ತಮಿಳಿಗೆ ಲೂಸ್ ಮಾದ ಯೋಗೇಶ್ 'ಅಲೆಮಾರಿ'
ಲೂಸ್ ಮಾದ ಅಲಿಯಾಸ್ ಯೋಗೇಶ್ ಮತ್ತೊಂದು ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ. ಅವರ ಹೊಸ ಚಿತ್ರ 'ಅಲೆಮಾರಿ' ಮಾರ್ಚ್‌ನಲ್ಲಿ ತೆರೆಕಾಣುತ್ತಿದ್ದು, ಈ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಏತನ್ಮಧ್ಯೆ ಚಿತ್ರದ ನಿರ್ಮಾಪಕ ಬಿಕೆ ಶ್ರೀನಿವಾಸ್ ಇದನ್ನು ತಮಿಳಿನಲ್ಲೂ ನಿರ್ಮಿಸಲು ಮುಂದಾಗಿದ್ದಾರೆ.
ಈಗಾಗಲೆ ತಮಿಳು ನಟ ಧನುಷ್ ಜೊತೆ ಮಾತುಕತೆ ನಡೆದಿದೆ. ಹಾಗಾಗಿ ಇನ್ನೂ ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ಶ್ರೀನಿವಾಸ್. 'ಅಲೆಮಾರಿ'ಯಾದ ಚಿತ್ರದ ನಾಯಕ ಪ್ರೀತಿಗಾಗಿ ಹಾತೊರೆಯುತ್ತಾನೆ. ಚಿತ್ರದ ನಾಯಕಿ ಆತನ ಪ್ರೀತಿಯನ್ನು ಒಪ್ಪುತ್ತಾಳಾ, ಬಿಡುತ್ತಾಳಾ ಎಂಬುದೇ ಚಿತ್ರದ ಕಥಾಹಂದರ.
ಈಗಾಗಲೆ ಪ್ರಥಮ ಪ್ರತಿ ಸಿದ್ಧವಾಗಿರುವ 'ಅಲೆಮಾರಿ' ಶೀಘ್ರದಲ್ಲೇ ಸೆನ್ಸಾರ್ ಮುಂದೆ ಬರಲಿದೆ. ಅರ್ಜುನ್ ಜನ್ಯ ಸಂಗೀತವಿರುವ ಚಿತ್ರವನ್ನು ಸಂತೋಷ್ ನಿರ್ದೇಶಿಸಿದ್ದಾರೆ. ರಾಧಿಕಾ ಪಂಡಿತ್ ಚಿತ್ರದ ನಾಯಕಿ. ಬಿಡುಗಡೆಗೂ ಮುನ್ನವೇ 'ಅಲೆಮಾರಿ' ಅಲೆಅಲೆಯಾಗಿ ಸದ್ದು ಮಾಡುತ್ತಿರುವುದು ವಿಶೇಷ. (ಏಜೆನ್ಸೀಸ್)
More from Filmibeat
English summary
If sources to be belived Loose Mada Yogish upcoming Kannada movie Alemari to remade in Tamil. Probabaly Danush to play a lead role. At present discussion with Danush is going on said the Alemari Producer BK Srinivas.


Click it and Unblock the Notifications











