ಮಾ.ಹಿರಣ್ಣಯ್ಯ ಹಾಗೂ ಉಮಾಶ್ರೀಗೆ ಎನ್ಟಿಆರ್ ಪ್ರಶಸ್ತಿ
ಜನಪ್ರಿಯ ನಟಿ ಉಮಾಶ್ರೀ ಹಾಗೂ ರಂಗಭೂಮಿಯ ಹಿರಿಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರಿಗೆ ಎನ್ಟಿಆರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ತೆಲುಗು ಅಕಾಡೆಮಿ ಹಾಗೂ ಬೆಂಗಳೂರು ಡಾ.ಎನ್ ಟಿ ಆರ್ ಅಭಿಮಾನಿಗಳ ಸಂಘ ಜಂಟಿ ಈ ಪ್ರಶಸ್ತಿಯನ್ನು ನೀಡುತ್ತಿದೆ.
ತೆಲುಗಿನ ಖ್ಯಾತ ನಟ ಎನ್ ಟಿ ರಾಮಾರಾವ್ ಅವರ 88ನೇ ಜಯಂತಿಯ ಅಂಗವಾಗಿ ಮೇ.28ರಂದು ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಅಂದು ಸಂಜೆ 6ಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರ ಗೌಡ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಈ ವಿಷಯವನ್ನು ತೆಲುಗು ಅಕಾಡೆಮಿ ಅಧ್ಯಕ್ಷ ಡಾ.ಎ.ರಾಧಾಕೃಷ್ಣರಾಜು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಪಾಲ್ಗೊಳ್ಳಲಿದ್ದಾರೆ.
More from Filmibeat
ಮಾಸ್ಟರ್ ಹಿರಣ್ಣಯ್ಯ್ಯ ಉಮಾಶ್ರೀ ಎನ್ಟಿಆರ್ ಪ್ರಶಸ್ತಿ ರವೀಂದ್ರ ಕಲಾಕ್ಷೇತ್ರ ರಾಮಚಂದ್ರ ಗೌಡ ತೆಲುಗು ಅಕಾಡೆಮಿ master hirannaiah umashree ntr award telugu academy ravindra kalakshetra ramachandra gowda


Click it and Unblock the Notifications











