»   » ವಿ.ಮನೋಹರ್ ಸಂಗೀತಕ್ಕೆ ಹರಿಪ್ರಿಯ ನರ್ತನ

ವಿ.ಮನೋಹರ್ ಸಂಗೀತಕ್ಕೆ ಹರಿಪ್ರಿಯ ನರ್ತನ

Subscribe to Filmibeat Kannada

ರಾಜಶೇಖರ್ ಪ್ರಥಮ ನಿರ್ದೇಶನದ ಈ ಸಂಭಾಷಣೆ ಚಿತ್ರಕ್ಕೆ ಭರದ ಚಿತ್ರೀಕರಣ ನಡೆಯುತ್ತಿದೆ. ಹಲವು ಯಶಸ್ವಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ವಿ.ಮನೋಹರ್ ಈ ಚಿತ್ರದ ಸಂಗೀತ ನಿರ್ದೇಶಕ. ಈ ಸಂಭಾಷಣೆಯ ಹಾಡುಗಳಿಗೆ ಗೀತರಚನೆಕಾರರು ಆಗಿರುವ ಮನೋಹರ್ ಇಂಪಾದ ಗೀತೆಗಳನ್ನು ಬರೆದಿದ್ದಾರೆ.

'ಒಂದು ಬೆಚ್ಚನೆಯ ನೆನಪೆ ಘಮಘಮ...ಅದು ಮದಿರೆಯನಶೆಗೆ ಸಮಸಮ' ಹಾಗೂ' ತಂಗಾಳಿಯ ಅರಮನೆಗೆ ಸಂಗೀತ ತೋರಣವು ಬೆಳ್‌ಮೋಡದ ಜೋಕಾಲಿಲಿ ಶೃಂಗಾರದ ಸಂಭಾಷಣೆ' ಎಂಬ ಈ ಎರಡು ಗೀತೆಗಳು ವಿ.ಮನೋಹರ್ ಅವರಿಗೆ ಅತಿ ಪ್ರಿಯವಂತೆ. ಈ ಮೇಲಿನ ಗೀತೆಗಳು ನವದೆಹಲಿ, ನೈನಿತಾಲ್, ಕುಲುಮನಾಲಿಯ ಸುಂದರ ಸೊಬಗಿನಲ್ಲಿ ನಾಯಕ ಸಂದೇಶ ಹಾಗೂ ಬೆಡಗಿ ಹರಿಪ್ರಿಯಳ ಅಭಿನಯದಲ್ಲಿ ಚಿತ್ರೀಕೃತವಾಗಿದೆ ಎಂದು ನಿರ್ಮಾಪಕರಾದ ಮೇಜರ್ ಶ್ರೀನಿವಾಸ್ ಹಾಗೂ ಜ್ಯೋತಿಬಸವರಾಜ್ ತಿಳಿಸಿದ್ದಾರೆ.

ರಾಜಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ, ವಿ.ಮನೋಹರ್ ಸಂಗೀತ, ಸುರೇಶ್‌ಅರಸ್ ಸಂಕಲನ, ಮಂಜು ಮಾಂಡವ್ಯ ಸಂಭಾಷಣೆ, ಕೌರವ ವೆಂಕಟೇಶ್ ಸಾಹಸ, ಹೊಸ್ಮನೆ ಮೂರ್ತಿ ಕಲೆ, ಇಮ್ರಾನ್, ಮದನ್‌ಹರಿಣಿ, ರಘು ನೃತ್ಯ, ಎನ್.ಎಸ್.ಚಂದ್ರಶೇಖರ್ ನಿರ್ಮಾಣನಿರ್ವಹಣೆ, ಭಾಸ್ಕರ್ ನಿರ್ಮಾಣ ಮೇಲ್ವಿಚಾರಣೆ, ದೊಡ್ಡರಂಗೇಗೌಡ, ವಿ.ಮನೋಹರ್, ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಗೀತರಚನೆಯಿರುವ ಚಿತ್ರದ ತಾರಾಬಳಗದಲ್ಲಿ ಸಂದೇಶ್, ಹರಿಪ್ರಿಯ, ಜ್ಯೋತಿರಾಣಾ, ಶರಣ್, ಸುಮಲತಾ ಅಂಬರೀಶ್, ಬಿ.ಗಣಪತಿ, ಬುಲೆಟ್ ಪ್ರಕಾಶ್, ವಿ.ಮನೋಹರ್ ಮುಂತಾದವರಿದ್ದಾರೆ.

****
ಭಯ ಡಾಟ್ ಕಾಂಗೆ ಡಿ ಟಿ ಎಸ್
ಎಸ್ ವಿ ಎಸ್ ಮೂವೀಸ್ ಲಾಂಛನದ ಭಯ ಡಾಟ್ ಕಾಂ ಚಿತ್ರದ ಪ್ರಮುಖ ಅಂಶಗಳಲ್ಲಿ ಶಬ್ದಕ್ಕೆ ಅಗ್ರಸ್ಥಾನ. ಹಾಗಾಗಿ ಚಿತ್ರಕ್ಕೆ ಡಿ ಟಿ ಎಸ್ ಅಳವಡಿಸಲು ಕರಿಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟೂಡಿಯೋಗೆ ಆಗಮಿಸಿದ್ದಾರೆ ನಿರ್ದೇಶಕ ವೇಮಗಲ್ ಜಗನ್ನಾಥರಾವ್. ಐದು ದಿನಗಳಿಂದ ಚಿತ್ರಕ್ಕೆ ಡಿ ಟಿ ಎಸ್ ಪ್ರಕ್ರಿಯೆ ನಡೆಸುತ್ತಿರುವುದ್ದಾಗಿ ತಿಳಿಸಿದ ನಿರ್ದೇಶಕರು ಸದ್ಯದಲೇ ಚಿತ್ರದ ಪ್ರಥಮಪ್ರತಿ ಹೊರಬರಲಿದೆ ಎಂದಿದ್ದಾರೆ.

ಅನುನಾರಾಯಣ್ ನಿರ್ಮಿಸಿರುವ ಈ ಚಿತ್ರ ಮೂವರು ನಾಯಕ,ನಾಯಕಿಯರ ಸುತ್ತ ಹೆಣೆದಿರುವ ವಿಶಿಷ್ಟ ಕಥಾನಕ. ಸಂತೋಷ, ಮಧುಸಾಗರ್, ವಿಕ್ರಂಸೂರಿ, ಮೇಘನ, ರೋಷಿನಿ, ಜಿ.ಕೆ.ಗೋವಿಂದರಾವ್, ಸುಂದರರಾಜ್, ಶಂಕರ್‌ಅಶ್ವತ್, ಸಿದ್ದರಾಜು, ಕಲ್ಯಾಣ್‌ಕರ್, ಭರತ್‌ಭಾಗವತರ್ ಮುಂತಾದವರ ಅಭಿನಯವಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಉದಯಹೆಗ್ಡೆ ಸಂಕಲನ, ಸುರೇಶ್, ಚಂದ್ರಕುಮಾರ್ ನೃತ್ಯ, ರಾಜೇಶ್‌ರಾಮನಾಥ್ ಸಂಗೀತ ಹಾಗೂ ರಾಜಶೇಖರ್ ಛಾಯಾಗ್ರಹಣ ಭಯ ಡಾಟ್ ಕಾಂಗಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಪುರಾತನ ದೇಗುಲದಲ್ಲಿ ಈ ಸಂಭಾಷಣೆ ಚಿತ್ರ
ಹಾಡುಗಳ ಚಿತ್ರೀಕರಣದಲ್ಲಿ 'ಈ ಸಂಭಾಷಣೆ'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada