ಪ್ರಕಾಶ್ ರೈ ಬಾಳ ಸಂಗಾತಿಯಾಗಿ ಪೋನಿ ವರ್ಮಾ

By Rajendra

ಕನ್ನಡ, ತೆಲುಗು, ತಮಿಳು ಚಿತ್ರರಂಗದ ಹೆಸರಾಂತ ನಟ ಪ್ರಕಾಶ್ ರೈ ಮಂಗಳವಾರ ನೂತನ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಬಾಲಿವುಡ್ ನೃತ್ಯ ನಿರ್ದೇಶಕಿ ಪೋನಿ ವರ್ಮಾ ಜೊತೆ ಪ್ರಕಾಶ್ ರೈ ಮದುವೆ ಮುಂಬೈನ ಸಹರಾ ಸ್ಟಾರ್ ಹೋಟೆಲ್ ನಲ್ಲಿ ನೆರವೇರಿತು.

ಕನ್ನಡಿಗರಾದ ಪ್ರಕಾಶ್ ರೈ ಮದುವೆ ಪಂಜಾಬಿ ಸಂಪ್ರದಾಯದಂತೆ ನಡೆಯಿತು. ಬಾಲಿವುಡ್ ಮತ್ತು ತೆಲುಗು ಚಿತ್ರರಂಗದ ತಾರೆಗಳು ಪ್ರಕಾಶ್ ರೈ ಮದುವೆಗೆ ಸಾಕ್ಷಿಯಾದರು. ಇದೇ ಹೋಟೆಲ್ ನಲ್ಲಿ ಮಂಗಳವಾರ ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ಮದುವೆ ಬಳಿಕ ಪ್ರಕಾಶ್ ರೈ ಮುಂಬೈನಲ್ಲಿ ನೆಲೆಸರು ತೀರ್ಮಾನಿಸಿದ್ದಾರೆ. ಅವರು ಇತ್ತೀಚೆಗೆ ಮುಂಬೈನ ಜುಹು ಪ್ರದೇಶದಲ್ಲಿ ಮನೆಯೊಂದನ್ನು ಖರೀದಿಸಿದ್ದರು. ಪ್ರಕಾಶ್ ರೈ ಮಧುಚಂದ್ರವನ್ನು ಕುಲು ಮನಾಲಿಯಲ್ಲಿ ಆಚರಿಸಿಕೊಳ್ಳಲಿದ್ದಾರೆ.

ಚೆನ್ನೈ ಮತ್ತು ಹೈದರಾಬಾದ್ ನಲ್ಲೂ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಪ್ರಕಾಶ್ ರೈ ಅವರ ತಾಯಿಯ ಇಚ್ಛೆಯಂತೆ ಮುಂದಿನ ತಿಂಗಳು ಇವರು ಚರ್ಚ್ ನಲ್ಲೂ ಮತ್ತೊಮ್ಮೆ ಮದುವೆಯಾಗಲಿದ್ದಾರೆ ಎನ್ನುತ್ತವೆ ಮೂಲಗಳು. ನೂತನ ದಾಂಪತ್ಯಕ್ಕೆ ಅಡಿಯಿಟ್ಟಿರುವ ಪ್ರಕಾಶ್ ರೈ ಅವರಿಗೆ ಶುಭಾಶಯಗಳು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X