ಹೇಮಂತ್ ಹೆಗ್ಡೆ ಚಿತ್ರ ಬಯ್ಯೋ ಭಾಮಾ ಅಯ್ಯೋ ರಾಮಾ

By Rajendra

'ಹೌಸ್ ಫುಲ್' ಚಿತ್ರದ ಮೂಲಕ ಒಂದಷ್ಟು ವಿವಾದ ಸೃಷ್ಟಿಸಿದ್ದ ಹೇಮಂತ್ ಹೆಗ್ಡೆ ಈಗ ಮತ್ತೊಂದು ಚಿತ್ರವನ್ನು ಹಿಡಿದು ಪ್ರೇಕ್ಷಕರ ಮುಂದೆ ಬರಲು ಸಿದ್ಧತೆ ನಡೆಸಿದ್ದಾರೆ. ಕೆಲದಿನಗಳ ಕಾಲ ಕಿರುತೆರೆಯಲ್ಲೂ ಹೇಮಂತ್ ಬಿಜಿಯಾಗಿದ್ದರು. ಈಗ ಅವರು ಕೈಗೆತ್ತಿಕೊಂಡಿರುವ ಚಿತ್ರಕ್ಕೆ 'ಬಯ್ಯೋ ಭಾಮಾ ಅಯ್ಯೋ ರಾಮಾ'! ಎಂದು ಹೆಸರಿಟ್ಟಿದ್ದಾರೆ. ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಮೇಲೆ ಹೆಣೆಯಲಾದ ಕಥಾ ಹಂದರವನ್ನು ಚಿತ್ರ ಒಳಗೊಂಡಿದೆಯಂತೆ.

ಕ್ರಿಕೆಟ್ ಬೆಟ್ಟಿಂಗ್ ಎಂಬುದು ಸೀರಿಯಸ್ ವಿಚಾರವಲ್ಲವೆ. ಅದರಲ್ಲಿ ಹೇಗೆ ಕಾಮಿಡಿ ಮಾಡುತ್ತೀರಾ ಎಂದರೆ. ತೆರೆಯ ಮೇಲೆ ನೋಡಿ ಎಲ್ಲವೂ ನಿಮಗೇ ಅರ್ಥವಾಗುತ್ತದೆ. ಒಟ್ನಲ್ಲಿ ಇದೊಂದು ಪಕ್ಕಾ ಕಾಮಿಡಿ ಚಿತ್ರ ಎನ್ನುತ್ತಾರೆ ಚಿತ್ರದ ನಾಯಕ ನಟ ಹೇಮಂತ್ ಹೆಗ್ಡೆ. ಅನಿವಾಸಿ ಭಾರತೀಯ ಗೆಳೆಯರ ಜತೆಗೂಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಹೇಮಂತ್.

ಈ ಚಿತ್ರದಲ್ಲಿ ಮೂವರು ನಾಯಕಿಯರು. ಇಬ್ಬರು ನಾಯಕಿಯರ ಆಯ್ಕೆ ರಾಗಿಣಿ ದ್ವಿವೇದಿ ಮತ್ತ್ತು ನಿಧಿ ಸುಬ್ಬಯ್ಯ ಬಹುತೇಕ ಖಚಿತವಾಗಿದೆ. ಇವರಿಬ್ಬರ ಜತೆಗೆ ಮತ್ತೊಬ್ಬ ನಾಯಕಿಯನ್ನು ಬಾಲಿವುಡ್‌‍ನಿಂದ ಕರೆಸಲಾಗುತ್ತಂತೆ. ಚಿತ್ರದಲ್ಲಿ ಅಭಿನಯಿಸುವ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ ಹೇಮಂತ್. ವೀರ್ ಸಮರ್ಥ್ ಸಂಗೀತ ಹಾಗೂ ಸುರೇಶ್ ಭೈರಸಂದ್ರ ಛಾಯಾಗ್ರಹಣ ಚಿತ್ರಕ್ಕಿರುತ್ತದೆ.

More from Filmibeat

English summary
House full fame director Hemanth Hegde is back with one more comedy flick. This time he picks a story on cricket betting titled as 'Bayyo Bhama Ayyo Rama'. The movie has three heroines, two heroines are from Kannada and one from bollywood. Ragini and Nidhi Subbaiah are confirmed the dates.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X