ತೀನಿ ಶೂಟಿಂಗ್ ಇದೆ ಎಂದು ಒಂದೇ ಉಸುರಿಗೆ ಮಾತು ಮುಗಿಸಿದರು ಸಂಜನಾ.(ಕೃಪೆ: ಅಭಿವ್ಯಕ್ತಿ)

    Thursday, June 24, 2010, 12:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X