»   » ಇರುವುದೆಲ್ಲವ ಬಿಟ್ಟು ಇರದುದೆರೆಡೆಗೆ...

ಇರುವುದೆಲ್ಲವ ಬಿಟ್ಟು ಇರದುದೆರೆಡೆಗೆ...

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  kalapana, gangadhar, shivaram, img : the hinduಒಂದು ವಸ್ತು ಜತೆ ಇದ್ದಾಗ ಅದರ ಬೆಲೆ ಗೊತ್ತಾಗುವುದಿಲ್ಲ. ಅದು ಕಣ್ಮರೆಯಾದಾಗ ಮನಸು ಕಂಗಾಲು ಕಂಗಾಲು. ಅದಕ್ಕಿಂತ ಇರುವ ಜೀವದಲ್ಲಿ ಅದನ್ನು ಹುಡುಕಿದರೆ ಮನಸು ಮುಂಗಾರು...

  *ವಿನಾಯಕರಾಮ್ ಕಲಗಾರು

  'ನೀ ಏನೇ ಹೇಳು, ನಂ ಶಂಕರ್‌ನಾಗ್ ಸ್ಟೈಲೇ ಬೇರೆ. ಒಂದು ಕಾಲದಲ್ಲಿ ಅವರ ಸಿನಿಮಾಗಳೆಂದರೆ ಜನಹುಚ್ಚೆದ್ದು ನೋಡುತ್ತಿದ್ದರು. ಕರಾಟೆ ಕಿಂಗ್ ಸಿನಿಮಾದ ಮೇಕಿಂಗೇ ವಿಶೇಷವಾಗಿರುತ್ತಿತ್ತು. ಆದರೆ ನಮ್ಮದೌರ್ಭಾಗ್ಯವೊ ಏನೋ ಇವತ್ತು ಅವರಿಲ್ಲ. ಇದ್ದಿದ್ದರೆ ಚಿತ್ರರಂಗದ ದಿಕ್ಕೇ ಬದಲಾಗಿಬಿಡುತ್ತಿತ್ತು....'

  'ಏ... ನಿನಗೆ ಸುನೀ. ಗೊತ್ತಾ? ಆ ಸೇಬುಗಲ್ಲ, ಅರಳು ಹುರಿದಂತೆ ಮಾತನಾಡುವ ಮ್ಯಾನರಿಸಂ. ಆತನ ಬೆಳ್ಳಿ ಕಾಲುಂಗುರ ಚಿತ್ರ ನೋಡಿದ್ದೀಯಾ? ಇವತ್ತಿಗೂ ಕಣ್ಣಿಗೆ ಕಟ್ಟಿದ ಹಾಗಿದೆ. ಆತ ಇಂದು ಇದ್ದಿದ್ದರೆ..."

  'ಯಾರು ಏನೇ ಹೇಳಲಿ, ಕಲ್ಪನಾ ಎಂದಿದ್ದರೂ ಮಿನುಗುತಾರೆಯೇ. ಆ ಅದ್ಭುತ ಪ್ರತಿಭೆ ಮತ್ತೆ ಹುಟ್ಟಿಬರಲುಸಾಧ್ಯವೇ ಇಲ್ಲ. ಏನು ಮಾಡೋದು? ಅವರನ್ನು ಹೆಚ್ಚು ಕಾಲ ಉಳಿಸಿಕೊಳ್ಳುವ ಅದೃಷ್ಟ ನಮಗಿಲ್ಲ ಅಷ್ಟೇ..."
  'ರೀ ಸ್ವಾಮಿ, ನಮ್ಮ ಪುಟ್ಟಣ್ಣ ಕಣಗಾಲ್ ಯಾವತ್ತಿದ್ರೂ ಪುಟ್ಟಣ್ಣ ಕಣಗಾಲೇ. ಆ ಗೆಜ್ಜೆಪೂಜೆ, ಆ ಮಾನಸಸರೋವರ, ಆ ಶರಪಂಜರ, ಆ ರಂಗನಾಯಕಿ... ಎಲ್ಲವೂ ಪುಟವಿಟ್ಟ ಚಿನ್ನ. ಒಂದಕ್ಕಿಂತ ಒಂದು ಸೂಪರ್.. ಇವತ್ತು ಕಣಗಾಲ್ ಇರಬೇಕಿತ್ತು..."

  ಈ ಮೇಲಿನ ಮಾತುಕತೆಗಳು ಇಂದು ಚಿತ್ರಪ್ರೇಮಿಯ ಬಾಯಲ್ಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ಬಂದುಹೋಗಿರುತ್ತದೆ. ಆದರೆ ಅದರಿಂದ ಏನು ಪ್ರಯೋಜನ ಬಂತು ಹೇಳಿ? ಗೋಪಾಲಕೃಷ್ಣ ಅಡಿಗರ-ಇರುವುದೆಲ್ಲವ ಬಿಟ್ಟು ಇರದುದೆರೆಡೆಗೆ ತುಡಿಯುವುದೇ ಜೀವನ ಎನ್ನುವಂತೆ.ಅದು ನಿಮಗೂ ಅನ್ವಯಿಸುತ್ತದೆ. ಹಾಗೆ ಇನ್ನೊಬ್ಬರ ಬಳಿ ಹೇಳಿಕೊಳ್ಳದಿದ್ದರೂ ಟಿವಿ ಅಥವಾ ಮತ್ತೆಲ್ಲೊ ಅವರ ಸಾಮರ್ಥ್ಯ ಕಂಡಾಗ ಹೀಗೆ ಅನ್ನಿಸಿರಲಿಕ್ಕೆ ಸಾಕು.

  ಹಾಗೆ ಯೋಚಿಸುವ ಮುನ್ನ ಹೀಗೆ ಒಮ್ಮೆ ಯೋಚಿಸಿ ನೋಡಿ... ಇವತ್ತು ಬಂಧನದ ವಿಷ್ಣುವರ್ಧನ್ ಇದ್ದಾರೆ. ಪ್ರೇಮಲೋಕದ ರವಿಚಂದ್ರನ್ ಕೂಡ ಚಿತ್ರರಂಗದಲ್ಲೇ ಉಳಿದಿದ್ದಾರೆ. ಅಂತದಂಥ ಅಜರಾಮರ ಚಿತ್ರ ಕೊಟ್ಟ ಅಂಬರೀಷ್ ಕೂಡ ಅಲ್ಲಿ ಇಲ್ಲಿ ಓಡಾಡಿಕೊಂಡು, ಸೊಂಪಾಗಿದ್ದಾರೆ. ಅಭಿನಯ ಶಾರದೆ ಜಯಂತಿ ಕೂಡ ಅದೇ ಗೆಟಪ್ಪಲ್ಲಿ ಅವರಿವರ ಕಷ್ಟ ಸುಖ ಹಂಚಿಕೊಂಡು ಐಶಾರಾಮಿ ಜೀವನ ನಡೆಸುತ್ತಿದ್ದಾರೆ... ನಿಮಗೆ ನೆನಪಿರಲಿ, ಇವರೆಲ್ಲ ಒಂದು ಕಾಲದ ಸೂಪರ್. ಸ್ಟಾರುಗಳು!ಆದರೆ ಇವರಿಂದ ಚಿತ್ರರಂಗದಲ್ಲಿ ಏನು ಬದಲಾವಣೆ ಆಗಿದೆ ? ಒಬ್ಬ ವಿಷ್ಣು, ಒಬ್ಬ ಅಂಬಿ, ಒಬ್ಬ ರವಿಯಿಂದಇತ್ತೀಚೆಗೆ ಹೊಸದೇನಾದರೂ ಸಿಕ್ಕಿದೆಯಾ ?

  ಈ ಪ್ರಶ್ನೆಗೆ ಉತ್ತರ ಕಂಡುಕೊಂಡರೆ ನಮ್ಮ ಯೋಚನಾಲಹರಿಗೆ ಹೊಸ ಅರ್ಥ ಬಂದಂತಾಗುತ್ತದೆ. ಅದರ ಬದಲು ಸುನೀಲ್, ಶಂಕರ್‌ನಾಗ್‌ರನ್ನು ಇರುವ ಗಣೇಶ್, ಪುನೀತ್, ದರ್ಶನ್, ವಿಜಿಯಲ್ಲಿ ಹುಡುಕುವ ಪ್ರಯತ್ನ ಮಾಡೋಣ. ಅದನ್ನು ಬಿಟ್ಟು, ಗಣೇಶ್ ಕೋಟಿಸಂಭಾವನೆ ಪಡೆಯುತ್ತಾನೆ. ವಿಜಿ ಕೈಗೇ ಸಿಗೊಲ್ಲ ಎಂದೆಲ್ಲಾ ಹೇಳುತ್ತೇವೆ. ಅವರು ಒಂದು ಕಾಲದಲ್ಲಿ ಊಟಕ್ಕೆ ಪರದಾಡುತ್ತಿದ್ದಾಗ ಈಗಿನ ವೇದಾಂತಿಗಳು ರೊಕ್ಕ ಕೊಟ್ಟು, ಕೈ ಹಿಡಿದಿದ್ದರಾ ಎಂದು ಯಾರೊಬ್ಬರೂ ಯೋಚಿಸುವುದಿಲ್ಲ. ಪುಟ್ಟಣ್ಣ ಕಣಗಾಲರನ್ನು ಯೋಗರಾಜ್ ಭಟ್, ಸೂರಿ ಅಥವಾ ಗುರುಪ್ರಸಾದ್ ಅಂಥವರಲ್ಲಿ ಕಾಣೋಣ.

  ಒಂದು ಮುಂಗಾರುಮಳೆ ಚಿತ್ರರಂಗದಲ್ಲಿ ಕ್ರಾಂತಿ ಮಾಡಿತು. ಒಂದು ಮಿಲನ ಹೊಸ ದಿಕ್ಕನ್ನು ತೋರಿಸಿತು.ಒಂದು ಮೆಜೆಸ್ಟಿಕ್ ಗಾಂಧಿನಗರದ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿತು. ಒಂದು ದುನಿಯಾಪ್ರೇಕ್ಷಕವರ್ಗದಲ್ಲಿ ಸಿನಿಮಾ ಪ್ರೀತಿ ಹೆಚ್ಚಿಸುವಲ್ಲಿ ಯಶಸ್ವಿಯಾಯಿತು. ಹೀಗೆ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಯಾಯಿತು.ಅಂಥ ಸಾಕಷ್ಟು ಬದಲಾವಣೆಗಳಿಗೆ ಇಂಥ ಚಿತ್ರಗಳು ನಾಂದಿ ಹಾಡಿದವು. ಬಾಲಕೃಷ್ಣ, ನರಸಿಂಹರಾಜು ಅವರನ್ನು ಕೋಮಲ್, ರಂಗಾಯಣ ರಘುವಂಥ ಮನೋಜ್ಞ ನಟರಲ್ಲಿ ಹುಡುಕೋಣ. ಶನಿಮಹದೇವಪ್ಪ, ರಾಜಾನಂದ್ ಮುಂತಾದ ಪೋಷಕ ನಟರ ಪ್ರತಿಬಿಂಬವನ್ನು ಅನಂತನಾಗ್, ದೊಡ್ಡಣ್ಣ, ರಾಮಕೃಷ್ಣರಂಥಸಮರ್ಥರಲ್ಲಿ ಕಾಣೋಣ.

  ಆದರೆ ದುರಂತ ಏನು ಗೊತ್ತೆ? ಶ್ರೀನಿವಾಸಮೂರ್ತಿಯಂತಹ ಹಿರಿಯ ನಟರನ್ನು ಇದೇ ಚಿತ್ರರಂಗ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎನ್ನುವುದು. ಹಾಗಂತ ಇದು ಖಂಡಿತಾ ಎಲ್ಲರ ಬಗ್ಗೆ ಮಾಡುತ್ತಿರುವ ಆರೋಪವಲ್ಲ. ಕೆಲವರು ಅದನ್ನು ಮಾಡುತ್ತಿದ್ದಾರೆ. ಯಾವುದೊ ಕಾರಣಕ್ಕೆಡೇಟ್ಸ್ ಕೊಡದಿರುವುದಕ್ಕೆ-ಅವರಿಗೆ ಎಲ್ಲಿಲ್ಲದ ಗತ್ತು, ಸಿಕ್ಕಾಪಟ್ಟೆ ಸಂಭಾವನೆ ಪಡೆಯುತ್ತಾರೆ ಎಂದು ಗಾಸಿಪ್ ಹುಟ್ಟು ಹಾಕುವವರೇ ಹೆಚ್ಚು. ಅವರ ಕವಿರತ್ನ ಕಾಳಿದಾಸ, ಕ್ರಾಂತಿಯೋಗಿ ಬಸವಣ್ಣ ಮುಂತಾದ ಚಿತ್ರಗಳ ಅಮೋಘ ಅಭಿನಯವನ್ನು ನೆನಪಿಸಿಕೊಳ್ಳುವುದಿಲ್ಲ. ಅಶ್ವತ್ಥ್, ಅಶೋಕ್ ಬಾದರದಿನ್ನಿಯಂತಹ ಹಿರಿಯರು ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಏನು?

  ಅವರ ಕುಟುಂಬ ಇಂದು ಇರುವ ಪರಿಸ್ಥಿತಿ ಹೇಗಿದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವ ವ್ಯವಧಾನ ಯಾರೊಬ್ಬರಿಗೂ ಇಲ್ಲ. ಆದರೆ ನಾವು ಹಾಗೆ ಮಾಡುವುದು ಬೇಡ. ಕಲಾವಿದ ಒಂದಲ್ಲ ಒಂದು ರೀತಿಯಲ್ಲಿ ಚಿತ್ರರಂಗಕ್ಕೆ ದುಡಿದವರೇ, ದುಡಿಯುತ್ತಿರುವವರೇ. ಅಂಥವರನ್ನು ಆದಷ್ಟು ಗೌರವಿಸೋಣ. ಅವರ ಬಗ್ಗೆ ಕೈಲಾದ ಮಟ್ಟಿಗಿನ ಪ್ರೀತಿ ತೋರೋಣ. ಅವರು ನಡೆದುಬಂದ ಹಾದಿಯತ್ತ ಒಮ್ಮೆ ಕಣ್ಣು ಹಾಯಿಸೋಣ.

  ಮತ್ತೊಮ್ಮೆ ಅಡಿಗರ ಇರುವುದೆಲ್ಲವ ಬಿಟ್ಟು... ಚಂದಗವನವನ್ನು ನೆನೆಯೋಣ...

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more