Don't Miss!
- News
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದ ಅದಾನಿ, ಇದು ಆರ್ಥಿಕ ದಿವಾಳಿತನದ ಮುನ್ಸೂಚನೆಯೇ
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದೊಡ್ಡರಂಗೇಗೌಡ ವಿಶೇಷ ಪಾತ್ರದ 'ಮ್ಯಾಡ್ ಲವ್'
ಜೆ.ಕೆ.ಎಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಮ್ಯಾಡ್ ಲವ್ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ .ನಿರ್ಮಾಪಕರಾದ ರಾಮು ಹಾಗೂ ಗಂಗಾಧರ್ ತಮ್ಮ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಖ್ಯಾತ ಸಾಹಿತಿ ಡಾ.ದೊಡ್ಡರಂಗೇ ಗೌಡ ಅವರ ಶಿಷ್ಯ ತೇಜ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶಿಷ್ಯನ ಒತ್ತಾಯಕ್ಕೆ ಮಣಿದ ದೊಡ್ಡರಂಗೇಗೌಡರು ಚಿತ್ರದಲೊಂದು ಪಾತ್ರವನ್ನು ನಿರ್ವಹಿಸಿದ್ದಾರೆ. ನಿರ್ದೇಶಕ ತೇಜ ಬಹುಮುಖ ಪ್ರತಿಭೆ. ನಿರ್ದೇಶನದ ಜೊತೆಗೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿರುವ ಅವರು ಗೀತರಚನೆಯನ್ನೂ ಮಾಡಿದ್ದಾರೆ. ಹದಿಹರೆಯದವರ ಹುಚ್ಚುಪ್ರೀತಿಯೇ ಈ ಮ್ಯಾಡ್ ಲವ್ ಎಂಬ ಅಡಿಬರಹವನ್ನೂ ನೀಡಿದ್ದಾರೆ.
ರಾಮು ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ನಾಯಕನ ಪಾತ್ರವನ್ನೂ ನಿರ್ವಹಣೆ ಮಾಡಿದ್ದಾರೆ. ರವೀನಾ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ರಂಗಶ್ರೀ ರಂಗಸ್ವಾಮಿ, ಡಾ.ದೊಡ್ಡರಂಗೇ ಗೌಡ, ಪ್ರಮಿಳಾ ಜೋಷಾಯ್, ಪದ್ಮಾವಾಸಂತಿ, ಅಶೋಕ್ ರಾವ್, ಕಿಲ್ಲರ್ ವೆಂಕಟೇಶ್, ಸುಧೀಂದ್ರ, ಮಂಜು ಚಿತ್ರದ ತಾರಾಬಳಗದಲಿದ್ದಾರೆ. ಲಯನ್ ಗೂಚಿ ಅವರ ಸಂಗೀತವಿರವ 'ಮ್ಯಾಡ್ ಲವ್ ಗೆ ಆನಂದ್ ಅವರ ಛಾಯಾಗ್ರಹಣವಿದೆ. ಆರ್.ಡಿ.ರವಿ ಸಂಕಲನ, ದೇವ್ ಪರಿಕಲ್ಪನೆ, ಸಹ ನಿರ್ದೇಶನ, ಕಪಿಲ್ ನೃತ್ಯ, ವಿಕ್ರಂ ಸಾಹಸ ಈ ಚಿತ್ರಕ್ಕಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)