ಕ್ರೇಜಿಸ್ಟಾರ್‌ಗೆ ಸಿಕ್ಕಿದಳು ಹೊಸ ಹೀರೋಯಿನ್ ನಿಕೇಶಾ
ತಮ್ಮ ಚಿತ್ರಗಳಲ್ಲಿ ವಿಭಿನ್ನ ನಾಯಕಿಯರನ್ನು ಪರಿಚಯಿಸಿರುವ ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಈಗ ಹೊಸ ನಾಯಕಿ ಸಿಕ್ಕಿದ್ದಾರೆ. ಹೆಸರು ನಿಕೇಶಾ ಪಟೇಲ್. ಇತ್ತೀಚೆಗಷ್ಟೇ ಸೆಟ್ಟೇರಿದ'ನರಸಿಂಹ' ಚಿತ್ರದಲ್ಲಿ ನಿಕಿಶಾ ನಟಿಸಲಿದ್ದಾರೆ. ಈ ಚಿತ್ರ ತೆಲುಗಿನ 'ಸಿಂಹ ರಾಶಿ'ಯ ಭಾಗಶಃ ರೀಮೇಕ್ ಅಂತೆ.
ಮುಂಬೈ ಮೂಲದ ನಿಕೇಶಾ ಈಗಾಗಲೆ ತೆಲುಗಿನಲ್ಲಿ ಪವನ್ ಕಲ್ಯಾಣ್ ಜತೆ 'ಕೋಮರಂ ಪುಲಿ' ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಆದರೆ ಆ ಚಿತ್ರ ಹೇಳ ಹೆಸರಿಲ್ಲದಂತಾಗಿದ್ದು ಬೇರೆ ಕಥೆ. ತಮಿಳಿನ 'ನನ್‌ಬ' ಎಂಬ ಚಿತ್ರದಲ್ಲೂ ಅಭಿನಯಿಸಿರುವ ನಿಕೇಶಾ ಈಗ ಕ್ರೇಜಿಸ್ಟಾರ್ ಚಿತ್ರದ ಮೂಲಕ ಕನ್ನಡಕ್ಕೆ ಅಡಿಯಿಟ್ಟಿದ್ದಾರೆ.
ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಒಂದು ಕಾಲದ ಯಶಸ್ವಿ ಜೋಡಿ ಅನ್ನಿಸಿಕೊಂಡಿದ್ದ ಹಂಸಲೇಖ ಮತ್ತು ರವಿಚಂದ್ರನ್ ಏಳು ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿರುವುದು. ಚಿತ್ರದಲ್ಲಿ ಐದು ಲವ್ಲಿ ಹಾಡುಗಳಿದ್ದು ಹಂಸಲೇಖ ಮತ್ತೊಮ್ಮೆ ಪ್ರೇಮ ಲೋಕಕ್ಕೆ ಕರೆದೊಯ್ಯಲಿದ್ದಾರೆಯೇ ಎಂಬ ನಿರೀಕ್ಷೆಯಲ್ಲಿ ಪ್ರೇಕ್ಷಕರು ಇದ್ದಾರೆ. ಎನ್ ಕುಮಾರ್ ನಿರ್ಮಿಸುತ್ತಿರುವ ಚಿತ್ರಕ್ಕೆ ಆಕ್ಷನ್,ಕಟ್ ಹೇಳುತ್ತಿರುವವರು ಮೋಹನ್.


Click it and Unblock the Notifications











