ದಾಂಪತ್ಯ ಜೀವನಕ್ಕೆ ಮಾಸ್ಟರ್ ಆನಂದ್ ಪ್ರವೇಶ
ಮಾಸ್ಟರ್ ಆನಂದ್ ಎಂದೇ ಜನಪ್ರಿಯರಾಗಿರುವ ನಟ ಎಚ್ ಆನಂದ್ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ನಂಜನಗೂಡಿನ ಹುಡುಗಿ ಯಶಸ್ವಿನಿ ಜೊತೆ ಆನಂದ್ ಮದುವೆ ಮಾರ್ಚ್ 18ರಂದು ಬೆಂಗಳೂರಿನಲ್ಲಿ ನಡೆದಿತ್ತು. ಮಾರ್ಚ್ 21ರ ಭಾನುವಾರ ಬೆಂಗಳೂರು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಸಿದ್ಧಗಂಗ ಸಾಮೂಹಿಕ ಭವನದಲ್ಲಿ ಆರತಕ್ಷತೆ ಕಾರ್ಯಕ್ರಮ ನೆರವೇರಿದೆ.
ನಂಜನಗೂಡಿನ ಮಂಜುಳ ಮತ್ತು ಚಂದ್ರಶೇಖರ್ ಅವರ ಏಕ ಮಾತ್ರ ಪುತ್ರಿ ಯಶಸ್ವಿನಿ. ಈಗಷ್ಟೆ ಬಿಎಸ್ಸಿ ಮುಗಿಸಿರುವ ಈಕೆ ನಟ ಆನಂದ್ ರನ್ನು ವರಿಸಿದ್ದಾರೆ.ಚಿತ್ರರಂಗದಲ್ಲಿರುವ ಹುಡುಗಿ ಬೇಡ ಎಂದು ಆನಂದ್ ಮೊದಲೆ ನಿರ್ಧರಿಸಿದ್ದರು. ಹಾಗಾಗಿ ಚಿತ್ರರಂಗದೊಂದಿಗೆ ಯಾವುದೇ ರೀತಿಯಲ್ಲು ಸಂಬಂಧವಿಲ್ಲದ ಯಶಸ್ವಿನಿಯ ಕೈಹಿಡಿದ್ದಾರೆ ಅನಂದ್.
ಬಾಲ ಕಲಾವಿದನಾಗಿ ಬೆಳ್ಳಿತೆರೆಗೆ ಅಡಿಯಿಟ್ಟ ಆನಂದ್ ಗಣೇಶನ ಹೆಸರಿನ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಬಳಿಕ 'ಫ್ರೆಂಡ್ಸ್' ಹಿಟ್ ಚಿತ್ರದ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ಪರಿಚಯ, ಜ್ಯೇಷ್ಠ, ಗೌರಿ ಗಣೇಶ, ರಾಣಿ ಮಹಾರಾಣಿ, ಬೆಳ್ಳಿ ಕಾಲುಂಗುರ, ಶುಭಲಗ್ನ, ಪ್ರೀತಿಗಾಗಿ, ಮುತ್ತಿನ ಹಾರ, ಹುಷಾರ್ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
''ಎಸ್ಸೆಸ್ಸೆಲ್ಸಿ ನನ್ ಮಕ್ಳು'' ಧಾರಾವಾಹಿಯನ್ನು ನಿರ್ದೇಶಿಸುವ ಮೂಲಕ ಆನಂದ್ ಕಿರುತೆರೆಯಲ್ಲೂ ತೊಡಗಿಕೊಂಡಿದ್ದಾರೆ. ಒಟ್ಟಿನಲ್ಲಿ ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಆನಂದ್ ಮತ್ತು ಯಶಸ್ವಿನಿ ದಂಪತಿಗಳಿಗೆ ಶುಭ ಹಾರೈಸೋಣ


Click it and Unblock the Notifications











