ದರ್ಶನ್ 'ಸಾರಥಿ' ಶತಕ ಸಂಭ್ರಮಕ್ಕೆ ಎಚ್ಡಿಕೆ, ಕ್ರೇಜಿಸ್ಟಾರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಸಾರಥಿ' ಚಿತ್ರ ಸೆಂಚುರಿ ಬಾರಿಸಿದೆ. ಈ ಶತಕ ಸಂಭ್ರಮ ಕಾರ್ಯಕ್ರಮಕ್ಕೆ ಹಾಲಿ ಸಂಸದ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರನ್ನು ಗೌರವಾನ್ವಿತ ಅತಿಥಿಗಳಾಗಿ ಆಹ್ವಾನಿಸಲಾಗಿದೆ.
'ಸಾರಥಿ' ಶತದಿನೋತ್ಸವ ಸಂಭ್ರಮ ಜನವರಿ 8ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಸದ್ಯಕ್ಕೆ ದರ್ಶನ್ ಮತ್ತೊಂದು ಭಾರಿ ಬಜೆಟ್ ಚಿತ್ರ 'ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ಸಾರಥಿ' ಶತದಿನೋತ್ಸವ ಸಂಭ್ರಮಕ್ಕೆ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇದಕ್ಕೂ ಮುನ್ನ ಜನವರಿ 2ರಂದು ದರ್ಶನ್ ಅಭಿನಯದ ಮತ್ತೊಂದು ಚಿತ್ರ 'ಚಿಂಗಾರಿ' ಆಡಿಯೋ ಬಿಡುಗಡೆಯಾಗಲಿದೆ. ಹರ್ಷ ನಿರ್ದೇಶನದ ಚಿತ್ರ ಇದಾಗಿದೆ. ಇನ್ನು 'ಸಾರಥಿ' ಶತದಿನೋತ್ಸವ ಕಾರ್ಯಕ್ರಮದಲ್ಲಿ ಚಿತ್ರದ ತಂತ್ರಜ್ಞರು, ಕಲಾವಿದರೆಲ್ಲರೂ ಭಾಗವಹಿಸಲಿದ್ದಾರೆ. (ಏಜೆನ್ಸೀಸ್)
More from Filmibeat
English summary
Challenging star Darshan lead Kannada movei Sarathi has completed the 100days recently. The movie celebrated the 100days function Bangalore with Karnataka State Janata Dal President and Member of Parliament H.D.Kumaraswamy as a guest, Crazy Stare Ravichandran and the total film unit members have attended the function.


Click it and Unblock the Notifications











