»   » ಸ್ಟುಡಿಯೋ ರೌಂಡಪ್ ನಲ್ಲಿ ಹೀಗೂ ಉಂಟೆ, ನೀನ್ಯಾರೇ

ಸ್ಟುಡಿಯೋ ರೌಂಡಪ್ ನಲ್ಲಿ ಹೀಗೂ ಉಂಟೆ, ನೀನ್ಯಾರೇ

Posted By:
Subscribe to Filmibeat Kannada

ಡಿ ಟಿ ಎಸ್‌ನಲ್ಲಿ ಹೀಗೂ ಉಂಟೆ
ಬಹುಮುಖಿ ಮದನ್‌ಪಟೇಲ್ ನಿರ್ಮಾಣದ ಹೀಗೂ ಉಂಟೆ ಚಿತ್ರ ಆಕಾಶ್ ಸ್ಟೂಡಿಯೋದಲ್ಲಿ ಡಿ ಟಿ ಎಸ್‌ನಿಂದ ಅಲಂಕೃತವಾಗುತ್ತಿದೆ. ಗಾರ್ಮೆಂಟ್ ದುನಿಯಾ ಸುತ್ತ ಹೆಣಿದಿರುವ ಈ ಕಥಾನಕ ಅಲ್ಲಿನ ಸಮಸ್ಯೆಗಳಿಗೆ ಕನ್ನಡಿ ಹಿಡಿದಂತಿದೆ.

ಮೀಡಿಯಾ ಇಂಟರ್ ನ್ಯಾಷನಲ್ ಸಂಸ್ಥೆ ಲಾಂಛನದಲ್ಲಿ ಮದನ್‌ಪಟೇಲ್ ಅವರು ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವುದಲ್ಲದ್ದೆ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ನೂತನ ಪ್ರತಿಭೆಗಳನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ. ಜೆ.ಜಿ.ಕೃಷ್ಣ ಛಾಯಾಗ್ರಹಣ, ಸಂಪತ್‌ರಾಜ್ ನೃತ್ಯ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಕಂಚನ್, ಅರವಿಂದ್, ನಿಶಿತಗೌಡ, ವನಿತಾ, ಜೈಆಕಾಶ್, ರಕ್ಷಾ, ರವಿತೇಜ, ಆರ್ಯ, ಪ್ರಕಾಶ್, ಮಧುಗೋಮತಿ, ಸಂತೋಷ್, ದೇವಿಕಾ, ಅಭಿಷೇಕ್ ಮುಂತಾದವರಿದ್ದಾರೆ.


ಹಿನ್ನಲೆ ಸಂಗೀತದಲ್ಲಿ 'ನೀನ್ಯಾರೇ
ಧನುಷ್ ಅಂಡ್ ತೇಜಸ್ ಕ್ರಿಯೇಷನ್ಸ್ ಅವರ ನೂತನ ಕಾಣಿಕೆ ಶಶಿ ಸಿಂಧೂರ್ ನಿರ್ದೇಶನದ ನೀನ್ಯಾರೇ ಚಿತ್ರಕ್ಕೆ ನಿಗದಿತ ಯೋಜನೆಯಂತೆ ಚಿತ್ರೀಕರಣ ಹಾಗೂ ಮಾತುಗಳ ಜೋಡಣೆ ಮುಗಿದಿದ್ದು ಪ್ರಸ್ತುತ ಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ಹಿನ್ನಲೆ ಸಂಗೀತ ಪ್ರಕ್ರಿಯೆ ನಡೆಯುತ್ತಿದೆ ಎಂದು ನಿರ್ಮಾಪಕರಾದ ಚಂದ್ರಶೇಖರ್, ನಾರಾಯಣಸ್ವಾಮಿ ಹಾಗೂ ವರದರೆಡ್ಡಿ ತಿಳಿಸಿದ್ದಾರೆ.

ಚೆಲುವ ಸೂರಜ್ ನಾಯಕನಾಗಿರುವ ಈ ಚಿತ್ರದಲ್ಲಿ ಬೆಡಗಿ ರಮ್ಯಬಾರ್ನೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಹೇಮಗಂಗ, ಚಿತ್ರಾಶೆಣೈ, ಓಂಪ್ರಕಾಶ್‌ರಾವ್, ಶರತ್‌ಬಾಬು, ತುಳಸಿ ಶಿವಮಣಿ, ವಿಶ್ವ, ಪವನ್ ಮುಂತಾದವರು ಇವರೊಂದಿಗಿದ್ದಾರೆ. ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ವಿ.ಮನೋಹರ್ ಅವರ ಸಂಗೀತವಿದೆ. ವಿಷ್ಣುವರ್ಧನ್ ಕ್ಯಾಮೆರಾ, ರವಿವರ್ಮ ಸಾಹಸ, ಸದಾ ನೃತ್ಯ, ಗೋವರ್ಧನ್ ಸಂಕಲನ, ರಾಜು ಕಲೆ ಹಾಗೂ ಸುಧೀಂದ್ರ(ಹೊಸಹಳ್ಳಿ) ನಿರ್ಮಾಣ ನಿರ್ವಹಣೆ ನೀನ್ಯಾರೇ ಚಿತ್ರಕ್ಕಿದೆ.

(ದಟ್ಸ್ ಸಿನಿವಾರ್ತೆ)

'ಹೀಗೂ ಉಂಟೆ' ಗಾರ್ಮೆಂಟ್ ಲೋಕದ ಸುತ್ತ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada